ನ್ಯೂಯಾರ್ಕ್: 18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಫೇಸ್ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ಬಹಿರಂಗಪಡಿಸಿದೆ.
Advertisement
Advertisement
ಮೇಟಾ ಹಣಕಾಸು ಅಧಿಕಾರಿ ಡೇವಿಡ್ ವೆಹ್ನಾರ್ ಹೇಳವ ಪ್ರಕಾರ, ಭಾರತದಲ್ಲಿ ಡೇಟಾ ಪ್ಯಾಕೇಜ್ ಬೆಲೆಯಲ್ಲಿನ ಹೆಚ್ಚಳವಾಗಿದೆ. ಹೀಗಾಗಿ ಒಟ್ಟಾರೆಯಾಗಿ ದೇಶದಾದ್ಯಂತ ಫೇಸ್ಬುಕ್ ಬಳಕೆದಾರರ ಸಂಖ್ಯೆಯು ಕೂಡಾ ಕಡಿಮೆಯಾಗುತ್ತಾ ಬರುತ್ತಿದೆ. ನಾವು ಈ ಅಂಶಗಳ ಜೊತೆಗ ಸ್ಪರ್ಧೆಯನ್ನು ಮಾಡಬೇಕಾಗಿದೆ. ಈ ಬೆಳವಣೆಗೆ ಹೊಸ ಬಳಕೆದಾರರ ಮೇಲೆ ನೆಗಿಟಿವ್ ಪ್ರಭಾವಬೀರುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಏರ್ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ನೆಟ್ವರ್ಕ್ಗಳು ತಮ್ಮ ಡಾಟಾ ಪ್ಲ್ಯಾನ್ ಬೆಲೆಯಲ್ಲಿ ಹೆಚ್ಚಳ ಮಾಡಿವೆ. ಹೀಗಾಗಿ ಕೆಲವು ಬಳಕೆ ದಾರರ ಮೇಲೆ ಡಾಟಾ ಪ್ಲ್ಯಾನ್ ಬೆಲೆ ಹೆಚ್ಚಳದ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.
ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ. ಟಿಕ್ಟಾಕ್ ಮತ್ತು ಯೂಟ್ಯೂಬ್ನಿಂದ ಹೆಚ್ಚಿದ ಸ್ಪರ್ಧೆ ನೀಡುತ್ತಿದೆ. ಇದರಿಂದ ಫೇಸ್ಬುಕ್ ಜಾಹೀರಾತುಗಳು ಕಡಿಮೆಯಾಗಬಹುದಾದ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ
ಬಳಕೆದಾರರ ಸಂಖ್ಯೆ ಕಡಿಮೆಯಾಗಿದ ವಿಚಾರ ತಿಳಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಮೆಟಾ ಷೇರುಗಳು ಶೇ.23ರಷ್ಟು ಕುಸಿಸಿದ್ದು, ಕಂಪನಿಗೆ ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಭಾರತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳು ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೆಟ್ಟಹೆಸರು ತರುತ್ತಿವೆ. ಆದರೆ ಇವನ್ನು ನಕಲಿ ಸುದ್ದಿಗಳು ಎಂದು ಗುರುತಿಸಿ ತೆಗೆದುಹಾಕುವಂತೆ ಹೇಳಿದರೂ ಅದನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಗೂಗಲ್, ಟ್ವೀಟರ್, ಫೇಸ್ಬುಕ್ ಹಾಗೂ ಇತರ ಕೆಲವು ಸಾಮಾಜಿಕ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ನಿಂದ ಕಾರು ಗ್ಯಾರೇಜ್ ಧಗಧಗ – 3 ಬೈಕ್, 2 ಕಾರು ಸುಟ್ಟು ಕರಕಲು
ಅಲ್ಲದೆ, ಸುಳ್ಳು ಸುದ್ದಿ ತಡೆಯದಿದ್ದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಸಂಬಂಧ ಸೋಮವಾರ ಈ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳ ಅಧಿಕಾರಿಗಳ ಜೊತೆ ವರ್ಚುವಲ್ ಸಭೆ ನಡೆಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು, ಕಂಪನಿಗಳ ನಿರ್ಲಕ್ಷ್ಯವನ್ನು ಬಲವಾಗಿ ಟೀಕಿಸಿ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.