– ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿ ಆತ್ಮಹತ್ಯೆಗೆ ಯತ್ನ
ಮಂಡ್ಯ: ಫೇಸ್‍ಬುಕ್ ಪ್ರಿಯಕರನಿಗಾಗಿ ಮಹಿಳೆಯೊಬ್ಬಳು ತನ್ನ ತಾಯಿ ಹಾಗೂ ಮಗನನ್ನು ಬಿಟ್ಟು ಆತನ ಜೊತೆ ಓಡಿ ಹೋಗಿದ್ದಾಳೆ. ಮಗಳ ಮೇಲಿನ ಸಿಟ್ಟಿಗೆ ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಮಾರುತಿ ನಗರದಲ್ಲಿ ನಡೆದಿದೆ.
ಪ್ರಜ್ವಲ್ (11) ದಾರುಣವಾಗಿ ಮೃತಪಟ್ಟ ಬಾಲಕ. ಇತ್ತೀಚೆಗೆ ಮಗಳು ಲಕ್ಷ್ಮೀ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಇದರಿಂದ ಮಾನಕ್ಕೆ ಅಂಜಿದ ಅಜ್ಜಿ ಮನನೊಂದು ಮೊಮ್ಮಗನನ್ನು ಕೊಂದು ತಾನೂ ಸಾಯಲು ನಿರ್ಧರಿಸಿದ್ದಾರೆ.
ಸೋಮವಾರ ಶಾಲೆಯಲ್ಲಿದ್ದ ಪ್ರಜ್ವಲ್‍ನ್ನು ಅಜ್ಜಿ ಕರೆದುಕೊಂಡು ಬಂದು ಸಿಂದಘಟ್ಟ ಕೆರೆಗೆ ತಳ್ಳಿದ್ದಾಳೆ. ಪ್ರಜ್ವಲ್‍ನನ್ನು ತಳ್ಳಿದ ಬಳಿಕ ಅಜ್ಜಿ ಕೆರೆಗೆ ಬೀಳುತ್ತಿದ್ದಂತೆಯೇ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಸದ್ಯ ಮೊಮ್ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಅಜ್ಜಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಕೆರೆಯಲ್ಲಿ ಮುಳುಗಿದ ಬಾಲಕನ ಮೃತ ದೇಹಕ್ಕಾಗಿ ಪೊಲೀಸರು ಕೆರೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.