ಉಪ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು- ಚನ್ನಪಟ್ಟಣದಲ್ಲಿ ಉದ್ಯೋಗ ಮೇಳ ಆಯೋಜನೆ

Public TV
1 Min Read
JOB Fair Karnataka

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆ (Channapatna By Election) ಮೇಲೆ ಡಿಕೆ ಶಿವಕುಮಾರ್ (DK Shivakumar) ಕಣ್ಣು ಮುಂದುವರೆದಿದೆ. ಸಾಲು ಸಾಲು ದೇವಾಲಯಗಳ ಭೇಟಿ, ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ, ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮ ಸೇರಿ ಸಾಲು ಸಾಲು ಕಾರ್ಯಕ್ರಮ ಮಾಡಿದ್ದ ಡಿಕೆಶಿ ಈಗ ಮತ್ತೊಂದು ಕಾರ್ಯಕ್ರಮವನ್ನ ಚನ್ನಪಟ್ಟಣದಲ್ಲಿ ಆಯೋಜನೆ ಮಾಡಿದ್ದಾರೆ.

ಸರ್ಕಾರ ವತಿಯಿಂದ ನಡೆಯುವ ಉದ್ಯೋಗ ಮೇಳ (Job Fair) ಆಗಸ್ಟ್ 30 ರಂದು ಚನ್ನಪಟ್ಟಣದಲ್ಲಿ ಆಯೋಜನೆ ಮಾಡಲಾಗಿದೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿದರು.  ಇದನ್ನೂ ಓದಿ: ಫ್ರೆಂಚ್‌ ಫ್ರೈಸ್‌ ತಿನ್ನಲು ಅನುಮತಿ ನೀಡದ್ದಕ್ಕೆ ದೂರು – ಪತಿ ವಿರುದ್ಧ ಕ್ರೌರ್ಯದ ಕೇಸ್‌ ತನಿಖೆಗೆ ಹೈಕೋರ್ಟ್‌ ತಡೆ

 

ಬೆಂಗಳೂರಿನಲ್ಲಿ ಮಾಡಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರಕ್ರಿಯೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಎಲ್ಲಾ ಕಡೆ ಉದ್ಯೋಗ ಮೇಳ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ಚನ್ನಪಟ್ಟಣದಲ್ಲಿ ಆಗಸ್ಟ್ 30ಕ್ಕೆ ಉದ್ಯೋಗ ಮೇಳ ಮಾಡ್ತಿದ್ದೇವೆ. ಡಿವಿಷನ್ ಹೆಡ್ ಕ್ವಾರ್ಟರ್ಸ್ ನಲ್ಲಿ ಉದ್ಯೋಗ ಮೇಳ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಅದರಂತೆ ಉದ್ಯೋಗ ಮೇಳ ಆಯೋಜನೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್‌ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?

Share This Article