ಕೊನೆ ಕ್ಷಣದಲ್ಲಿ ಬಿಪಿನ್‌ ರಾವತ್‌ ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು

Public TV
2 Min Read
bipin rawat 2

ಚೆನ್ನೈ: ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿ ಸಾವಿಗೆ ಕಾರಣವಾದ ಹೆಲಿಕಾಪ್ಟರ್‌ ದುರಂತದ ಸ್ಥಳದಲ್ಲಿ (ತಮಿಳುನಾಡು ನೀಲಗಿರಿ ಅರಣ್ಯ ಪ್ರದೇಶ), ರಾವತ್‌ ಅವರು ಜೀವಂತವಾಗಿದ್ದನ್ನು ನೋಡಿದ್ದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.

CDS Bipin Rawat

ನಿನ್ನೆ ಹೆಲಿಕಾಪ್ಟರ್‌ ದುರಂತವಾದಾಗ ಬಿಪಿನ್‌ ರಾವತ್‌ ಅವರ ಸ್ಥಿತಿ ಗಂಭೀರವಾಗಿತ್ತು. ಆ ಸಂದರ್ಭದಲ್ಲಿ ಅವರು ಇನ್ನೂ ಬದುಕಿದ್ದರು ಎಂದು ಘಟನಾ ಸ್ಥಳದ ಬಳಿಯ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡಿಕೊಂಡಿರುವ ಸ್ಥಳೀಯ ಶಿವ ಕುಮಾರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!

BIPIN RAWATH

ಶಿವ ಹಾಗೂ ಜೊತೆಗಿದ್ದವರು, ವಾಯುಪಡೆ ಹೆಲಿಕಾಪ್ಟರ್‌ ಪತನವಾಗಿದ್ದನ್ನು ಗಮನಿಸಿದ್ದಾರೆ. ಹೆಲಿಕಾಪ್ಟರ್‌ ಹೊತ್ತಿ ಉರಿಯುತ್ತಿದ್ದ ಸ್ಥಳಕ್ಕೆ ತಕ್ಷಣ ಧಾವಿಸಿದ್ದಾರೆ. ನಂತರ ಅವರು ಅಲ್ಲಿ ಕಂಡು ದೃಶ್ಯಾವಳಿಗಳ ಬಗ್ಗೆ ಹೀಗೆ ಹೇಳಿದ್ದಾರೆ. ಇದನ್ನೂ ಓದಿ: ಎಲ್ಲರೊಂದಿಗೆ ನಗುನಗ್ತಾ ಮಾತಾಡ್ತಿದ್ದ ಮಗನ ನಗು ಈಗ ನಮ್ಮಿಂದ ದೂರವಾಗಿದೆ: ಪೃಥ್ವಿ ಸಿಂಗ್ ಚೌಹಾಣ್ ತಂದೆ ಕಣ್ಣೀರು

Bipin Rawat

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಹೆಲಿಕಾಪ್ಟರ್‌ ಪತನವಾದ ಸ್ಥಳಕ್ಕೆ ತಕ್ಷಣ ಓಡಿ ಹೋದೆವು. ಅಲ್ಲಿ ಮೂವರ ಮೃತದೇಹಗಳು ಕಂಡವು. ಆದರೆ ಒಬ್ಬರು ಇನ್ನೂ ಜೀವಂತವಾಗಿರುವುದನ್ನು ಗಮನಿಸಿದೆವು. ಅವರು ನೀರು ಬೇಕು ಎಂದು ಕೇಳುತ್ತಿದ್ದರು. ಬೆಡ್‌ಶೀಟ್‌ವೊಂದರಲ್ಲಿ ಸಿಲುಕಿದ್ದ ಅವರನ್ನು ಹೊರಗೆಡೆ ಕರೆದುಕೊಂಡೆವು. ಈ ವೇಳೆ ಸಿಬ್ಬಂದಿ ಅವರನ್ನು ರಕ್ಷಿಸಿದರು. ಇದನ್ನೂ ಓದಿ: ಪತನಗೊಂಡ ಹೆಲಿಕಾಪ್ಟರ್‌ನಲ್ಲಿ ಬ್ಲ್ಯಾಕ್‌ ಬಾಕ್ಸ್ ಪತ್ತೆ- ಬಯಲಾಗುತ್ತಾ ದುರಂತದ ರಹಸ್ಯ?

BIPIN RAWAT WIFE

ಘಟನೆಯಾದ ಮೂರು ಗಂಟೆಗಳ ನಂತರ ಯಾರೋ ಒಬ್ಬರು ನನ್ನ ಬಳಿಗೆ ಬಂದು, ನೀನು ಮಾತನಾಡಿದ್ದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಅವರೊಂದಿಗೆ ಎಂದು ತಿಳಿಸಿದರು. ಜೊತೆಗೆ ಅವರ ಫೋಟೋವನ್ನು ನನಗೆ ತೋರಿಸಿದರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ- ಪ್ರಾಣ ಕಳೆದುಕೊಂಡ ವಿವೇಕ್ ಕುಮಾರ್‌ಗಿದೆ 2 ತಿಂಗಳ ಪುಟ್ಟ ಕಂದಮ್ಮ

helicopter

ಈ ಗಣ್ಯ ವ್ಯಕ್ತಿ ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂಬುದು ನನಗೆ ಅಲ್ಲಿಯವರೆಗೂ ತಿಳಿದಿರಲೇ ಇಲ್ಲ. ಕೊನೆ ಕ್ಷಣದಲ್ಲಿ ಅವರಿಗೆ ನೀರನ್ನು ಸಹ ನನ್ನಿಂದ ಕೊಡಲಾಗಲಿಲ್ಲ. ಇದನ್ನು ನೆನೆದು ನಿನ್ನೆ ಪೂರ್ತಿ ನಾನು ನಿದ್ರೆಯನ್ನೇ ಮಾಡಿಲ್ಲ ಎಂದು ಪ್ರತ್ಯಕ್ಷದರ್ಶಿ ಶಿವ ಕುಮಾರ್‌ ದುಃಖದಿಂದ ನುಡಿದಿದ್ದಾರೆ. ಇದನ್ನೂ ಓದಿ: ತೀರಾ ಕೆಳಮಟ್ಟದಲ್ಲೇ ಹಾರಾಡ್ತಿದ್ದ ಹೆಲಿಕಾಪ್ಟರ್ ಕೊನೆಯ ದೃಶ್ಯ ಲಭ್ಯ

HELICOPTER 1

ದುರಂತವಾದ ಕೆಲ ಗಂಟೆಗಳಲ್ಲಿ ಬಿಪಿನ್‌ ರಾವತ್‌ ಮೃತಪಟ್ಟಿದ್ದಾರೆ. ಅವರ ಪತ್ನಿ ಕೂಡ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಇವರೊಟ್ಟಿಗೆ 12 ಮಂದಿ ಸಿಬ್ಬಂದಿ ಅಸುನೀಗಿದ್ದಾರೆ. ವಾಯುಪಡೆ ಪೈಲಟ್‌ವೊಬ್ಬರು ಮಾತ್ರ ಬದುಕುಳಿದಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.

Share This Article
Leave a Comment

Leave a Reply

Your email address will not be published. Required fields are marked *