ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯಾದ ಬಿಜೆಪಿ ಯುವ ಮೋರ್ಚ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಯುವ ಮೋರ್ಚದ ಸದಸ್ಯರು ಜನರಿಂದ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ ಎಂದು ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸೂಲಿಬೆಲೆ, ಸ್ಥಳೀಯರು ಸ್ವಂತ ಖಾತೆಯ ವಿವರ ನೀಡಿ ಜನರ ಹಣ ವಸೂಲಿ ಮಾಡುತ್ತಿದ್ದಾರೆ. ಒಬ್ಬ ನಾಯಕ ಈ ರೀತಿ ವಂಚನೆಯ ಸಂದೇಶವನ್ನು ಕಳುಹಿಸಿದ್ದು, ಅದಕ್ಕೆ ಆತ ಸೂಕ್ತವಾದ ಉತ್ತರವನ್ನು ಪಡೆದಿದ್ದಾನೆ. ನೀವು ನಮ್ಮಿಂದ ಹಣವನ್ನು ಸಂಗ್ರಹಿಸುತ್ತೀರಿ ಹಾಗೂ ನಿಮ್ಮ ಮಂತ್ರಿಗಳು ಬಳಿಕ ನಿಮ್ಮಿಂದ ಆ ಹಣವನ್ನು ಲೂಟಿ ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ. ಈ ರೀತಿ ವಂಚಿಸುವುದಕ್ಕೆ ಶಭಾಷ್ ಎಂದು ಸೂಲಿಬೆಲೆ ಟೀಕಿಸಿದ್ದಾರೆ.
Advertisement
Pathetic situation of @BJYM Karnataka. They are collecting money from the local people giving their own account details. A leader sends a msg and gets a befitting reply!
‘Ur ministers loot us and u collect money from us for ur karyakarta’
Shabhash!@DrSandeepBJYM @Tejasvi_Surya pic.twitter.com/XPREJ1oxvr
— Chakravarty Sulibele (@astitvam) July 29, 2022
Advertisement
ಈ ಬಗ್ಗೆ ಪತ್ರವೂ ಬರೆದಿರುವ ಸೂಲಿಬೆಲೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಭಯೋತ್ಪಾದಕರು ಭೀಕರ ಹತ್ಯೆ ಮಾಡಿರುವುದು ಖಂಡನೀಯ. ನಮ್ಮ ಕಾರ್ಯಕರ್ತನಾದ ಪ್ರವೀಣ್ ಕುಟುಂಬಕ್ಕೆ ಪಕ್ಷವು ಈಗಾಗಲೇ ಮೊದಲ ಹಂತದ ನೆರವು ನೀಡಿದೆ. ಮುಂದೆಯೂ ಸರ್ಕಾರ ಮತ್ತು ಪಕ್ಷ ಅವರ ಜೊತೆಗಿರಲಿದೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತ್ನಿ ಹೇಳಿಕೆ ವಿವಾದ – ದ್ರೌಪದಿ ಮುರ್ಮುಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್
Advertisement
Advertisement
ನೊಂದ ಕುಟುಂಬಕ್ಕೆ ಅಲ್ಲಲ್ಲಿ ಪಕ್ಷದ ಹೆಸರಿನಲ್ಲಿ ಖಾಸಗಿ ಧನ ಸಂಗ್ರಹ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪಕ್ಷದ ಹೆಸರಿನಲ್ಲಿ ಯಾವುದೇ ರೀತಿಯ ಖಾಸಗಿ ಧನ ಸಂಗ್ರಹ ಮಾಡಬಾರದು ಎಂದು ಸೂಲಿಬೆಲೆ ತಿಳಿಸಿದ್ದು, ವಂಚನೆಗೊಳಗಾಗದಂತೆ ಜನರಿಗೂ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿಯಾದ ಕಿಚ್ಚ ಸುದೀಪ್ ದಂಪತಿ