ಗುವಾಹಟಿ: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಜೆಪಿ ಸೇರಲು ಬಯಸುವುದಾದರೆ ನಾನು ಅವರ ಮನೆಗೆ ಹೋಗಿ ಅವರನ್ನು ಕರೆದೊಯ್ಯುತ್ತೇನೆ. ಇಲ್ಲದಿದ್ದರೆ ಅವರು ಪ್ರಧಾನಿಯನ್ನು ಭೇಟಿ ಮಾಡುವ ಅವಶ್ಯಕತೆ ಏನು ಎಂದು ಪ್ರಶ್ನಿಸುವ ಮೂಲಕ ಅಸ್ಸಾಂ (Assam) ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ವಿವರಿಸಲು ಮೋದಿ (PM Narendra Modi) ಬಳಿ ಮಲ್ಲಿಕಾರ್ಜುನ ಖರ್ಗೆ ಸಮಯ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಅವರಿಗೆ ಇಂಗ್ಲಿಷ್ ಚೆನ್ನಾಗಿ ಓದಲು ಮತ್ತು ಬರೆಯಲು ಬರುತ್ತದೆ. ಪ್ರಣಾಳಿಕೆಯನ್ನು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆದಿದ್ದೀರಿ. ಪ್ರಣಾಳಿಕೆಯನ್ನು ಜನರ ಮುಂದೆ ಇಡಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿ 9.21% ಮತದಾನ – ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ವೋಟ್
Advertisement
#WATCH | Guwahati: On Congress president Mallikarjun Kharge's statement that "PM Modi should read our manifesto first and then we can have a discussion on it", Assam CM Himanta Biswa Sarma says, "PM Modi can read and write English very well. You (Congress) have written your… pic.twitter.com/1X1wIQJZe0
— ANI (@ANI) April 25, 2024
Advertisement
ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ದೇಶದ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯನ್ನು ತೆಗೆದುಕೊಳ್ಳುತ್ತದೆ. ಜನರು ಬದುಕಿದ್ದಾಗ ಲೂಟಿ ಮಾಡಿದ್ದು ಅಲ್ಲದೇ ಈಗ ವ್ಯಕ್ತಿ ಮೃತಪಟ್ಟ ಬಳಿಕವೂ ಲೂಟಿಗೆ ಇಳಿದಿದೆ ಎಂದು ಮೋದಿ ತಮ್ಮ ಪ್ರಚಾರ ಭಾಷಣದಲ್ಲಿ ವಾಗ್ದಾಳಿ ನಡೆಸಿದ್ದರು.
Advertisement
ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಮೋದಿಯವರು ನಮ್ಮ ಪ್ರಣಾಳಿಕೆಯನ್ನು ಓದಿಲ್ಲ. ಹೀಗಾಗಿ ಅವರ ಜೊತೆ ಪ್ರಣಾಳಿಕೆಯನ್ನು ಚರ್ಚೆ ಮಾಡಲು ಸಮಯ ನೀಡಬೇಕು ಎಂದು ತಿಳಿಸಿದ್ದರು.
Advertisement