– ಮಂಗಳವಾರವಷ್ಟೇ ಮಗನ ಜೊತೆ ಮಾತಾಡಿದ್ದೆ
ಚೆನೈ: ತಮಿಳುನಾಡಿನ ಕುನೂರಿನಲ್ಲಿ ದುರಂತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಮೃತಪಟ್ಟ 13 ಜನರಲ್ಲಿ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಕೂಡ ಒಬ್ಬರು.
Advertisement
42 ವರ್ಷದ ಚೌಹಾಣ್ ಆಗ್ರಾದಲ್ಲಿ ಹುಟ್ಟಿ ಬೆಳೆದವರು. ಇವರು ಐವರು ಮಕ್ಕಳಲ್ಲಿ ಕೊನೆಯವರಾಗಿದ್ದು 2007ರಲ್ಲಿ ವಿವಾಹವಾದರು. ಇವರಿಗೆ 12 ವರ್ಷದ ಮಗಳು ಮತ್ತು 9 ವರ್ಷದ ಮಗ ಇದ್ದಾರೆ. ಇದೀಗ ಚೌಹಾಣ್‍ರನ್ನು ಕಳೆದುಕೊಂಡು ಕಣ್ಣೀರಾಗಿದ್ದು, ಗ್ರಾಮದಲ್ಲಿ ಮೌನ ಆವರಿಸಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ- ಪ್ರಾಣ ಕಳೆದುಕೊಂಡ ವಿವೇಕ್ ಕುಮಾರ್‌ಗಿದೆ 2 ತಿಂಗಳ ಪುಟ್ಟ ಕಂದಮ್ಮ
Advertisement
Advertisement
ವೃತ್ತಿ ಜೀವನ:
ಮಿಲಿಟರಿ ವೃತ್ತಿ ಜೀವನವು ಗಣ್ಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‍ಡಿಎ)ಯಲ್ಲಿ ಆರಂಭವಾಯಿತು. ಅಲ್ಲಿ ಉತ್ತೀರ್ಣರಾದ ನಂತರ 2000 ಇಸವಿಯಲ್ಲಿ ಭಾರತೀಯ ವಾಯುಪಡೆಗೆ ಸೇರಿದರು. ಬಳಿಕ 2008ರಲ್ಲಿ ವಾಯುಪಡೆಗೆ ಸೇರ್ಪಡೆಯಾದರು. 2015ನಿಂದ ವಿಂಗ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಎಮ್‍ಐ-17ವಿ5 ಹೆಲಿಕಾಪ್ಟರ್‍ನಲ್ಲಿ ಪೈಲೆಟ್ ಇನ್ ಕಮಾಂಡರ್ ಆಗಿದ್ದರು. ಇದನ್ನೂ ಓದಿ: ತೀರಾ ಕೆಳಮಟ್ಟದಲ್ಲೇ ಹಾರಾಡ್ತಿದ್ದ ಹೆಲಿಕಾಪ್ಟರ್ ಕೊನೆಯ ದೃಶ್ಯ ಲಭ್ಯ
Advertisement
ದುಖಃದಲ್ಲಿ ಕುಟುಂಬ:
ಸುರೇಂದ್ರ ಸಿಂಗ್ ಅವರು ತಮ್ಮ ಮಗ ಚೌಹಾಣ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಐದು ಜನ ಮಕ್ಕಳಲ್ಲಿ ಕಿರಿಯ ಮತ್ತು ಒಬ್ಬನೇ ಮಗ. ಎಲ್ಲರೊಂದಿಗೆ ನಗು ನಗುತ್ತಾ ಮಾತನಾಡುತ್ತಿದ್ದ ಆದರೆ ಈಗ ಆ ನಗು ನಮ್ಮಿಂದ ದೂರ ಸರಿದಿದೆ ಎಂದು ಕಣ್ಣೀರಾಕಿದರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತಕ್ಕೆ ಬಲಿಯಾಗಿರುವ ಸಾಯಿ ತೇಜ್‍ಗೆ 27 ವರ್ಷ!
ಮಂಗಳವಾರ ರಾತ್ರಿಯಷ್ಟೇ ಮಗನೊಂದಿಗೆ ಮಾತನಾಡಿದೆ. ಆದರೆ ಬುಧವಾರ ಮಧ್ಯಾಹ್ನ ಅವನ ಸಾವಿನ ಸುದ್ದಿ ತೀವ್ರ ನೋವು ನೀಡಿದೆ. ಮಗನ ಸಾವಿನ ಬಗ್ಗೆ ಇನ್ನೂ ವೈಯುಕ್ತವಾಗಿ ತಿಳಿಸಿಲ್ಲ. ಆದರೆ ಮುಂಬೈನಲ್ಲಿ ನನ್ನ ಹಿರಿಯ ಮಗಳು ಮಧ್ಯಾಹ್ನ ಟಿವಿಯಲ್ಲಿ ಹೆಲಿಕಾಪ್ಟರ್ ಅಪಘಾತದ ಸುದ್ದಿಯನ್ನು ನೋಡಿದ್ದಾಳೆ ಎಂದು ಗದ್ಗದಿತರಾದರು. ಇತ್ತ ಪೃಥ್ವಿ ತಾಯಿ ಸುಶೀಲಾದೇವಿ ಕೂಡ ಮಗನ ಅಗಲಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪೃಥ್ವಿ ತಂದೆ, ತಾಯಿ, ಪತ್ನಿ, ಮಕ್ಕಳು, ಕುಟುಂಬದವರನ್ನು ಅಗಲಿದ್ದಾರೆ. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ