ಮೈಸೂರು: ಫೇಸ್ ಬುಕ್ ಖಾತೆಯಲ್ಲಿ ಬಾಲಕನ ಅಶ್ಲೀಲ ವಿಡಿಯೋ ಹಾಗೂ ಪುರುಷರ ನಡುವಿನ ಲೈಂಗಿಕ ಕ್ರಿಯೆ ವಿಡಿಯೋವನ್ನು ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್. ದಿಲೀಪ್ ಅರೆಸ್ಟ್ ಆದ ವ್ಯಕ್ತಿ. ದಿಲೀಪ್ ಮೈಸೂರಿನ ಜೆಪಿ ನಗರದ ನಿವಾಸಿಯಾಗಿದ್ದು, ಬಾಲಕನ ಅಶ್ಲೀಲ ವಿಡಿಯೋ ಹಾಗೂ ಪುರುಷರ ಸೆಕ್ಸ್ ವಿಡಿಯೋವನ್ನು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದನು. ಹೀಗಾಗಿ ಪೊಲೀಸರು ದಿಲೀಪ್ನನ್ನು ಬಂಧಿಸಿದ್ದಾರೆ.
Advertisement
Advertisement
ಆರೋಪಿ ದಿಲೀಪ್ ಮೇಲೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳ ತಡೆ ಹಾಗೂ ರಾಷ್ಟ್ರೀಯ ಸೈಬರ್ ಪೊರ್ಟಲ್ ಗಳಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸೈಬರ್ ಠಾಣೆ ಪೊಲೀಸರು ಆರೋಪಿ ದಿಲೀಪ್ನನ್ನು ಬಂಧಿಸಿದ್ದಾರೆ.
Advertisement
ಈ ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧ ಠಾಣೆ ಇನ್ಸ್ಪೆಕ್ಟರ್ ಎನ್.ಜಿ ಕೃಷ್ಷಪ್ಪ, ಎಎಸ್ಐ ಕೆ.ಜಿ ನಿರಂಜನ್, ಸಿಬ್ಬಂದಿಯಾದ ಎಂ. ಶಿವಶಂಕರ್, ಎಸ್. ರವಿಕುಮಾರ್, ವಿ.ಎ. ಮಧು, ಎಂ.ಬಿ.ನಾಗರಾಜ್, ನಂಜುಂಡ, ಶಿವಕುಮಾರ್, ವೀಣಾ, ನಾಗರತ್ನ ಭಾಗಿಯಾಗಿದ್ದರು.