ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯವರು ನಡುನೀರಿನಲ್ಲಿ ಕೈ ಬಿಡುತ್ತಾರೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಹೋಗದಂತೆ ಅವರೇ ಕೈ ಹಿಡಿದುಕೊಳ್ಳಬಹುದಿತ್ತು ಎಂದು ಅನರ್ಹ ಶಾಸಕ ಮುನಿರತ್ನ ಅವರು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಮುಂಬೈ ಹೋಟೆಲಿನಲ್ಲಿ ಇರಲೇ ಇಲ್ಲ. ನನ್ನ ಕೆಲಸದಿಂದ ಬೇರೆ ಬೇರೆ ಕಡೆ ಇದ್ದೆ. ಮೊದಲಿಗೆ ನಾನು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ ಜೊತೆ ಯಾವತ್ತು ಮಾತನಾಡಿಲ್ಲ ಎಂದರು.
Advertisement
Advertisement
ಬಿಜೆಪಿ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ನನ್ನ ಆಪ್ತ ಸ್ನೇಹಿತರಾದ ಬಸವರಾಜು ಮತ್ತು ಸೋಮಶೇಖರ್ ಇಬ್ಬರು ಏರ್‌ಪೋರ್ಟ್‌ಗೆ ಬಾ ಎಂದು ಕರೆದಿದ್ದರು. ಅದಕ್ಕೆ ನಾನು ಅಲ್ಲಿಗೆ ಹೋಗಿದ್ದೆ. ಆದರೆ ಅಲ್ಲಿ ಬಿಜೆಪಿ ಶಾಸಕರು, ಸಂತೋಷ್ ಇರುವ ಬಗ್ಗೆ ನನ್ನ ಸ್ನೇಹಿತರನ್ನೇ ಕೇಳಬೇಕು. ಎಲ್ಲ ವಿಚಾರವೂ ನನಗೂ ಗೊತ್ತಿದೆ. ಆದರೆ ನಾನು ಏನು ಹೇಳಲ್ಲ. ಎಲ್ಲವೂ ಮುಗಿದು ಹೋಗಿರುವ ಕಥೆ ಈಗ ಏಕೆ ಎಂದು ಪ್ರಶ್ನೆ ಮಾಡಿದರು.
Advertisement
ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಅವರು ನಡುನೀರಿನಲ್ಲಿ ಕೈ ಬಿಡುತ್ತಾರೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಶಾಸಕರು ಹೋಗದಂತೆ ಇವರೇ ಏಕೆ ಕೈ ಹಿಡಿದುಕೊಳ್ಳಬಾರದು. ಕಾಂಗ್ರೆಸ್ ಕೈ ಹಿಡಿದುಕೊಂಡಿದ್ದರೆ ಎಲ್ಲರೂ ಏಕೆ ಹೋಗುತ್ತಿದ್ದರು. ಒಂದು ವರ್ಷದಿಂದ ಎಲ್ಲರೂ ಓಡಿಹೋಗಲು ಪ್ರಯತ್ನ ಮಾಡುತ್ತಿದ್ದರು. ಆದರೆ ಸರ್ಕಾರ ಯಾರಿಗೂ ಸರಿಯಾಗಿ ಸ್ಪಂದನೆ ಕೊಡಲಿಲ್ಲ. ತಮ್ಮ ತಮ್ಮ ಶಾಸಕರನ್ನು ತಲೆ ಸವರಿಕೊಂಡು ಇದ್ದಿದ್ದರೆ ಈ ರೀತಿಯಾಗಿ ಆಗುತ್ತಿರಲಿಲ್ಲ ಎಂದು ಮುನಿರತ್ನ ಹೇಳಿದರು.
Advertisement