ಚಾಮರಾಜನಗರ: ರೋಗಿಗಳಿಗೆ ಅವಧಿ ಮೀರಿದ ಗ್ಲುಕೋಸ್ ನೀಡಿ ಮೂವರು ರೋಗಿಗಳು ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ತಾಲೂಕು ಉಡಿಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
Advertisement
ಆರೋಗ್ಯ ಕೇಂದ್ರದಲ್ಲಿ ದಾಖಲಾಗುವ ರೋಗಿಗಳಿಗೆ ಅವಧಿ ಮೀರಿದ ಗ್ಲುಕೋಸ್ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದ್ದು ಇಂದು ಮೂವರು ರೋಗಿಗಳು ಅಸ್ವಸ್ಥಗೊಂಡ ಬಳಿಕ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಇಲ್ಲಿನ ವೈದ್ಯರು ಗೊತ್ತಿದ್ದು, ಗೊತ್ತಿದ್ದು ಅವಧಿ ಮೀರಿದ ಔಷಧಿ ನೀಡುತ್ತಿದ್ದಾರೆಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರಿಂದ, ವೈದ್ಯರು ಮತ್ತೊಂದು ಚುಚ್ಚುಮದ್ದು ನೀಡಿ ತಪ್ಪು ಮುಚ್ಚಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅವನನ್ನ ಪ್ಲೀಸ್ ಬಿಡಬೇಡಿ, ಅವನಿಗೆ ಶಿಕ್ಷೆಯಾಗಲೇ ಬೇಕು: ಪೊಲೀಸರನ್ನು ಬೇಡಿಕೊಂಡ ಆಸಿಡ್ ಸಂತ್ರಸ್ತೆ
Advertisement
Advertisement
ಆಸ್ಪತ್ರೆಯ ಉಗ್ರಾಣದಲ್ಲಿ ಮತ್ತಷ್ಟು ಅವಧಿ ಮೀರಿದ ಔಷಧಿಗಳ ಪತ್ತೆಯಾಗಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ವೈದ್ಯರು ಜಾಗ ಖಾಲಿ ಮಾಡಿದ್ದು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿರುವಾಗಲೇ ಇಂಟರ್ವ್ಯೂ ಅಟೆಂಡ್ ಮಾಡಿದ ಹಠವಾದಿ
Advertisement