– ಇದು 700 ಕೋಟಿಯಲ್ಲ, ಬರೋಬ್ಬರಿ 2800 ಕೋಟಿ ಅಕ್ರಮ?
ಬೆಂಗಳೂರು: ಸಿಎಂ ವಿರುದ್ಧದ ಮುಡಾ (MUDA Case) ತನಿಖೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಈ ಹಿಂದೆ 1,095 ಸೈಟ್‌ಗಳು ಅಕ್ರಮ ನಡೆದಿದೆ ಎನ್ನಲಾಗಿತ್ತು. ಆದರೆ, ತನಿಖೆಯ ಮುಂದುವರಿದ ಭಾಗದಲ್ಲಿ ಬರೋಬ್ಬರಿ 4,921 ಸೈಟ್‌ಗಳೇ ಅಕ್ರಮ ಎನ್ನೋದು ಬಯಲಾಗಿದೆ.
50:50 ಅನುಪಾತ ಅಷ್ಟೇ ಅಲ್ಲ, 60:40 ಅನುಪಾತದಲ್ಲಿ ಲೇಔಟ್‌ಗೆ ಲೇಔಟ್‌ಗಳನ್ನೇ ಅಕ್ರಮ ಮಾಡಿದ್ದಾರೆ. ಅದಕ್ಕೆ ಪೂರಕ ದಾಖಲೆ ತಿದ್ದಿದ್ದಾರೆ ಎನ್ನುವುದು ಇ.ಡಿ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: 19ನೇ ವಯಸ್ಸಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು – ಮಾಲೂರು ಪುರಸಭೆ ಸದಸ್ಯೆ ಆಯ್ಕೆ ಅಸಿಂಧು
ಇ.ಡಿ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಸತ್ಯ ಬಯಲಾಗಿದೆ. ಇದು 700 ಕೋಟಿಯ ಅಕ್ರಮ ಅಲ್ಲ 2,800 ಕೋಟಿ ಅಕ್ರಮ. 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ ಆಗಿದೆ ಎನ್ನಲಾಗಿದೆ.
ಕೇವಲ 50:50 ಅನುಪಾತದಲ್ಲಷ್ಟೇ ಅಲ್ಲ, 60:40 ಅನುಪಾತದಲ್ಲೂ ಮೋಸ ಆಗಿದೆ. ಲೇಔಟ್‌ಗೆ ಲೇಔಟ್‌ಗಳೇ ಅಕ್ರಮ ಮಾಡಿರೋದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮುಡಾದ ಇಬ್ಬರು ಮಾಜಿ ಆಯುಕ್ತರಿಂದ ಅಕ್ರಮದ ಸರಮಾಲೆ ನಡೆದಿದೆ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಸೇರಿ ಅಕ್ರಮ ಲೇಔಟ್‌ಗಳ ನಿರ್ಮಾಣ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಮಂಡ್ಯದಲ್ಲಿ ಹೆಚ್‌ಡಿಕೆಗೆ ಬೃಹತ್ ಅಭಿನಂದನಾ ಸಮಾವೇಶ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್‌ಗಳನ್ನೇ ಮುಡಾ ಕಬ್ಜಾ ಮಾಡಿತ್ತು. ಕನ್ವರ್ಷನ್ ಲೇಔಟ್‌ಗಳಲ್ಲೂ ಅಕ್ರಮ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.