-ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೋ ಶೇರ್
ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೋ ಶೇರ್ ಮಾಡಿರುವ ರಾಹುಲ್ ಗಾಂಧಿಯ ಪೋಸ್ಟ್‌ನ್ನು ಫೇಸ್‍ಬುಕ್ ತೆಗೆದು ಹಾಕಿದೆ.
ನವದೆಹಲಿಯ ಸ್ಮಶಾನದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮತ್ತು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದ ಒಂಬತ್ತು ವರ್ಷದ ದಲಿತ ಹುಡುಗಿಯ ಕುಟುಂಬದ ಚಿತ್ರಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಎನ್‌ಸಿಪಿಸಿಆರ್‌ನ ಆಗಸ್ಟ್ 10, 2021 ರ ಸೂಚನೆ ಪ್ರಕಾರ ನಿಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ನೀವು ಅಪ್‍ಲೋಡ್ ಮಾಡಿದ ಪೋಸ್ಟ್, ಬಾಲನ್ಯಾಯ ಕಾಯ್ದೆ 2015 ರ ಸೆಕ್ಷನ್ 74 ರ ಅಡಿಯಲ್ಲಿ, ಪೋಕ್ಸೊ, 2012 ರ ಸೆಕ್ಷನ್ 23 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಎ ಅಡಿಯಲ್ಲಿ ಕಾನೂನುಬಾಹಿರವಾಗಿದೆ. ಎನ್‌ಸಿಪಿಸಿಆರ್‌ನ ಸೂಚನೆಗೆ ಅನುಸಾರವಾಗಿ, ಈ ಪೋಸ್ಟ್ ಅನ್ನು ತ್ವರಿತವಾಗಿ ತೆಗೆದುಹಾಕಲು ನಿಮ್ಮನ್ನು ವಿನಂತಿಸಲಾಗಿದೆ, ಎಂದು ಫೇಸ್ ಬುಕ್ ರಾಹುಲ್ ಗಾಂಧಿಗೆ ಇಮೇಲ್ ಕಳುಹಿಸಿತ್ತು. ಇದನ್ನೂ ಓದಿ: ಕರ್ನಾಟಕ ಕಟ್ಟುವಲ್ಲಿ ದಿ.ದೇವರಾಜ ಅರಸು ಪಾತ್ರ ಹಿರಿದು: ಬೊಮ್ಮಾಯಿ
Advertisement
View this post on Instagram
Advertisement
ಎನ್‍ಸಿಪಿಸಿಆರ್ ಈ ಹಿಂದೆ ಫೇಸ್‍ಬುಕ್‍ಗೆ ಪತ್ರ ಬರೆದು, ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಕೇಳಿತ್ತು. ಮೂರು ದಿನಗಳ ನಂತರ, ಆಗಸ್ಟ್ 13 ರಂದು, ಅದು ತನ್ನ ನೋಟಿಸ್‍ಗೆ ಯಾವುದೇ ಪ್ರತಿಕ್ರಿಯೆಯಿಲ್ಲದ ಕಾರಣ ತನ್ನ ಪ್ರತಿನಿಧಿಗಳನ್ನು ಖುದ್ದಾಗಿ ಹಾಜರಾಗುವಂತೆ ಫೇಸ್‍ಬುಕ್‍ಗೆ ಸಮನ್ಸ್ ಜಾರಿ ಮಾಡಿತು. ಫೇಸ್‍ಬುಕ್ ರಾಹುಲ್‍ಗೆ ಪತ್ರ ಬರೆದು ಎನ್‍ಸಿಪಿಸಿಆರ್‍ಗೆ ಪತ್ರದ ಪ್ರತಿಯನ್ನು ನೀಡಿದ ನಂತರ, ಮಕ್ಕಳ ಹಕ್ಕುಗಳ ಸಮಿತಿಯು ಅದನ್ನು ಸಮನ್ಸ್ ನಿಂದ ವಿನಾಯಿತಿ ನೀಡಿತು. ಇದನ್ನೂ ಓದಿ: ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿದೆ ರೆಸಿಡೆನ್ಸಿಯಲ್ ಟೌನ್‍ಶಿಪ್: ನಿರಾಣಿ
Advertisement
Advertisement
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೈಕ್ರೋ ಬ್ಲಾಗಿಂಗ್ ತಾಣಕ್ಕೆ ನೋಟಿಸ್ ನೀಡಿ ಟ್ವೀಟ್ ಅನ್ನು ತೆಗೆದುಹಾಕುವಂತೆ ಕೇಳಿದ ನಂತರ, ಹುಡುಗಿಯ ಪೋಷಕರ ಛಾಯಾಚಿತ್ರವನ್ನು ಹೊಂದಿದ್ದ ಗಾಂಧಿಯವರ ಟ್ವೀಟ್‍ನ್ನು ಟ್ವಿಟ್ಟರ್ ಅಳಿಸಿತ್ತು. ಅದೇ ವೇಳೆ ತಾತ್ಕಾಲಿಕವಾಗಿ ರಾಹುಲ್ ಟ್ವಿಟರ್ ಖಾತೆಯನ್ನು ಲಾಕ್ ಮಾಡಿತ್ತು. ಇದೀಗ ರಾಹುಲ್ ಗಾಂಧಿಯ ಪೋಸ್ಟ್‌ನ್ನು ಫೇಸ್‍ಬುಕ್, ಇನ್ ಸ್ಟಾಗ್ರಾಮ್‍ನ ನೀತಿಗಳನ್ನು ಉಲ್ಲಂಘಿಸಿದೆ ಎಂದು ಫೇಸ್‍ಬುಕ್ ಸಂಸ್ಥೆ ಈ ಎರಡೂ ಜಾಲತಾಣಗಳಿಂದ ಈ ಪೋಸ್ಟ್‌ನ್ನು ತೆಗೆದುಹಾಕಿದೆ. ನೀತಿ ಉಲ್ಲಂಘನೆಯಿಂದಾಗಿಯೇ ಪೋಸ್ಟ್ ತೆಗೆದುಹಾಕಲಾಗಿದೆ ಎಂದು ಫೇಸ್ ಬುಕ್ ಸಂಸ್ಥೆ ರಾಹುಲ್ ಗಾಂಧಿಗೆ ತಿಳಿಸಿದೆ.