ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತೃತ್ವದ ಎನ್‍ಡಿಎ 2014ರ ಚುನಾವಣೆಯಂತೆ ಈ ಬಾರಿಯೂ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದೆ.
ಭಾನುವಾರ ಸಂಜೆ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಎನ್‍ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಒಟ್ಟು 542 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು ಬಹುಮತಕ್ಕೆ 272 ಸ್ಥಾನಗಳು ಬೇಕು. ತಮಿಳುನಾಡಿನ ವೆಲ್ಲೂರಿನಲ್ಲಿ ಆದಾಯ ತೆರಿಗೆ ದಾಳಿ ವೇಳೆ ಕೋಟಿಗಟ್ಟಲೇ ದುಡ್ಡು ಸಿಕ್ಕಿತ್ತು. ಹೀಗಾಗಿ ಅಲ್ಲಿನ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.
Advertisement
2014ರ ಚುನಾವಣೆಯಲ್ಲಿ ಎನ್‍ಡಿಎ 334, ಯುಪಿಎ 59, ಇತರರು 150 ಸ್ಥಾನಗಳನ್ನು ಗೆದ್ದಿದರು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
ಯಾವ ಸಮೀಕ್ಷೆ ಏನು ಹೇಳುತ್ತೆ?
ಟೈಮ್ಸ್ ನೌ ವಿಎಂಆರ್: ಎನ್‍ಡಿಎ – 306, ಯುಪಿಎ – 132, ಇತರೆ 104
ಜನ್ ಕಿ ಬಾತ್ : ಎನ್‍ಡಿಎ – 305, ಯುಪಿಎ – 124, ಮಹಾಘಟ ಬಂಧನ 26, ಇತರೆ 87
ಸಿವೋಟರ್: ಎನ್‍ಡಿಎ – 287, ಯುಪಿಎ – 128, ಮಹಾಘಟಬಂಧನ 40, ಇತರೆ 87
ನ್ಯೂಸ್‍ನೇಷನ್: ಎನ್‍ಡಿಎ – 286, ಯುಪಿಎ – 122, ಇತರೆ 134
Advertisement
Advertisement