Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: Explainer| ದಲ್ಲಾಳಿ ಕೆಲಸಕ್ಕೆ ಪಾಕಿಸ್ತಾನವನ್ನೇ ಟ್ರಂಪ್‌ ಆಯ್ಕೆ ಮಾಡಿದ್ದು ಯಾಕೆ?
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Latest | Explainer| ದಲ್ಲಾಳಿ ಕೆಲಸಕ್ಕೆ ಪಾಕಿಸ್ತಾನವನ್ನೇ ಟ್ರಂಪ್‌ ಆಯ್ಕೆ ಮಾಡಿದ್ದು ಯಾಕೆ?

Latest

Explainer| ದಲ್ಲಾಳಿ ಕೆಲಸಕ್ಕೆ ಪಾಕಿಸ್ತಾನವನ್ನೇ ಟ್ರಂಪ್‌ ಆಯ್ಕೆ ಮಾಡಿದ್ದು ಯಾಕೆ?

Last updated: April 12, 2026 8:01 am
By
Public TV
Share
10 Min Read
US Iran Ceasefire Why US Chose Pakistan as Mediator in High Stakes Talks 1

ಹಿಂದೆ ರಾಜರ ಆಸ್ಥಾನಗಳಲ್ಲಿ ರಾಜರನ್ನು ಸಂತೋಷಪಡಿಸಲು ಹೊಗಳುಭಟರು ಇರುತ್ತಿದ್ದರು. ಈ ಹೊಗಳುಭಟರ ಕೆಲಸ ಏನೆಂದರೆ ರಾಜನ ಯಾವುದೇ ಕೆಲಸ ಅದು ಸರಿ ಇರಲಿ ತಪ್ಪು ಇರಲಿ ಆತನನ್ನು ಹೊಗಳುವುದು. ಈ ಮೂಲಕ ರಾಜನ ಪ್ರೀತಿಗೆ ಪಾತ್ರರಾಗಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ರಾಜರು ಇಲ್ಲ ಬದಲಿಗೆ ದೇಶದ ಮುಖ್ಯಸ್ಥರು ಇದ್ದಾರೆ. ಮುಖ್ಯಸ್ಥರನ್ನು ಹೊಗಳಿ ಆತನ ಕೃಪೆಗೆ ಪಾತ್ರವಾಗುತ್ತಿರುವ ಸದ್ಯಕ್ಕೆ ವಿಶ್ವದಲ್ಲಿರುವ ದೇಶ ಯಾವುದು ಎಂದರೆ ಅದು ಪಾಕಿಸ್ತಾನ.

ಮೊದಲೇ ದಿವಾಳಿಯಾಗಿದ್ದ ಪಾಕಿಸ್ತಾನದ (Pakistan) ಹಲವು ಗಲ್ಫ್‌ ರಾಷ್ಟ್ರಗಳಿಂದ ಸಾಲ ಪಡೆದಿದೆ. ಇರಾನ್‌ ಯುದ್ಧದ ಬಳಿಕ ಪಾಕ್‌ ಆರ್ಥಿಕತೆ ಐಸಿಯುನಲ್ಲಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ ಟ್ರಂಪ್‌ (Donald Trump) ಕೃಪಾಕಟಾಕ್ಷದಿಂದ ಈಗ ಸಂಧಾನ ಪಾತ್ರವನ್ನು ಮಾಡುತ್ತಿದೆ. ಉಗ್ರರನ್ನು ಸೃಷ್ಟಿಸಿ ಅಶಾಂತಿ ಮೂಡಿಸುತ್ತಿರುವ ಪಾಕಿಸ್ತಾನವನ್ನೇ ಟ್ರಂಪ್‌ ಸಂಧಾನಕ್ಕೆ ಆಯ್ಕೆ ಮಾಡಿದ್ದು ಯಾಕೆ ಎನ್ನುವುದು ದೊಡ್ಡ ಯಕ್ಷಪ್ರಶ್ನೆ. ಹಾಗೆ ನೋಡಿದರೆ ಅಮೆರಿಕಕ್ಕೆ ಹಲವು ಮುಸ್ಲಿಮ್‌ ದೇಶಗಳ ಜೊತೆ ಉತ್ತಮ ಸಂಬಂಧವಿದೆ. ಮುಖ್ಯವಾಗಿ ಅಮೆರಿಕ ನೇತೃತ್ವದ ವಿಶ್ವದ ಅತಿ ದೊಡ್ಡ ಸೇನಾ ಒಕ್ಕೂಟ ನ್ಯಾಟೋದಲ್ಲಿ ಟರ್ಕಿ(Turkey) ಸದಸ್ಯ. ಈ ಟರ್ಕಿಗೆ ಇರಾನ್‌ (Iran) ಜೊತೆಗೆ ಉತ್ತಮ ಸಂಬಂಧವಿದೆ. ಹೀಗಿದ್ದರೂ ಟ್ರಂಪ್‌ ಹೊಗಳುಭಟ ಪಾಕಿಸ್ತಾನಕ್ಕೆ ಮಧ್ಯಸ್ಥಿಕೆ ವಹಿಸುವ ಪಾತ್ರವನ್ನು ನೀಡುವ ಮೂಲಕ ದೊಡ್ಡ ಗಿಫ್ಟ್‌ ನೀಡಿದ್ದಾರೆ.

World Liberty Financial

ಪಾಕ್‌ ಮೇಲೆ ಟ್ರಂಪ್‌ಗೆ ಪ್ರೀತಿ ಯಾಕೆ?
ಟ್ರಂಪ್‌ ಮೂಲತ: ಉದ್ಯಮಿ. ತನ್ನ ಉದ್ಯಮವನ್ನು ಬೇರೆ ದೇಶಗಳಲ್ಲೂ ವಿಸ್ತರಿಸಬೇಕು ಎನ್ನುವುದು ಉದ್ಯಮಿಗಳ ಕನಸಾಗಿರುತ್ತದೆ. ಈ ರೀತಿಯ ಕನಸು ಕಾಣುವುದು ತಪ್ಪಲ್ಲ. ಆದರೆ ಸರ್ಕಾರದ ಮುಖ್ಯಸ್ಥನಾಗಿ ತನ್ನ ಉದ್ಯಮವನ್ನು ಬೆಳೆಸಲು ಬೇರೆ ದೇಶದ ಜೊತೆ ಮಾತುಕತೆ ನಡೆಸುವುದು ತಪ್ಪು. ಆದರೆ ಟ್ರಂಪ್‌ ವಿಚಾರದಲ್ಲಿ ಇವುಗಳಿಗೆ ಬೆಲೆ ಇಲ್ಲ. ತಾನು ಹೇಳಿದ್ದೇ ಸರಿ, ಬೇರೆ ದೇಶಗಳು ದುರ್ಬಲ ಎಂದು ಭಾವಿಸುವ ಟ್ರಂಪ್‌ಗೆ ತನ್ನ ಉದ್ಯಮ ವಿಸ್ತರಿಸಲು ಒಂದು ದೇಶ ಬೇಕಿತ್ತು. ಯಾವ ದೇಶ ಸಿಗಬಹುದು ಎಂದು ಹುಡುಕುತ್ತಿದ್ದಾಗ ಸಿಕ್ಕಿದ ದೇಶವೇ ಪಾಕಿಸ್ತಾನ.

More Read

daily horoscope dina bhavishya 5
ದಿನ ಭವಿಷ್ಯ 30-05-2026
WEATHER 1 e1679398614299 11
ರಾಜ್ಯದ ಹವಾಮಾನ ವರದಿ 30-05-2026
rcb celebration 1
IPL ಆರ್‌ಸಿಬಿ ಫೈನಲ್‌; ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್‌ – ಗೈಡ್‌ಲೈನ್ಸ್‌ ಬಿಡುಗಡೆ

ರಿಯಲ್‌ ಎಸ್ಟೇಟ್‌, ಮೀಡಿಯಾ, ಗಾಲ್ಫ್‌ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಟ್ರಂಪ್‌ ಸಮೂಹ ಈಗ ಕ್ರಿಪ್ಟೋ ವ್ಯವಹಾರಕ್ಕೆ ಇಳಿದಿದೆ. 2024ರ ಸೆಪ್ಟೆಂಬರ್‌ನಲ್ಲಿ ಟ್ರಂಪ್‌ ಕುಟುಂಬ ವರ್ಲ್ಡ್ ಲಿಬರ್ಟಿ ಫೈನಾನ್ಶಿಯಲ್ (World Liberty Financial) ಹೆಸರಿನ ಕ್ರಿಪ್ಟೋ ಕಂಪನಿಯನ್ನು ಆರಂಭಿಸಿದೆ. ಈ ಕಂಪನಿಯಲ್ಲಿ ಟ್ರಂಪ್ ಕುಟುಂಬವು 60% ಪಾಲುದಾರಿಕೆ ಹೊಂದಿದ್ದು, ವಹಿವಾಟಿನಿಂದ ಬರುವ ಲಾಭದ 75% ರಷ್ಟು ಭಾಗವನ್ನು ಪಡೆಯುತ್ತದೆ. ಡೊನಾಲ್ಡ್ ಟ್ರಂಪ್ ಮತ್ತು ಅವರ ಪುತ್ರರಾದ ಎರಿಕ್ ಹಾಗೂ ಡೊನಾಲ್ಡ್ ಟ್ರಂಪ್ ಜೂನಿಯರ್ ಜೊತೆಗೂಡಿ ಸ್ಥಾಪಿಸಿದ ಈ WLF ಕಂಪನಿಯ ಸಿಇಒ ಆಗಿ ಉದ್ಯಮಿ ಜಾಕ್ ವಿಟ್ಕಾಫ್ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಕ್ ವಿಟ್ಕಾಫ್ ಯಾರು ಎಂದರೆ ಟ್ರಂಪ್ ಅವರ ಅತ್ಯಂತ ಆಪ್ತ ಗೆಳೆಯ ಮತ್ತು ಅಮೆರಿಕದ ಮಧ್ಯಪ್ರಾಚ್ಯದ ವಿಶೇಷ ದೂತರಾದ ಸ್ಟೀವ್ ವಿಟ್ಕಾಫ್ ಅವರ ಮಗ. ಇದನ್ನೂ ಓದಿ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆ ಆರಂಭ – ಇರಾನಿನ ಕೆಲ ಬೇಡಿಕೆಗಳಿಗೆ ಅಮೆರಿಕ ತಾತ್ವಿಕ ಒಪ್ಪಿಗೆ

Pakistan signs MoU with Donald Trump linked World Liberty Finance

ಟ್ರಂಪ್‌ ಅಧ್ಯಕ್ಷಪಟ್ಟ ಅಲಂಕರಿಸಿದ ಬಳಿಕ ಈ ಕಂಪನಿ `ಸ್ಟೇಬಲ್‌ ಕಾಯಿನ್‌ʼ ಪರಿಚಯಿಸಿದೆ. ಇದರ ಬೆಲೆ ಸಾಮಾನ್ಯ ಕ್ರಿಪ್ಟೋಕರೆನ್ಸಿಗಳಂತೆ ಉದಾಹರಣೆಗೆ ಬಿಟ್‌ಕಾಯಿನ್ ದರದಂತೆ ವಿಪರೀತ ಏರಿಳಿತವಾಗುವುದಿಲ್ಲ, ಬದಲಿಗೆ ಸ್ಥಿರವಾಗಿರುತ್ತದೆ. ಈ ವರ್ಷದ ಜನವರಿಯಲ್ಲಿ ಜಾಕ್ ವಿಟ್ಕಾಫ್ ಇಸ್ಲಾಮಾಬಾದ್‌ಗೆ ಭೇಟಿ ನೀಡಿ, ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಸಮ್ಮುಖದಲ್ಲಿ ಆ ದೇಶದ ಗಡಿಯಾಚೆಗಿನ ಪಾವತಿಗಳಿಗೆ ತಮ್ಮ ಕಂಪನಿಯ USD1 ಸ್ಟೇಬಲ್‌ಕಾಯಿನ್ ಬಳಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಟ್ರಂಪ್ ಅವರ ಕ್ರಿಪ್ಟೋ ಕಂಪನಿಯು ಒಂದು ರಾಷ್ಟ್ರದ ಸರ್ಕಾರದೊಂದಿಗೆ ಮಾಡಿಕೊಂಡ ಮೊದಲ ಸಾರ್ವಜನಿಕ ಒಪ್ಪಂದ ಇದು ಎನ್ನುವುದು ಗಮನಿಸಬೇಕಾದ ವಿಷಯ.

ಮಾರ್ಚ್ 2026 ರಲ್ಲಿ ಪಾಕಿಸ್ತಾನ ಸಂಸತ್ತು ‘ವರ್ಚುವಲ್ ಅಸೆಟ್ಸ್ ಆಕ್ಟ್ 2026’ ಅನ್ನು ಅಂಗೀಕರಿಸಿದ್ದು, ಇದರ ಮೂಲಕ ಕ್ರಿಪ್ಟೋ ಮತ್ತು ಸ್ಟೇಬಲ್‌ಕಾಯಿನ್ ವಹಿವಾಟುಗಳಿಗೆ ಅಧಿಕೃತ ಕಾನೂನು ಮಾನ್ಯತೆ ನೀಡಲಾಗಿದೆ. ಪಾಕಿಸ್ತಾನವು ಈಗ ಸ್ಟೇಬಲ್‌ಕಾಯಿನ್ ಬಳಸಿ ವ್ಯವಹಾರಗಳನ್ನು ನಡೆಸಲು ಪ್ರಾಯೋಗಿಕ ಹಂತದ (Pilot Stage) ಚಟುವಟಿಕೆಗಳನ್ನು ಆರಂಭಿಸಿದೆ. ಎಲ್ಲರಿಗೂ ಒಪ್ಪಿಗೆಯಾದಲ್ಲಿ ಭವಿಷ್ಯದಲ್ಲಿ ದೇಶಗಳಲ್ಲಿ ಕೆಲಸ ಮಾಡುವ ಪಾಕಿಸ್ತಾನಿಗಳು ಹಣವನ್ನು ದೇಶಕ್ಕೆ ಕಳುಹಿಸಲು ಈ ಸ್ಟೇಬಲ್‌ಕಾಯಿನ್ ಬಳಸುವ ಸಾಧ್ಯತೆಯಿದೆ.

Steve Witkoff jd vance

ಟ್ರಂಪ್‌ ಕ್ರಿಪ್ಟೋ ಕಂಪನಿಯ ಸಿಇಒ ಜಾಕ್ ವಿಟ್ಕಾಫ್ ಅವರ ತಂದೆ ಸ್ಟೀವ್ ವಿಟ್ಕಾಫ್ ಅವರು ಪ್ರಸ್ತುತ ಅಮೆರಿಕದ ನಿಯೋಗದ ಭಾಗವಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಜ್ಯಾರೆಡ್ ಕುಶ್ನರ್ ಅವರೊಂದಿಗೆ ಸೇರಿ ಇರಾನ್ ಅಧಿಕಾರಿಗಳೊಂದಿಗೆ ನೇರ ಶಾಂತಿ ಮಾತುಕತೆ ನಡೆಸುತ್ತಿದ್ದಾರೆ.

ಸ್ಟೀವ್ ವಿಟ್ಕಾಫ್ ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿರುವ ಪಾಕಿಸ್ತಾನಕ್ಕೆ ಸೇರಿದ ರೂಸ್ವೆಲ್ಟ್ ಹೋಟೆಲ್ (Roosevelt Hotel) ನವೀಕರಣ ಮತ್ತು ಅಭಿವೃದ್ಧಿ ಒಪ್ಪಂದದ ಮಾತುಕತೆಯಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟಿನಲ್ಲಿ ಟ್ರಂಪ್‌ ಅವರು ಇರಾನ್ ಜೊತೆಗಿನ ಮಾತುಕತೆಗಾಗಿ ಪಾಕಿಸ್ತಾನವನ್ನು ಅಮೆರಿಕದ ಪ್ರಮುಖ ಮಧ್ಯವರ್ತಿ ರಾಷ್ಟ್ರವನ್ನಾಗಿ ಮತ್ತು ತಮ್ಮ ಕುಟುಂಬದ ಉದ್ಯಮಗಳಿಗೆ ಪ್ರಮುಖ ಪಾಲುದಾರನನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಹಾಡಿ ಹೊಗಳಿದ ಪಾಕ್‌:
ಅಣ್ವಸ್ತ್ರ ಹೊಂದಿರುವ ಎರಡು ದೇಶಗಳ ಯುದ್ಧವನ್ನು ನಾನು ನಿಲ್ಲಿಸಿದ್ದೇನೆ ಎಂದು ಟ್ರಂಪ್‌ ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಭಾರತವು ಟ್ರಂಪ್ ಅವರ ಮಧ್ಯಸ್ಥಿಕೆಯನ್ನು ತಿರಸ್ಕರಿಸಿದರೂ, ಪಾಕಿಸ್ತಾನವು ಟ್ರಂಪ್ ಅವರ ಪ್ರತಿಯೊಂದು ನಡೆಯನ್ನೂ ಸಮರ್ಥಿಸಿಕೊಳ್ಳುತ್ತಿವೆ. ಅಷ್ಟೇ ಅಲ್ಲದೇ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಿಲ್ಲಿಸಿದ್ದಕ್ಕಾಗಿ ಪಾಕಿಸ್ತಾನವು ಟ್ರಂಪ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ.

ಟ್ರಂಪ್‌ ಪಾಕ್‌ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಬಹಿರಂಗವಾಗಿ “ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್” ಎಂದು ಕರೆದಿದ್ದಾರೆ. ಅಮೆರಿಕದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಮುನೀರ್ ಅವರ ಕಠಿಣ ನಿರ್ಧಾರಗಳನ್ನು ಟ್ರಂಪ್ ಶ್ಲಾಘಿಸಿದ್ದಾರೆ. ಭಯೋತ್ಪಾದನಾ ನಿಗ್ರಹದ ಹೆಸರಿನಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೇನಾ ನೆರವನ್ನು ಟ್ರಂಪ್ ಪುನಃ ಆರಂಭಿಸಿದ್ದಾರೆ.

Trump unveils Board of Peace India absent from stage Pakistan joins

ಡೊನಾಲ್ಡ್ ಟ್ರಂಪ್ ಅವರು ‘ಬೋರ್ಡ್ ಆಫ್ ಪೀಸ್’ (Board of Peace – BoP) ಎಂಬ ಹೆಸರಿನ ಹೊಸ ಅಂತರಾಷ್ಟ್ರೀಯ ಶಾಂತಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಲು ಈ ಸಂಸ್ಥೆಯನ್ನು ಆರಂಭಿಸಿದ್ದರೂ ಈಗ ಜಗತ್ತಿನ ಯಾವುದೇ ಸಂಘರ್ಷಗಳನ್ನು ಬಗೆಹರಿಸುವ ಸಂಸ್ಥೆಯಾಗಿ ಇದು ಕೆಲಸ ಮಾಡಲಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಪಾಕಿಸ್ತಾನವು ಈ ಸಂಸ್ಥೆಯ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದೆ.

ತೈಲ ನಿಕ್ಷೇಪದ ಮೇಲೆ ಕಣ್ಣು:
ಪಾಕಿಸ್ತಾನದಲ್ಲಿ ಬೃಹತ್ ತೈಲ ನಿಕ್ಷೇಪಗಳಿವೆ ಎನ್ನುತ್ತಿರುವ ಟ್ರಂಪ್‌ ಇವುಗಳನ್ನು ಅಭಿವೃದ್ಧಿಪಡಿಸಲು ಅಮೆರಿಕವು 2025ರ ಜುಲೈನಲ್ಲಿ ಪಾಕಿಸ್ತಾನದೊಂದಿಗೆ ವಿಶೇಷ ಶಕ್ತಿ ಒಪ್ಪಂದವನ್ನು (Energy Deal) ಮಾಡಿಕೊಂಡಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನವು ಮುಂದೊಂದು ದಿನ ಭಾರತಕ್ಕೆ ತೈಲವನ್ನು ಮಾರಾಟ ಮಾಡಬಹುದು ಎಂಬ ಆಶಯವನ್ನೂ ಟ್ರಂಪ್‌ ವ್ಯಕ್ತಪಡಿಸಿದ್ದರು. ಅಮೆರಿಕದ ತೈಲ ಕಂಪನಿಗಳನ್ನು ಈ ಯೋಜನೆಯ ನೇತೃತ್ವ ವಹಿಸಲು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪಾಕಿಸ್ತಾನದ ಕರಾವಳಿಯಲ್ಲಿ ಮತ್ತು ಬಲೂಚಿಸ್ತಾನದ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುವ ಆಸಕ್ತಿಯನ್ನು ಅಮೆರಿಕದ ಕಂಪನಿಗಳು ತೋರಿಸಿವೆ. ಇದನ್ನೂ ಓದಿ: ಇರಾನ್‌ ಯುದ್ಧ ಶುರುವಾದ ಬಳಿಕ ಫಸ್ಟ್‌ ಟೈಮ್‌ ಹಾರ್ಮುಜ್‌ ಜಲಸಂಧಿ ದಾಟಿದ 2 ಯುಎಸ್‌ ಯುದ್ಧನೌಕೆ

Donald Trump Asim Munir Shehbaz Sharif

ಅಪರೂಪದ ಭೂ ಖನಿಜ ರಫ್ತು:
ಸೆಪ್ಟೆಂಬರ್ 2025 ರಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಶ್ವೇತಭವನದಲ್ಲಿ ಟ್ರಂಪ್‌ಗೆ ಒಂದು ಮರದ ಪೆಟ್ಟಿಗೆಯಲ್ಲಿ ಬಾಸ್ಟ್ನಾಸೈಟ್ (Bastnasite) ಮತ್ತು ಮೊನಾಜೈಟ್ (Monazite) ನಂತಹ ಅಮೂಲ್ಯ ಖನಿಜಗಳ ಮಾದರಿಗಳನ್ನು ಉಡುಗೊರೆಯಾಗಿ ನೀಡಿದ್ದರು. ಅಪರೂಪದ ಭೂ ಖನಿಜ ತೆಗೆಯುವ ಸಂಬಂಧ ಪಾಕಿಸ್ತಾನದ ಮಿಲಿಟರಿ ನಿಯಂತ್ರಿತ ‘ಫ್ರಾಂಟಿಯರ್ ವರ್ಕ್ಸ್ ಆರ್ಗನೈಸೇಶನ್’ (FWO) ಮತ್ತು ಅಮೆರಿಕದ US Strategic Metals (USSM) ಕಂಪನಿ ನಡುವೆ ಸುಮಾರು 500 ಮಿಲಿಯನ್ ಡಾಲರ್‌ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈ ಒಪ್ಪಂದದ ಅಡಿಯಲ್ಲಿ ಪಾಕಿಸ್ತಾನವು ಈಗಾಗಲೇ ಆಂಟಿಮನಿ, ತಾಮ್ರ ಮತ್ತು ನಿಯೋಡೈಮಿಯಮ್‌ನಂತಹ ಅಪರೂಪದ ಖನಿಜಗಳ ಮೊದಲ ಕಂತನ್ನು ಅಮೆರಿಕಕ್ಕೆ ಯಶಸ್ವಿಯಾಗಿ ರಫ್ತು ಮಾಡಿದೆ. 2028 ರಲ್ಲಿ ಅಮೆರಿಕದ ಕಂಪನಿ ಜೊತೆಗೂಡಿ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಬೃಹತ್ ಪ್ರಮಾಣದ ಗಣಿಗಾರಿಕೆ ಆರಂಭವಾಗುವ ಸಾಧ್ಯತೆಗಳಿವೆ. ಈ ಒಪ್ಪಂದದ ಭಾಗವಾಗಿ ಅಮೆರಿಕವು ಪಾಕಿಸ್ತಾನದ ರೇಂಕೊ ಡಿಕ್ (Reko Diq) ಗಣಿಗಾರಿಕೆ ಯೋಜನೆಗೆ 1.3 ಬಿಲಿಯನ್ ಡಾಲರ್‌ ಹಣಕಾಸು ನೆರವನ್ನೂ ಅನುಮೋದಿಸಿದೆ.

Asim Munir Shehbaz Sharif Donald Trump

ಪಾಕಿಸ್ತಾನಕ್ಕೆ ಏನು ಲಾಭ?
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ ಸೇರಿದಂತೆ ವಿದೇಶಗಳಿಂದ ಸಾಲ ಬೇಕು. ಅಮೆರಿಕ ಒಪ್ಪಿಗೆ ನೀಡಿದರೆ ಈ ಸಂಸ್ಥೆಗಳು ಸುಲಭವಾಗಿ ಸಾಲ ನೀಡಲಿದೆ. ಈಗಾಗಲೇ ಯುಎಇ ತನ್ನ 3.5 ಬಿಲಿಯನ್ ಡಾಲರ್‌ ಸಾಲವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡಿದೆ. ಪಾಕಿಸ್ತಾನದ ವಿದೇಶಿ ಮೀಸಲು ನಿಧಿಯು ಸರಿಸುಮಾರು 16.4 ಬಿಲಿಯನ್ ಡಾಲರ್‌ ಇದ್ದು, ಅದರಲ್ಲಿ 20% ರಷ್ಟು ಹಣವು ಈ ಮರುಪಾವತಿಗೆ ಬಳಕೆಯಾಗಲಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪಾಕಿಸ್ತಾನವು ಟ್ರಂಪ್ ಅವರನ್ನು ತನ್ನ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಬಲ್ಲ ಜಾಗತಿಕ ನಾಯಕ ಮತ್ತು ತನ್ನ ಆಪ್ತ ಮಿತ್ರ ಎಂದು ಪರಿಗಣಿಸಿದೆ.

ತನ್ನ ಉದ್ಯಮಕ್ಕೆ ಪಾಕ್‌ ಸಹಕಾರ ನೀಡುತ್ತಿರುವುದಕ್ಕೆ ಪ್ರತಿಯಾಗಿ ಟ್ರಂಪ್‌ ಸರ್ಕಾರ F-16 ಯುದ್ಧ ವಿಮಾನಗಳ ನಿರ್ವಹಣೆಗಾಗಿ ಟ್ರಂಪ್ ಸರ್ಕಾರವು ಸುಮಾರು 397 ಮಿಲಿಯನ್ ಡಾಲರ್‌ ಮೊತ್ತದ ವಿಶೇಷ ವಿನಾಯಿತಿಯನ್ನು ನೀಡಿದೆ. ಡಿಸೆಂಬರ್ 2025 ರಲ್ಲಿ ಪಾಕಿಸ್ತಾನದ ವಾಯುಪಡೆಯ ಆಧುನೀಕರಣಕ್ಕಾಗಿ ಸುಮಾರು 686 ಮಿಲಿಯನ್ ಡಾಲರ್‌ ಮೊತ್ತದ ಬೃಹತ್ ಮಿಲಿಟರಿ ನೆರವಿನ ಪ್ಯಾಕೇಜ್ ಅನ್ನು ಘೋಷಿಸಿದೆ. ಸ್ಥಗಿತಗೊಂಡಿದ್ದ ಕೆಲವು ನಾಗರಿಕ ಸೇವಾ ಯೋಜನೆಗಳಿಗೆ ನೀಡಲಾಗುತ್ತಿದ್ದ USAID ಅನುದಾನವನ್ನು 2025ರ ಜುಲೈನಲ್ಲಿ ಪುನಃ ಆರಂಭಿಸಲಾಗಿದೆ. ಭಯೋತ್ಪಾದನಾ ನಿಗ್ರಹದ ಹೆಸರಿನಲ್ಲಿ ಅಮೆರಿಕವು ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೇನಾ ನೆರವನ್ನು ಟ್ರಂಪ್ ಪುನಃ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಾಯುನೆಲೆಗಳನ್ನು ಬಳಸಿಕೊಳ್ಳಲು ಮುನೀರ್ ಅನುಮತಿ ನೀಡಿದ್ದಾರೆ ಎಂಬ ವರದಿಗಳಿವೆ.

ಟ್ರಂಪ್‌ಗೆ ಏನು ಲಾಭ?
ಟ್ರಂಪ್‌ ಕ್ರಿಪ್ಟೋ ಕಂಪನಿಗೆ ಕಂಪನಿಗೆ ಪಾಕಿಸ್ತಾನವು ಒಂದು ದೊಡ್ಡ ಮಾರುಕಟ್ಟೆಯಾಗಿ ಸಿಕ್ಕಿದೆ. ಈ ವ್ಯವಹಾರದಿಂದ ಟ್ರಂಪ್ ಕುಟುಂಬಕ್ಕೆ ಕೋಟ್ಯಂತರ ಡಾಲರ್ ಲಾಭವಾಲಿದೆ. ಪಾಕಿಸ್ತಾನದಲ್ಲಿರುವ ಟ್ರಿಲಿಯನ್ ಡಾಲರ್ ಮೌಲ್ಯದ ಅಪರೂಪದ ಭೂ ಖನಿಜಗಳ ಮೇಲೆ ಕಣ್ಣಿಟ್ಟಿದ್ದಾರೆ. ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಟ್ರಂಪ್ ಪಾಕಿಸ್ತಾನದೊಂದಿಗೆ ಗಣಿಗಾರಿಕೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಟ್ರಂಪ್ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾರೆ. ಅಮೆರಿಕದ ಮಿಲಿಟರಿ ಅಗತ್ಯಗಳಿಗಾಗಿ ಪಾಕಿಸ್ತಾನದ ವಾಯುನೆಲೆಗಳನ್ನು ಮತ್ತು ಭೌಗೋಳಿಕ ನೆಲೆಯನ್ನು ಬಳಸಿಕೊಳ್ಳುವ ಉದ್ದೇಶವನ್ನು ಟ್ರಂಪ್‌ ಹೊಂದಿದ್ದಾರೆ.

Narendra Modi Donald Trump

ಟ್ರಂಪ್‌ಗೆ ಭಾರತದ ಮೇಲೆ ಸಿಟ್ಯಾಕೆ?
ಟ್ರಂಪ್‌ ಸಿಟ್ಟಿಗೆ ಹಲವು ಕಾರಣಗಳನ್ನು ನೀಡಬಹುದು. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಟ್ಯಾರಿಫ್‌ ಹಾಕುವ ದೇಶ ಎಂದು ಟ್ರಂಪ್‌ ಮೊದಲ ಅವಧಿಯಲ್ಲೇ ದೂರಿದ್ದರು. ಎರಡನೇ ಅವಧಿಯಲ್ಲಿ ಭಾರತವನ್ನು ಡೆಡ್‌ ಎಕಾನಮಿ ಎಂದು ಕರೆದಿದ್ದರು. ಅಮೆರಿಕದ ಕಂಪನಿಗಳ ಭಾರತದ ಹೂಡಿಕೆಯನ್ನು ವಿರೋಧಿಸುತ್ತಿರುವ ಟ್ರಂಪ್ ಭಾರತವನ್ನು ಮತ್ತೊಂದು ಚೀನಾ ಆಗಲು ನಾನು ಬಿಡುವುದಿಲ್ಲ. ಅಮೆರಿಕದ ಕಂಪನಿಗಳು ಅಮೆರಿಕದಲ್ಲಿ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಆಪರಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಮುಖ್ಯವಾಗಿ ರಾವಲ್ಪಿಂಡಿ ಬಳಿಯ ನೂರ್‌ ಖಾನ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದು ಅಮೆರಿಕಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮೆರಿಕ ನಿರ್ಮಿತ ಎಫ್‌16 ಯುದ್ಧ ವಿಮಾನಗಳಿದ್ದ ಈ ನೆಲೆಯ ಮೇಲೆ ಭಾರತ ದಾಳಿ ಮಾಡಿತ್ತು. ದಾಳಿಯಿಂದಾಗಿ ಹಲವು ಎಫ್‌16 ಯುದ್ಧ ವಿಮಾನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಇದನ್ನು ಅಮೆರಿಕದ ಅನಧಿಕೃತ ವಾಯು ನೆಲೆ ಎಂದೇ ಕರೆಯಲಾಗುತ್ತದೆ.

ಕೆಲ ರಕ್ಷಣಾ ವಿಶ್ಲೇಷಕರ ಪ್ರಕಾರ, ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ ಅಮೆರಿಕದ ಪರ್ಲ್‌ ಹರ್ಬರ್‌ ನೌಕಾ ನೆಲೆಯ ಮೇಲೆಯ ದಾಳಿ ನಡೆಸಿತ್ತು. ಈ ದಾಳಿಯ ನಂತರ ಅಮೆರಿಕ ನಿರ್ಮಿತ ಯುದ್ಧ ವಿಮಾನಗಳ ಮೇಲೆ ನಡೆದ ಭೀಕರ ದಾಳಿ ಇದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಭಾರತ ಮತ್ತು ಪಾಕ್‌ ನಡುವಿನ ಯುದ್ಧ ನಿಲ್ಲಿಸಲು ನಾನು ಕಾರಣ ಎಂದು ಟ್ರಂಪ್‌ ಹೇಳುತ್ತಾ ಬಂದಿದ್ದಾರೆ. ಆದರೆ ಭಾರತ ಇಲ್ಲಿಯವರೆಗೆ ಟ್ರಂಪ್‌ಗೆ ಯಾವುದೇ ಕ್ರೆಡಿಟ್‌ ನೀಡಿಲ್ಲ.

noor khan air base pakistan operation sindoor

ಪ್ರಧಾನಿ ನರೇಂದ್ರ ಮೋದಿ ಜಿ7 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿಯಾಗಲು ಕೆನಡಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಟ್ರಂಪ್‌ ಮೋದಿ ಅವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಮೋದಿ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವ ಕಾರಣ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಟ್ರಂಪ್‌ ಆಹ್ವಾನ ನೀಡುವಾಗ ಪಾಕ್‌ ಸೇನಾ ಮುಖ್ಯಸ್ಥ ಆಸೀಫ್‌ ಮುನೀರ್‌ ಸಹ ಅಮೆರಿಕದಲ್ಲೇ ಇದ್ದರು. ಒಂದು ವೇಳೆ ಅಮೆರಿಕಕ್ಕೆ ತೆರಳಿದ್ದರೆ ಮೋದಿ ಮತ್ತು ಮುನೀರ್‌ ಜೊತೆ ನಿಂತು ಯುದ್ಧ ನಿಲ್ಲಿಸಿದ್ದು ನಾನು ಎಂದು ಪೋಸ್‌ ಕೊಡಲು ಟ್ರಂಪ್‌ ಮುಂದಾಗಿದ್ದರು. ಆದರೆ ಮೋದಿ ನಯವಾಗಿ ಟ್ರಂಪ್‌ ಆಹ್ವಾನವನ್ನು ತಿರಸ್ಕರಿಸಿದ್ದರು.

ಭಾರತದ ಜೊತೆಗಿನ ವ್ಯಾಪಾರ ಮಾತುಕತೆ ವಿಫಲವಾದ ನಂತರ ಟ್ರಂಪ್‌ ನಾಲ್ಕು ಬಾರಿ ಮೋದಿ ಅವರಿಗೆ ಕರೆ ಮಾಡಿದ್ದರು. ಆದರೆ ಮೋದಿ ಅವರು ಟ್ರಂಪ್‌ ಕರೆಯನ್ನು ತಿರಸ್ಕರಿಸಿದ್ದರು ಎಂದು ವರದಿಯಾಗಿತ್ತು. ಈ ಎಲ್ಲಾ ಕಾರಣಕ್ಕೆ ಟ್ರಂಪ್‌ ಭಾರತದ ವಿರುದ್ಧ ಸಿಟ್ಟಾಗಿರಬಹುದು ಎನ್ನಲಾಗುತ್ತಿದೆ.

ಭಾರತ ಯಾಕೆ ಮಧ್ಯಸ್ಥಿಕೆ ವಹಿಸಿಲ್ಲ:
ಭಾರತ ಇರಾನ್‌ ಮತ್ತು ಇಸ್ರೇಲ್‌ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಅಮೆರಿಕದ ಜೊತೆಗೂ ನಮ್ಮ ಸಂಬಂಧ ಹಾಳಾಗಿಲ್ಲ. ವ್ಯಾಪಾರ ಮಾತುಕತೆ ನಡೆಯುತ್ತಿದೆ. ಆದರೆ ಈ ಸಂಧಾನ ಸಭೆ ಅಮೆರಿಕ ಹೇಳಿದಂತೆ ನಡೆಯುತ್ತಿದೆ. ಟ್ರಂಪ್‌ ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ಅರ್ಥವಾಗುತ್ತಿಲ್ಲ.ಒಂದು ವೇಳೆ ಮಾತುಕತೆ ವಿಫಲವಾದರೆ ವಿಶ್ವಮಟ್ಟದಲ್ಲಿ ಮುಜುಗರವಾಗುವ ಸಾಧ್ಯತೆಯಿದೆ. ಬಹಳ ಮುಖ್ಯವಾಗಿ ಪಾಕಿಸ್ತಾನ ಸಂಧಾನಕ್ಕಿಂತ ಮುಖ್ಯವಾಗಿ ಅಮೆರಿಕದ ಅಣತಿಯಂತೆ ದಲ್ಲಾಳಿ ಕೆಲಸ ಮಾಡುತ್ತಿದೆ.

Share This Article
Facebook Whatsapp Whatsapp Telegram Copy Link
Cinema News
Karan Johar
ಓರ್ವ ನಟಿ ಬಿಟ್ಟು ಉಳಿದೆಲ್ಲರನ್ನ ಅನ್‌ಫಾಲೋ ಮಾಡಿದ ಜೋಹರ್ – ಅವಳೇಕೆ ಸ್ಪೆಷಲ್ ಅಂತ ಕಾಲೆಳೆದ ನೆಟ್ಟಿಗರು
Actress Bindiya 3
ರವಿಚಂದ್ರನ್ ವಿರುದ್ಧ ರೇಪ್ ಆರೋಪ ಮಾಡಿದ್ದ `ಹಳ್ಳಿಮೇಷ್ಟ್ರು’ ನಟಿ ಕಣ್ಣೀರು – 34 ವರ್ಷಗಳ ಬಳಿಕ ಕ್ಷಮೆಯಾಚನೆ!
bobby deol was a magical human being to be with pooja bhatt opens up about break up
ಬಾಬಿ ಡಿಯೋಲ್ ಜೊತೆ `ಲವ್‌’ – ಜೀವನದ ಅದ್ಭುತ ಘಳಿಗೆ ಎಂದ ಪೂಜಾ ಭಟ್
Vijay Trisha Krishnan
ʻಕರುಪ್ಪುʼ ಸಿನೆಮಾದಲ್ಲಿ ತ್ರಿಷಾ ಜೊತೆ ನಟಿಸುವ ಆಫರ್ ಸಿಕ್ಕಿದ್ರೂ ದಳಪತಿ ನಿರಾಕರಿಸಿದ್ದೇಕೆ? – ಸೀಕ್ರೆಟ್ ಬಿಚ್ಚಿಟ್ಟ ಡೈರೆಕ್ಟರ್

You Might Also Like

Shubman Gill 1

ಶತಕ ಸಿಡಿಸಿ ಗುಜರಾತ್‌ ಫೈನಲ್‌ಗೆ ಕರೆದೊಯ್ದ ಕ್ಯಾಪ್ಟನ್‌ ಗಿಲ್‌ – ಟ್ರೋಫಿಗಾಗಿ ಆರ್‌ಸಿಬಿ ವಿರುದ್ಧ ಫೈಟ್‌

6 hours ago
bengaluru rain death

ಬೆಂಗಳೂರು| ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ಸಾವು

7 hours ago
Supreme Court 1 2

NEET UG ಪ್ರಶ್ನೆಪತ್ರಿಕೆ ಸೋರಿಕೆ – ಎನ್‌ಟಿಎಗೆ ಸುಪ್ರೀಂಕೋರ್ಟ್ ತರಾಟೆ

8 hours ago
Sanjay Raut 1

ಸಿದ್ದರಾಮಯ್ಯ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯ್ತು: ಸಂಜಯ್ ರಾವತ್

8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact