Exclusive- ನನ್ನ ಜೊತೆ ಇರೋದು ನನ್ನದೇ ಒಡವೆ, ನರೇಶ್ ಪತ್ನಿ ರಮ್ಯಾದ್ದಲ್ಲ : ನಟಿ ಪವಿತ್ರಾ ಲೋಕೇಶ್

Public TV
2 Min Read
pavitra

ಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಸಂಬಂಧದ ಪ್ರಕರಣ ಹಲವು ರೂಪಗಳನ್ನು ಪಡೆದುಕೊಂಡಿದೆ. ಪವಿತ್ರಾಗಾಗಿ ತಮ್ಮ ಪತಿ ತಮಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ ನಂತರ, ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಪವಿತ್ರಾ ಕೊರಳಲ್ಲಿರುವ ಅನೇಕ ಒಡವೆಗಳು ತಮ್ಮವೇ ಎಂದೂ ರಮ್ಯಾ ಹೇಳಿಕೆ ನೀಡಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.

RAMYA

‘ಬೇರೆ ಯಾರದೋ ಒಡವೆಯನ್ನು ಹಾಕಿಕೊಂಡು ಮರೆಯುವಂತಹ ಗತಿ ನನಗೆ ಬಂದಿಲ್ಲ. ನನ್ನಲ್ಲಿಯೇ ಬಹಳಷ್ಟು ಒಡವೆಗಳಿವೆ. ನಾನು ಕಷ್ಟಪಟ್ಟು ಸಂಪಾದನೆ ಮಾಡಿದ ಒಡವೆಗಳು ಅವು. ನನ್ನ ತಾಯಿ ಕಾಲೇಜು ದಿನಗಳಲ್ಲಿ ನನಗೊಂದು ಚೈನ್ ಮತ್ತು ಉಂಗುರು ಕೊಟ್ಟಿದ್ದರು. ಆಮೇಲೆ ಸಂಪಾದನೆ ಮಾಡಿ ಸಾಕಷ್ಟು ಒಡವೆಗಳನ್ನು ಖರೀದಿಸಿದ್ದೇನೆ. ಅವುಗಳನ್ನು ನಾನೇ ಖರೀದಿಸಿದ್ದೇನೆ ಎನ್ನುವುದಕ್ಕೆ ನನ್ನ ಬಳಿ ರಸೀದಿ ಇದೆ’ ಎಂದಿದ್ದಾರೆ ಪವಿತ್ರಾ ಲೋಕೇಶ್. ಇದನ್ನೂ ಓದಿ : Exclusive- ನಟ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆ ಆಗಿದ್ದಾರಾ? : ಇವತ್ತು ಇಲ್ಲ, ನಾಳೆ ಗೊತ್ತಿಲ್ಲ ಎಂದ ನಟಿ

vlcsnap 2022 07 01 13h11m13s110

ಒಬ್ಬರ ಒಡವೆ ಮತ್ತೊಬ್ಬರ ಒಡವೆ ರೀತಿಯಲ್ಲಿ ಇರಬಾರದು ಅಂತಿದೆಯಾ ಎಂದು ಪ್ರಶ್ನೆಯನ್ನೂ ಮಾಡಿರುವ ಪವಿತ್ರಾ ಲೋಕೇಶ್, “ಐಶ್ವರ್ಯ ರೈ ಹಾಕಿದ ಒಡವೆ ನನ್ನ ಬಳಿ ಇದ್ದರೆ, ಅದು ಅವರದ್ದು ಹೇಗೆ ಆಗುತ್ತದೆ? ನರೇಶ್ ಅವರಷ್ಟು ನಾನು ಶ್ರೀಮಂತ ಅಲ್ಲದೇ ಇರಬಹುದು. ಆದರೆ, ನೂರಾರು ಸಿನಿಮಾಗಳಲ್ಲಿ ನಟಿಸಿ ಸಂಪಾದಿಸಿದ್ದೇನೆ. ಅದರಿಂದಲೇ ಅನೇಕ ಒಡವೆಗಳನ್ನು ಖರೀದಿಸಿರುವೆ. ಕಂತಿನ ರೂಪದಲ್ಲಿ ಕೆಲವು ಒಡವೆಗಳನ್ನು ಖರೀದಿಸಿದ್ದೇನೆ’ ಎಂದಿದ್ದಾರೆ ಪವಿತ್ರಾ ಲೋಕೇಶ್.

ರಮ್ಯಾ ಮಾಡುತ್ತಿರುವ ಎಲ್ಲ ಆರೋಪಗಳಲ್ಲೂ ಹುರುಳಿಲ್ಲ. ನನ್ನ ಹೆಸರನ್ನು ಅವರು ಹಾಳು ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆದರೆ ನಾನೂ ಕೂಡ ಕಾನೂನು ರೀತಿಯಲ್ಲಿ ಕ್ರಮ ತಗೆದುಕೊಳ್ಳಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ. ತಮ್ಮ ಕೌಟುಂಬಿಕ ಕಲಹದಲ್ಲಿ ತಮ್ಮನ್ನು ಎಳೆತಂದಿರುವುದಕ್ಕೆ ತುಂಬಾ ನೋವಾಗಿದೆ ಎಂದೂ ಪವಿತ್ರಾ ಮಾತನಾಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *