ಲಕ್ನೋ: ಮುಂದಿನ ವರ್ಷ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ (Uttar Pradesh Poll) ಬಿಜೆಪಿ ಈಗಿನಿಂದಲೇ ಭರದ ಸಿದ್ಧತೆ ನಡೆಸುತ್ತಿದೆ. ಉತ್ತರ ಪ್ರದೇಶದ ಬಿಜೆಪಿ ಘಟಕವು ರಾಜ್ಯದ 6 ಪ್ರದೇಶಗಳಿಗೆ ನೂತನ ಕಾರ್ಯಕಾರಿ ಸಮಿತಿಗಳನ್ನ ಘೋಷಣೆ ಮಾಡಿದೆ.
ಹೌದು. 6 ಸಾಂಸ್ಥಿಕ ಪ್ರದೇಶಗಳಾದ ಅವಧ್, ಕಾನ್ಪುರ-ಬುಂದೇಲ್ಖಂಡ್, ಬ್ರಜ್, ಪಶ್ಚಿಮ, ಕಾಶಿ ಮತ್ತು ಗೋರಕ್ಷ ಗಳಿಗೆ ಕಾರ್ಯಕಾರಿ ಸಮಿತಿಗಳನ್ನ ಘೋಷಿಸಿದೆ. ಗುರುವಾರ ತಡರಾತ್ರಿ ಬಿಡುಗಡೆಯಾದ ಪಟ್ಟಿಯನ್ನ ಬಿಜೆಪಿಯ (BJP) ಉತ್ತರ ಪ್ರದೇಶ ಅಧ್ಯಕ್ಷ ಪಂಕಜ್ ಚೌಧರಿ ಅಂತಿಮಗೊಳಿಸಿದ್ದಾರೆ.
ಈ ಪಟ್ಟಿಯು ಉತ್ತರ ಪ್ರದೇಶದ ಪ್ರಮುಖ ಜಾತಿಗಳಲ್ಲಿ ತನ್ನ ನೆಲೆ ಬಲಪಡಿಸಲು ಕೇಸರಿ ಪಕ್ಷವು ಮಾಡಿದ ಲೆಕ್ಕಾಚಾರದ ಪ್ರಯತ್ನವಾಗಿದೆ. ಬ್ರಾಹ್ಮಣರು, ಠಾಕೂರ್ಗಳು, ದಲಿತರು ಮತ್ತು ಇತರ ಹಿಂದುಳಿದ ವರ್ಗಗಳ (OBC) ಪ್ರಾತಿನಿಧ್ಯಗಳನ್ನ ಒಳಗೊಂಡಂತೆ ಕಾರ್ಯಕಾರಿ ಸಮಿತಿಗೆ ಮುಖಂಡರನ್ನ ಆಯ್ಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಹೊಸದಾಗಿ ಬಿಡುಗಡೆಯಾದ ಪಟ್ಟಿಗಳಲ್ಲಿ ಮಹಿಳೆಯರು ಮತ್ತು ಯುವಕರಿಗೂ ಪ್ರಾತಿನಿಧ್ಯ ನೀಡಲಾಗಿದೆ.

6 ಕಾರ್ಯಕಾರಿ ಸಮಿತಿಗಳ ಹೊಸ ತಂಡ ಹೇಗಿದೆ?
1 ಪ್ರಾದೇಶಿಕ ಉಪಾಧ್ಯಕ್ಷರು – ವಿನೋದ್ ತ್ಯಾಗಿ
2 ಪ್ರಾದೇಶಿಕ ಉಪಾಧ್ಯಕ್ಷರು – ಮಾನ್ಸಿಂಗ್ ಗೋಸ್ವಾಮಿ
3 ಪ್ರಾದೇಶಿಕ ಉಪಾಧ್ಯಕ್ಷರು – ಹರೇಂದ್ರ ಜಾತವ್
4 ಪ್ರಾದೇಶಿಕ ಉಪಾಧ್ಯಕ್ಷರು – ಪ್ರವೀಣ್ ಮಿತ್ತಲ್
5 ಪ್ರಾದೇಶಿಕ ಉಪಾಧ್ಯಕ್ಷರು – ಬಿಜೇಂದ್ರ ಕಶ್ಯಪ್
6 ಪ್ರಾದೇಶಿಕ ಉಪಾಧ್ಯಕ್ಷರು – ಅಂಕುರ್ ರಾಣಾ
7 ಪ್ರಾದೇಶಿಕ ಉಪಾಧ್ಯಕ್ಷರು – ರಾಜೀವ್ ಸಿಸೋಡಿಯಾ
8 ಪ್ರಾದೇಶಿಕ ಉಪಾಧ್ಯಕ್ಷರು – ಪ್ರದೀಪ್ ಸೈನಿ
9 ಪ್ರಾದೇಶಿಕ ಉಪಾಧ್ಯಕ್ಷರು – ವಿನೋದ್ ಚೌಧರಿ
10 ಪ್ರಾದೇಶಿಕ ಉಪಾಧ್ಯಕ್ಷರು – ಸುಭಾಷ್ ವಾಲ್ಮೀಕಿ
11 ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ – ಅಶೋಕ್ ಮೋಂಗಾ
12 ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ – ಹರೀಶ್ ಸಿಂಗ್
13 ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ – ಸಂಜೀವ್ ಸಿಕ್ಕಾ
14 ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ – ರೂಪೇಂದ್ರ ಸೈನಿ
15 ಪ್ರಾದೇಶಿಕ ಕಾರ್ಯದರ್ಶಿ – ಅಜಯ್ ಭಾರದ್ವಾಜ್ ಮಚ್ಚಾ
16 ಪ್ರಾದೇಶಿಕ ಕಾರ್ಯದರ್ಶಿ – ಕುಮುದಿನಿ ಚೌಧರಿ
17 ಪ್ರಾದೇಶಿಕ ಕಾರ್ಯದರ್ಶಿ – ಹರ್ಜಿಂದರ್ ಕೌರ್
18 ಪ್ರಾದೇಶಿಕ ಕಾರ್ಯದರ್ಶಿ – ಸುಖ್ವಿಂದರ್ ಸೋಮ್
19 ಪ್ರಾದೇಶಿಕ ಕಾರ್ಯದರ್ಶಿ – ನಿತಿನ್ ಮಲಿಕ್
20 ಪ್ರಾದೇಶಿಕ ಕಾರ್ಯದರ್ಶಿ – ಮಹೇಶ್ ಬಾಲಿ
21 ಪ್ರಾದೇಶಿಕ ಕಾರ್ಯದರ್ಶಿ – ದೀಪಕ್ ರಿಷಿ ಗಾಂವ್
22 ಪ್ರಾದೇಶಿಕ ಕಾರ್ಯದರ್ಶಿ – ವರುಣ್ ಗೋಯಲ್
23 ಪ್ರಾದೇಶಿಕ ಕಾರ್ಯದರ್ಶಿ – ಸೌರವ್ ಪಾಲ್ ಲೋಧಿ
24 ಪ್ರಾದೇಶಿಕ ಕಾರ್ಯದರ್ಶಿ – ಆಯುಷ್ ಪವಾರ್
25 ಸದಸ್ಯ – ಮನೋಜ್ ಶರ್ಮಾ
26 ಸದಸ್ಯೆ – ಗೀತಾ ಶರ್ಮಾ
27 ಸದಸ್ಯೆ – ನಿತಿನ್ ಶರ್ಮಾ
28 ಸದಸ್ಯೆ – ರಾಜೇ ಕಸನಾ
29 ಸದಸ್ಯೆ – ರವಿನಾ ಸಿಂಗ್
30 ಸದಸ್ಯ – ಕೃಷ್ಣ ಚಂದ್ರ ಸೈನಿ
31 ಸದಸ್ಯ – ರೋಹಿತ್ ವಾಲ್ಮೀಕಿ
32 ಸದಸ್ಯೆ – ಹರ್ಮೀತ್ ಬಕ್ಷಿ
33 ಸದಸ್ಯ – ಹೇಮಂತ್ ಲೋಧಿ
34 ಸದಸ್ಯ – ಲಲಿತ್ ಗರ್ಗ್ ಮೋದಿ
35 ಸದಸ್ಯ – ಸಂಜಯ್ ರಾಣಾ
36 ಸದಸ್ಯ – ಸತೇಂದ್ರ ಚೌಧರಿ
37 ಸದಸ್ಯ – ರಾಜೀವ್ ಲೋಚನ್ ಪ್ರಜಾಪತಿ
3ನೇ ಬಾರಿ ಸಿಎಂ ಹುದ್ದೆಗೇರುವ ವಿಶ್ವಾಸದಲ್ಲಿ ಯೋಗಿ
ಇನ್ನೂ ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಭರ್ಜರಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಗೆದ್ದು ಮೂರನೇ ಬಾರಿಗೆ ಸಿಎಂ ಹುದ್ದೆಗೇರುವ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಯುವಜನರು, ಮಹಿಳೆಯರು, ರೈತರು ಮತ್ತು ದಲಿತರು ಸಮುದಾಯ ಬಿಜೆಪಿ ಪರ ಮತ ಚಲಾಯಿಸಲಿದ್ದಾರೆ ಎಂದು ನಂಬಿದ್ದಾರೆ.
