ಬೆಂಗಳೂರು: ಲವ್ ಜಿಹಾದ್ ಕೇಸ್ ನಲ್ಲಿ ಕರ್ನಾಟಕ ಡಿಸಿ ಕುಟುಂಬವೇ ಭಾಗಿಯಾಗಿದ್ದು, ಮನೆ ಮೇಲೆ ದಾಳಿ ಮಾಡಿದಾಗ ಸ್ಫೋಟಕ ರಹಸ್ಯ ಹೊರ ಬಂದಿದೆ.
ಜನವರಿಯಲ್ಲಿ ದಾಖಲಾದ ಕೇರಳ ಯುವತಿಯ ಲವ್ ಜಿಹಾದ್ ಕೇಸ್ ನಲ್ಲಿ ಕಲಬುರುಗಿಯ ಕಮರ್ಷಿಯಲ್ ಟ್ಯಾಕ್ಸ್ ನ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿ ಭಾಗಿಯಾಗಿರುವುದು ತಿಳಿದು ಬಂದಿದೆ. ಯುವತಿ ಕೇರಳದ ಕೊಚ್ಚಿಯಿಂದ ಬೆಂಗಳೂರಿಗೆ ಓದಲೆಂದು ಬಂದಿದ್ದಳು. ಆಗ ಬೆಂಗಳೂರಿನ ಬಿಸಿನೆಸ್‍ಮೆನ್ ನಜೀರ್ ಖಾನ್ ಯುವತಿಯನ್ನು ಪ್ರೀತಿಸಿದ್ದನು. ನಂತರ ಆ ಯುವತಿಯ ತಲೆಕೆಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದ. ಮತಾಂತರ ಮಾಡಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆಸಿದ ಬಳಿಕ ನಜೀರ್ ಖಾನ್ ಯುವತಿಯನ್ನು ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿ ಇರಿಸಿದ್ದನು.
Advertisement
ನಜೀರ್ ಯುವತಿಯನ್ನು 15 ದಿನಗಳ ಕಾಲ ಡಿಸಿ ಇರ್ಷಾದುಲ್ಲಾ ಖಾನ್ ಮನೆಯಲ್ಲಿಯೇ ಇರಿಸಿ, ಬಳಿಕ ಆಕೆಯನ್ನು ಸೌದಿಗೆ ಕರೆದುಕೊಂಡು ಹೋಗಿದ್ದನು. ಸೌದಿಯಲ್ಲೂ ಕೂಡ ಯವತಿಯ ಮೇಲೆ ಶೇಖ್ ಗಳಿಂದ ನಿರಂತರ ಅತ್ಯಾಚಾರ ನಡೆದಿದೆ. ಈ ಬಗ್ಗೆ ಯುವತಿ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ನಜೀರ್ ಸೌದಿಯಿಂದ ಬೆಂಗಳೂರಿಗೆ ಮಾರ್ಗ ಮಧ್ಯೆ ಬರುತ್ತಿದ್ದಾಗ ಎನ್‍ಐಎ ತಂಡ ಆತನನ್ನು ಬಂಧಿಸಿ ಯುವತಿ ರಕ್ಷಣೆ ಮಾಡಿ ವಿಚಾರಣೆ ನಡೆಸಿದ್ದಾರೆ.
Advertisement
Advertisement
ವಿಚಾರಣೆ ನಡೆಸುವಾಗ ಯುವತಿ ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದು, ಇಡೀ ಲವ್ ಜಿಹಾದ್ ನ ಹಿಂದೆ ಡಿಸಿ ಇರ್ಷಾದುಲ್ಲಾ ಖಾನ್ ಕುಟುಂಬದ ಕೈವಾಡವಿತ್ತು ಎಂದು ತಿಳಿಸಿದ್ದಾಳೆ. ಕೊಚ್ಚಿ ಎನ್‍ಐಎ ಮಾಹಿತಿಯನ್ನು ಆಧರಿಸಿ ಎರಡು ದಿನಗಳ ಹಿಂದೆ ದಾಳಿ ನಡೆಸಿತ್ತು. ದೊಮ್ಮಲೂರು ಬಳಿಯ ಡೈಮಂಡ್ ಡಿಸ್ಟ್ರಿಕ್ಟ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯ ಅಸಲಿಯತ್ತು ಅನಾವರಣಗೊಂಡಿದೆ. ಡಿಸಿ ಪತ್ನಿಯೇ ಲವ್ ಜಿಹಾದ್ ನ ರೂವಾರಿಯೇ ಎಂದು ಎನ್‍ಐಎ ಮೂಲಗಳು ತಿಳಿಸಿವೆ.
Advertisement
ಡಿಸಿ ಪತ್ನಿ ಹಿಂದೂ ಯುವತಿಯರ ಹೆಸರಲ್ಲಿ ಫೇಸ್ ಬುಕ್, ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದು, ಅಕೌಂಟ್ ಗಳ ಮೂಲಕ ಹಿಂದೂ ಯುವತಿಯರನ್ನು ಸೆಳೆದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಳು ಎಂಬ ಸತ್ಯ ಬಯಲಿಗೆ ಬಂದಿದೆ. ಸದ್ಯ ಎನ್‍ಐಎ ತಂಡ ಡಿಸಿ ಇರ್ಷಾದುಲ್ಲಾ ಖಾನ್ ಪತ್ನಿಯಿಂದ 8 ಲ್ಯಾಪ್ ಟಾಪ್ ಹಾಗೂ 12 ಮೊಬೈಲ್ ಗಳ ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸುತ್ತಿದ್ದಾರೆ
ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಡಿಸಿ ಇರ್ಷಾದುಲ್ಲಾ ಖಾನ್, “ಈ ರೀತಿಯ ವಿಚಾರಗಳಿಗೆ ಹೋಗಬೇಡ ಎಂದು ಪತ್ನಿಗೆ ಈ ಹಿಂದೆ ತಿಳಿ ಹೇಳಿದ್ದೇನೆ. ಎನ್‍ಐಎ ತಂಡ ವಿಚಾರಣೆ ನಡೆಸಿದೆ ಹಾಗೂ ಯುವತಿ ನಮ್ಮ ಮನೆಗೆ ಬಂದು ಹೋಗಿದ್ದು ನಿಜ. ನನ್ನ ಪತ್ನಿ ಸಮಾಜ ಸೇವೆಯಲ್ಲಿ ತೊಡಗಿದ್ದು, ಆಕೆಯೇ ಸಹಾಯ ಮಾಡಿರಬಹುದು. ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.