ನವದೆಹಲಿ: ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್‍ಬುಕ್(facebook) ತನ್ನ ಹೆಸರನ್ನು ಬದಲಿಸಲು ಚಿಂತಿಸಿದ್ದು, ಹೊಸ ಹೆಸರಿನೊಂದಿಗೆ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ.
ಫೇಸ್‍ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್‍ಜುಕರ್ ಬರ್ಗ್(Mark Zuckerberg) ಅಕ್ಟೋಬರ್ 28 ರಂದು ನಡೆದ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಶೀಘ್ರದಲ್ಲಿ ಹೊಸ ಹೆಸರು ನಾಮಕರಣ ಮಾಡುವ ಸಾಧ್ಯತೆಗಳಿದೆ ಎಂದು ವರ್ಜ್ ವರದಿ ಮಾಡಿದೆ.ಇದನ್ನೂ ಓದಿ: ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ – ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ
Advertisement
Advertisement
ಹೆಸರು ಬದಲಾವಣೆ ಸುದ್ದಿ ಜೋರಾಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫೇಸ್‍ಬುಕ್ ಈ ರೀತಿಯ ಯಾವುದೇ ಬೆಳವಣಿಗೆಗಳಿಲ್ಲ ಇದೊಂದು ಊಹಪೂಹಾದ ಸುದ್ದಿ ಎಂದು ಹೇಳಿದೆ. ಇದನ್ನೂ ಓದಿ: ಮೃತ ರೈತರಿಗೆ ಗೌರವ ಸಲ್ಲಿಸಿದ ಪ್ರಿಯಾಂಕಾ ಗಾಂಧಿ – ಲಖೀಂಪುರ್ ಖೇರಿಯಲ್ಲಿ ಭಾರಿ ಭದ್ರತೆ
Advertisement
Advertisement
ಆದರೆ ಮೂಲಗಳ ಪ್ರಕಾರ ಫೇಸ್‍ಬುಕ್ ಮೇಲೆ ಕ್ಯಾಲಿಪೋನಿಯ ಸರ್ಕಾರ ಪರಿಶೀಲನೆ ಹೆಚ್ಚಿಸುತ್ತಿದ್ದು, ಈ ನಡುವೆ ಹಲವು ವಿವಾದಗಳಿಗೆ ಫೇಸ್‍ಬುಕ್ ಕಾರಣವಾಗಿದೆ. ಈಗ ಹೆಸರು ಬದಲಿಸುವ ಮೂಲಕ ತನ್ನ ಅಡಿಯಲ್ಲಿರುವ ಇನ್‍ಸ್ಟಾಗ್ರಾಮ್, ವಾಟ್ಸಾಪ್ ಸೇರಿದಂತೆ ಹಲವು ಕಂಪನಿಗಳನ್ನು ಪುನಶ್ಚೇತನ ಮಾಡಲು ಚಿಂತಿಸಲಾಗಿದೆ ಎನ್ನಲಾಗಿದೆ.ಇದನ್ನೂ ಓದಿ: ಬ್ಲೂ ಫಿಲಂಗಳ ಬಗ್ಗೆ ಹೆಚ್‍ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ: ಅಶ್ವಥ್ ನಾರಾಯಣ
ಯುರೋಪಿಯನ್ ಒಕ್ಕೂಟದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿರುವ ಫೇಸ್‍ಬುಕ್, ಮತ್ತಷ್ಟು ಜನರನ್ನು ಸೆಳೆಯುವ ಲೆಕ್ಕಕಾಗಿ ಫೇಸ್‍ಬುಕ್ ವರ್ಚುವಲ್ ರಿಯಾಲಿಟಿ (ವಿಆರ್), ವರ್ಧಿತ ರಿಯಾಲಿಟಿರಿಯಾಲಿಟಿ (ಎಆರ್ ) ಮೇಲೆ ಹೂಡಿಕೆ ಮಾಡಿದೆ.