ತಿರುವನಂತಪುರಂ: ಶ್ರೀಲಂಕಾಕ್ಕೆ ಭಾರತ ಸರ್ಕಾರ ಯಾವಾಗಲೂ ಬೆಂಬಲ ನೀಡುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ದ್ವೀಪ ರಾಷ್ಟ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೆರೆಯ ದೇಶಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಸದ್ಯ ನಿರಾಶ್ರಿತರ ಬಿಕ್ಕಟ್ಟು ಇಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ನೆರೆಹೊರೆಯ ಮೊದಲ ನೀತಿ ಅಡಿಯಲ್ಲಿ, ಸಂಕಷ್ಟಗಳನ್ನು ನಿವಾರಿಸಲು ಸಹಾಯಕ್ಕಾಗಿ ಶ್ರೀಲಂಕಾ ಸರ್ಕಾರದ ಮನವಿಗೆ ಭಾರತವು ತುರ್ತಾಗಿ ಪ್ರತಿಕ್ರಿಯಿಸಿದೆ. ಮೂಲಸೌಕರ್ಯ ಸಂಪರ್ಕ ಮತ್ತು ನವೀಕರಿಸಬಹುದಾದ ಇಂಧನದ ಮೂಲಕ ಉಭಯ ದೇಶಗಳ ನಡುವಿನ ಆರ್ಥಿಕ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಭರವಸೆ ನೀಡಿದರು.
Advertisement
ಈಗಾಗಲೇ ಶ್ರೀಲಂಕಾಕ್ಕೆ ಹೆಚ್ಚು ಬೆಂಬಲ ನೀಡಿದ್ದೇವೆ. ಇನ್ನೂ ಹೆಚ್ಚು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಅಗತ್ಯವಿರುವಾಗ ನಾವು ಯಾವಾಗಲೂ ಸಹಾಯ ಮಾಡುತ್ತೇವೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹಾಗೂ ಗಲಾಟೆಗಳನ್ನು ಗಮನಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲಿ ಪ್ರತಿಭಟನಾಕಾರರಿಗೆ ಸಿಕ್ತು ಲಕ್ಷ ಲಕ್ಷ ಹಣ!
Advertisement
ಪ್ರಸ್ತುತದಲ್ಲಿ ಶ್ರೀಲಂಕಾದಲ್ಲಿ ರಾಜಪಕ್ಸೆ ಮನೆತನದ ಆಡಳಿತ ವಿರೋಧಿಸಿ ಅಲ್ಲಿನ ಜನತೆ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಆಕ್ರೋಶಿತ ಜನಸಮೂಹ ಶನಿವಾರ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ನಿವಾಸಕ್ಕೆ ಲಗ್ಗೆಯಿಟ್ಟು ದಾಂಧಲೆ ಸೃಷ್ಟಿಸಿದರು. ಸ್ವಿಮ್ಮಿಂಗ್ ಪೂಲ್‍ನಲ್ಲಿ ಈಜಾಡಿದರು. ಅಡುಗೆ ಕೋಣೆಯಲ್ಲಿನ ತಿಂಡಿ-ತಿನಿಸು ತಿಂದರು. ಹಾಸಿಗೆಯಲ್ಲಿ ಬಿದ್ದು ಹೊರಳಾಡಿದರು. ಇದನ್ನೂ ಓದಿ: ‘ಸಿಂಗ್, ಡ್ಯಾನ್ಸ್ ಆ್ಯಂಡ್ ಪ್ರೇʼ- ಶ್ರೀಲ ಪ್ರಭುಪಾದರ ಕುರಿತ ಪುಸ್ತಕ ಬಿಡುಗಡೆ ಮಾಡಿದ ಸುಧಾಮೂರ್ತಿ