ಬೆಂಗ್ಳೂರಿನಲ್ಲಿ 208 ಕೋಟಿ ವೆಚ್ಚದ ಕ್ರಯೋಜನಿಕ್ ಎಂಜಿನ್ ಘಟಕ ಉದ್ಘಾಟನೆ

Public TV
2 Min Read
Droupadi Murmu

ಬೆಂಗಳೂರು: ಹೆಚ್‌ಎಎಲ್(HAL) ಏರೋಸ್ಪೇಸ್ ಕೇಂದ್ರದಲ್ಲಿ 208 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಏಕೀಕೃತ ಕ್ರಯೋಜನಿಕ್ ಎಂಜಿನ್ (Cryogenic Engine) ಉತ್ಪಾದಕ ಘಟಕವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಉದ್ಘಾಟಿಸಿದ್ದಾರೆ.

ಇನ್ಮುಂದೆ ಇಸ್ರೋದ (ISRO) ಉಪಗ್ರಹ (Satellite) ವಾಹಕಗಳಿಗೆ ದೇಸೀಯವಾಗಿ ಹೆಚ್‌ಎಎಲ್ (HAL) ಕ್ರಯೋಜನಿಕ್ ಎಂಜಿನ್‌ಗಳನ್ನು ಉತ್ಪಾದನೆ ಮಾಡಲಿದೆ. ಇದನ್ನೂ ಓದಿ: AAP ಉರುಳಿಸಲು ಬಿಜೆಪಿ, ಕಾಂಗ್ರೆಸ್ ಒಟ್ಟಾಗಿ ಕುತಂತ್ರ ನಡೆಸುತ್ತಿವೆ – ಭಗವಂತ್ ಮಾನ್

ಕ್ರಯೋಜನಿಕ್ ಇಂಜಿನ್ ಬಾಹ್ಯಾಕಾಶ ಉಪಗ್ರಹ (Satellite) ವಾಹಕಗಳಿಗೆ ಅತ್ಯಗತ್ಯ. ಎಚ್‌ಎಎಲ್ 1993 ರಿಂದಲೂ ಇಸ್ರೋದ (ISRO) ಬಾಹ್ಯಾಕಾಶ ಸಂಶೋಧನೆಗಳಿಗೆ ಒತ್ತಾಸೆಯಾಗಿ ನಿಂತಿದೆ. ಎಚ್‌ಎಎಲ್‌ಗೆ ಈಗ ಮತ್ತೊಮ್ಮೆ ತನ್ನ ಸಾಮರ್ಥ್ಯ ತೋರಿಸುವ ಸಮಯ ಬಂದಿದೆ. ಅತ್ಯಾಧುನಿಕ ತಂತ್ರಜ್ಞಾನದಡಿ ಕ್ರಯೋಜನಿಕ್ ಎಂಜಿನ್ ಉತ್ಪಾದನೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿರುವುದು ಒಂದು ದೊಡ್ಡ ಮೈಲಿಗಲ್ಲು. ಅಲ್ಲದೇ ಕ್ರಯೋಜನಿಕ್ ಎಂಜಿನ್ ಉತ್ಪಾದಿಸುತ್ತಿರುವ ಜಗತ್ತಿನ 6 ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ದೇಶಸೇವೆ ಮಾಡುವಲ್ಲಿ ಎಚ್‌ಎಎಲ್‌ನ ಪಾತ್ರ ದೊಡ್ಡದು. ಡಾ.ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಮ್ಯಾನ್ ಅಂತಲೇ ಖ್ಯಾತಿ ಪಡೆದಿದ್ದರು. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಕೊಡುಗೆ ಅಜರಾಮರವಾಗಿದೆ. ಇಂತಹ ವಿಜ್ಞಾನಿಗಳ ಸೇವೆಯೇ ನಮ್ಮನ್ನು ಹಲವು ಅಪಾಯಗಳಿಂದ ಕಾಪಾಡುತ್ತಿದೆ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಹಾಕಲು ಅವಕಾಶ ಕೊಡಿ – ಹೈಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿ

ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿ, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಶತಮಾನಗಳಿಂದ ಹೆಜ್ಜೆ ಗುರುತು ಉಳಿಸಿಕೊಂಡು ಬಂದಿದೆ ಎಂದು ಶ್ಲಾಘಿಸಿದ್ದಾರೆ.

Droupadi Murmu 2 1

ವಿಜ್ಞಾನಕ್ಕೆ ಎಲ್ಲೆ ಇಲ್ಲ. ಮಾನವನ, ಜೀವಸಂಕುಲದ ಹಿತ ಕಾಪಾಡವುದೇ ವಿಜ್ಞಾನದ ಅಂತಿಮ ಗುರಿಯಾಗಿದೆ. ಕ್ರಯೋಜನಿಕ್ ಎಂಜಿನ್ ಉತ್ಪಾದನೆ ಬಗ್ಗೆ ಕಳೆದ ನಾಲ್ಕೈದು ದಶಕಗಳಿಂದಲೂ ಚರ್ಚೆ ನಡೀತ್ತಿತ್ತು. ಇದೀಗ ನಮ್ಮ ರಾಜ್ಯ ಕ್ರಯೋಜನಿಕ್ ಇಂಜಿನ್ ಉತ್ಪಾದಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಎಚ್‌ಎಎಲ್ ವಿಜ್ಞಾನಿಗಳಿಗೆ ಇದರ ಯಶಸ್ಸು ಸಲ್ಲಲಿದೆ. ಶೇ.25 ಏರೋಸ್ಪೇಸ್ ಬಿಡಿಭಾಗಗಳನ್ನು ಬೆಂಗಳೂರಿನಲ್ಲೇ ಉತ್ಪಾದಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇಸ್ರೋಯಿಂದ ಹೈಬ್ರಿಡ್ ಎಂಜಿನ್ ಉತ್ಪಾದಿಸುವ ಗುರಿಯನ್ನು ಇಟ್ಟುಕೊಂಡಿದೆ. ರಾಜ್ಯದಲ್ಲಿ ಆರ್ ಅಂಡ್ ಡಿ ನೀತಿ ಜಾರಿಗೊಳಿಸಲಾಗಿದ್ದು, ಇದು ರಕ್ಷಣಾ ಸಂಶೋಧನೆಗೆ ಪೂರಕವಾಗಲಿದೆ ಎಂದು ಹೇಳಿದ್ದಾರೆ.

ಇನ್ನೂ ನಮ್ಮ ಹೆಮ್ಮೆಯ ಇಸ್ರೋ ಸಾಧನೆಗಳಲ್ಲಿ ಒಂದೆನಿಸಿದ ಮಂಗಳಯಾನಕ್ಕೆ ನಿನ್ನೆಗೆ ಭರ್ತಿ 8 ವರ್ಷ. ಇಸ್ರೋ ನಿರ್ಮಿತ ಮಾರ್ಸ್ ಆರ್ಬಿಟರ್ ಮಿಷನ್ (Mars Orbiter Mission) ಮಂಗಳನ ಕಕ್ಷೆ ತಲುಪಿ ಎಂಟು ವರ್ಷವಾಗಿದೆ. ಇದು ಆರು ತಿಂಗಳಿದ್ರೆ ಸಾಕು ಎಂದು ಇಸ್ರೋ ಭಾವಿಸಿತ್ತು. ಆದ್ರೆ, ವಿಜ್ಞಾನಿಗಳ ಅಂದಾಜನ್ನು ಮೀರಿ ಮಾರ್ಸ್ ಆರ್ಬಿಟರ್ ಮಿಷನ್ ಈಗಲೂ ಉತ್ತಮವಾಗಿ ಕಾರ್ಯನಿರ್ವಹಿಸ್ತಿದೆ. ಮಂಗಳ ಕಕ್ಷೆಗೆ ಸೇರಿದ ದಿನದಿಂದಲೂ ಕೆಂಪು ಗ್ರಹದ ಕುರಿತ ಚಿತ್ರಗಳನ್ನು, ಮಾಹಿತಿಗಳನ್ನು ನಿರಂತರವಾಗಿ ಕಳಿಸುತ್ತಲೇ ಇದೆ. ಈ ವಿಚಾರದಲ್ಲಿ ಇಸ್ರೋ ವಿಜ್ಞಾನಿಗಳು ಖುಷಿ ಆಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *