ಬೆಂಗಳೂರು: ವಿಶ್ವದ ನಂಬರ್ ಒನ್ ಸಾಮಾಜಿಕ ಜಾಲತಾಣ ಕಂಪನಿ ಫೇಸ್‍ಬುಕ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಮುಂದಾಗಿದೆ. ಬೆಂಗಳೂರಿನ ಎಂಬೆಸಿ ಗಾಲ್ಫ್ ಲಿಂಕ್ ನಲ್ಲಿ 2.2 ಲಕ್ಷ ಚದರ ಅಡಿ ಜಾಗದಲ್ಲಿ ಕಂಪನಿ ಸ್ಥಾಪನೆಯಾಗಲಿದ್ದು, ಒಟ್ಟು 2,200 ಜನರಿಗೆ ಉದ್ಯೋಗ ನೀಡಲು ತಯಾರಿ ನಡೆದಿದೆ.
ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ಚಲ್ಲಘಟ್ಟ ಬಳಿ ಎಂಬೆಸಿ ಗಾಲ್ಫ್ ಲಿಂಕ್ ಇದ್ದು ಈಗಾಗಲೇ ಇಲ್ಲಿ ಮೈಕ್ರೋ ಸಾಫ್ಟ್, ಐಬಿಎಂ, ಗೋಲ್ಡ್ ಮ್ಯಾನ್ ಸ್ಯಾಚ್ ಕಂಪನಿಯಿದೆ. ಒಂದು ಚದರ ಅಡಿಗೆ 130 ರೂ. ನಂತೆ ವರ್ಷಕ್ಕೆ ಫೇಸ್‍ಬುಕ್ 34 ಕೋಟಿ ರೂ. ಬಾಡಿಗೆ ನೀಡಲಿದೆ ಎಂದು ವರದಿಯಾಗಿದೆ.
Advertisement
Advertisement
ಫೇಸ್‍ಬುಕ್ ಆಗಮನದೊಂದಿಗೆ ಜಗತ್ತಿನ ಐದು ಟೆಕ್ ಕಂಪನಿಗಳನ್ನು ಒಳಗೊಂಡ ಭಾರತದ ನಗರ ಎನ್ನುವ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್, ಆಪಲ್ ಕಂಪನಿಗಳಿವೆ.
Advertisement
2010ರಲ್ಲಿ ಹೈದರಾಬಾದಿನಲ್ಲಿ ಕಚೇರಿ ಆರಂಭಿಸಿದ ಫೇಸ್‍ಬುಕ್, ಕಳೆದ ವರ್ಷ ದೆಹಲಿಯಲ್ಲೂ ಕಚೇರಿ ಆರಂಭಿಸಿತ್ತು. ಮೂರು ವರ್ಷದ ಹಿಂದೆ ಮುಂಬೈನಲ್ಲೂ ಕಚೇರಿಯನ್ನು ತೆರೆದಿತ್ತು. ಐಫೋನ್ ತಯಾರಕ ಆಪಲ್ ಕಪನಿ ಯಲಹಂಕ ಬಳಿ 50 ಸಾವಿರ ಚದರ ಅಡಿ ಜಾಗವನ್ನು ಲೀಸ್ ಗೆ ಪಡೆದುಕೊಂಡಿದ್ದರೆ, ಬಾಗ್ಮನೆ ಟೆಕ್ ಪಾರ್ಕ್ ನಲ್ಲಿ ಗೂಗಲ್ ಕಚೇರಿಯಿದೆ.
Advertisement
ಕಚೇರಿ ಯಾಕೆ?
ಭಾರತದಲ್ಲಿ ಫೇಸ್‍ಬುಕ್ ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾರತದಲ್ಲಿ ಒಟ್ಟು 25 ಕೋಟಿ ಜನರು ಫೇಸ್ ಬುಕ್ ಬಳಸುತ್ತಿದ್ದಾರೆ. ಜೂನ್ 30ಕ್ಕೆ ಅಂತ್ಯವಾದ ಎರಡನೇ ತ್ರೈಮಾಸಿಕದಲ್ಲಿ ಸಕ್ರೀಯ ಫೇಸ್ ಬುಕ್ ಬಳಕೆದಾರರ ಸಂಖ್ಯೆ 147 ಕೋಟಿ ದಾಟಿದೆ. ಭಾರತ, ಇಂಡೋಷೇಷ್ಯಾ, ಫಿಲಿಪೈನ್ಸ್ ನಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.11 ರಷ್ಟು ಬೆಳವಣಿಗೆ ಹೆಚ್ಚಾಗಿದೆ ಎಂದು ಫೇಸ್‍ಬುಕ್ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv