ಬೆಂಗಳೂರು: ರಾಜ್ಯದ ದೋಸ್ತಿ ಸರ್ಕಾರವೇ ಬೆಚ್ಚಿ ಬೀಳುವಂತಹ ಬೆಳವಣಿಗೆ ರಾಜಕೀಯದಲ್ಲಿ ನಡೆಯುತ್ತಿದ್ದು, ಯಾವ ಆಪರೇಷನ್ ಸಕ್ಸಸ್ ಆಗಲ್ಲ, ಯಾರು ಪಕ್ಷ ಬಿಡಲ್ಲ ಅನ್ನುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಿಜಕ್ಕೂ ಬೆಚ್ಚಿ ಬೀಳುವಂತ ಆಡಿಯೋ ಲಭ್ಯವಾಗಿದೆ.
ಗುಪ್ತಚರ ಇಲಾಖೆ ಬಿಜೆಪಿ ನಾಯಕರ ಆಪರೇಷನ್ ಕಮಲದ ತಂತ್ರಗಾರಿಕೆ ಕುರಿತ ಆಡಿಯೋ ಒಂದನ್ನ ಸಿಎಂ ಕುಮಾರಸ್ವಾಮಿ ಅವರಿಗೆ ನೀಡಿದ್ದು ಈಗ ಅದು ಔಟ್ ಆಗಿದೆ. 3 ನಿಮಿಷ 44 ಸೆಕೆಂಡ್ ಇರುವ ಆಡಿಯೋದಲ್ಲಿ ರಾಮುಲು ಆಪ್ತ ಮತ್ತು ದುಬೈ ಮೂಲದ ಉದ್ಯಮಿ ಮಾತನಾಡಿದ್ದಾರೆ. ಗುಪ್ತಚರ ಇಲಾಖೆ ನೀಡಿದ ದಾಖಲೆ ನೋಡಿ ಸಿಎಂ ಕುಮಾರಸ್ವಾಮಿ ರಾತ್ರೋ ರಾತ್ರಿ ಕಾಂಗ್ರೆಸ್ ಅಧಕ್ಷ ರಾಹುಲ್ ಗಾಂಧಿಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ಅತ್ತ ಸಿಎಂ ಕುಮಾರಸ್ವಾಮಿಯವರ ಕರೆ ಕೇಳಿ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಮಾಜಿ ಸಚಿವ ಶ್ರೀರಾಮುಲು ಆಪ್ತರೊಬ್ಬರು ದುಬೈ ಮೂಲದ ಉದ್ಯಮಿ ಜೊತೆ ಆಪರೇಷನ್ ಕಮಲಕ್ಕೆ ಹಣಕಾಸಿನ ನೆರವು ಕೇಳಿ ಸಂಭಾಷಣೆ ನಡೆಸಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ಆಪರೇಷನ್ ಕಮಲದ ಯತ್ನ ದುಬೈವರೆಗೂ ತಲುಪಿದ್ದು, ಅಲ್ಲಿಂದಲು ಹಣಕಾಸಿನ ನೆರವು ಸಿಗುತ್ತಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
Advertisement
ಗುಪ್ತಚರ ಇಲಾಖೆ ನೀಡಿದ ಆಡಿಯೋವನ್ನು ಕೇಳಿದ ತಕ್ಷಣ, ತಮ್ಮ ಶಾಸಕರನ್ನು ಹೇಗೆ ಹಿಡಿದಿಟ್ಟುಕೊಳ್ಳುವುದು ಎಂದು ಇನ್ನಿಲ್ಲದೆ ತಲೆಕೆಡಿಸಿಕೊಂಡಿದ್ದಾರೆ. ಸಮನ್ವಯ ಸಮಿತಿ ಸಭೆ, ಸಿಎಲ್‍ಪಿ ಸಭೆ, ಸಂಪುಟ ವಿಸ್ತರಣೆಗೆ ಸಿದ್ಧತೆ ಹೀಗೆ ನಾನಾ ಸರ್ಕಸ್ ಮಾಡುತ್ತಿರುವ ಸಿಎಂ ಈಗ ಆಡಿಯೋ ಕೇಳಿ ಕಾಂಗ್ರೆಸ್ ನಾಯಕರಿಗೆ ನಿಮ್ಮ ನಿಮ್ಮ ಶಾಸಕರ ಮೇಲೆ ಹದ್ದಿನ ಕಣ್ಣಿಡಿ ಎಂದು ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
Advertisement
3.44 ನಿಮಿಷದ ಆಡಿಯೋದಲ್ಲಿ ಏನಿದೆ?
ರಾಮುಲು ಆಪ್ತ : ಯಡಿಯೂರಪ್ಪ, ಶ್ರೀರಾಮುಲು ಸರ್ ಆಪರೇಷನ್ ಕಮಲ ಹೇಳಿಕೊಂಡು ಆರಂಭಿಸಿದ್ದಲ್ಲಾ..
ದುಬೈ ಮೂಲಕ ಉದ್ಯಮಿ : ಓಕೆ..
ರಾಮುಲು ಆಪ್ತ : 10 ಜನರ ಹೆಸರು ಇದೆ ಅಲ್ವಾ..?
ದುಬೈ ಮೂಲದ ಉದ್ಯಮಿ : ಹಳೆ 10 ಜನರಾ? ಹೊಸಬರಾ?
ರಾಮುಲು ಆಪ್ತ : ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೋಳಿ, ಆನಂದ್ ಸಿಂಗ್, ನಾಗೇಂದ್ರ, ಗಣೇಶ್, ಭೀಮಾ ನಾಯಕ್, ಬಿ.ಸಿ.ಪಾಟೀಲ್, ಪ್ರತಾಪ ಗೌಡ ಪಾಟೀಲ್ ಸೇರಿದಂತೆ 10 ಜನ ಕಾಂಗ್ರೆಸ್ ಶಾಸಕರು ನಮ್ಮ ಜೊತೆಗೆ ಬರಲು ಸಿದ್ಧರಿದ್ದಾರೆ.
ರಾಮುಲು ಆಪ್ತ : ಡಿಸೆಂಬರ್ ಮೊದಲ ವಾರ ಅಥವಾ 2ನೇ ವಾರದಲ್ಲಿ ಏನಾದರೂ ಮಾಡಿ ಆಪರೇಷನ್ ಕಮಲ ಮುಗಿಸಬೇಕು.
ದುಬೈ ಮೂಲದ ಉದ್ಯಮಿ : ಈಗ ಎಲ್ಲಾ ರೆಡಿಯಾಗಿದ್ಯಾ.?
ರಾಮುಲು ಆಪ್ತ : ಹೌದು ಮಾಡಬೇಕು, ಯಾರು ಫೋನ್‍ನಲ್ಲಿ ಮಾತನಾಡುತ್ತಿಲ್ಲ. ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಭೇಟಿಯಾಗಿ ಮಾಡುತ್ತಿದ್ದೇವೆ.
ದುಬೈ ಮೂಲದ ಉದ್ಯಮಿ: ಮಂಜು ಜೊತೆ ಯಾರ್ಯಾರು ಹೋಗುತ್ತಿದ್ದಾರೆ ಈ ಕೆಲಸ ಮಾಡಲು.?
ರಾಮುಲು ಆಪ್ತ : ಮಂಜು, ನವೀನ್, ಸರವಣ, ಮೂವರು ಹೋಗ್ತಾರೆ.
ದುಬೈ ಮೂಲದ ಉದ್ಯಮಿ: ಡೈರೆಕ್ಟ್ ಮಾತನಾಡುತ್ತಾರಾ ಇವರೆಲ್ಲಾ ಅವರ ಜೊತೆ?
ರಾಮುಲು ಆಪ್ತ : ಅವರ ಮೊಬೈಲ್‍ನಿಂದ ನೇರವಾಗಿ ಮಾತನಾಡಲ್ಲ, ಬೇರೆಯವರ ಬಳಿ ಹೋಗಿ ಅವರ ಮೊಬೈಲ್‍ನಿಂದ ಮಾತನಾಡುತ್ತಾರೆ.
ದುಬೈ ಮೂಲದ ಉದ್ಯಮಿ : ಯಾರಿಗೆ ಮಾತನಾಡಿಸುತ್ತಾರೆ? ರೆಡ್ಡಿಗಾ?
ರಾಮುಲು ಆಪ್ತ : ಹೌದು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲುಗೆ ಮಾತನಾಡಿಸುತ್ತಾರೆ.
ದುಬೈ ಮೂಲದ ಉದ್ಯಮಿ: ಪ್ಲಾನ್ ಏನು.? ಯಾರ್ಯಾರಿಗೆ ಎಷ್ಟು ಕೊಡಬೇಕಂತೆ?
ರಾಮುಲು ಆಪ್ತ : ಒಬ್ಬ ಎಂಎಲ್‍ಎಗೆ ಅಂದಾಜು 20 ರಿಂದ 25 ಕೋಟಿಯಷ್ಟು ಕೊಡಬೇಕು. ಜೊತೆಗೆ ಒಂದು ಕ್ಯಾಬಿನೆಟ್ ಪೋಸ್ಟ್.
ದುಬೈ ಮೂಲದ ಉದ್ಯಮಿ: ರಾಜೀನಾಮೆ ಯಾವಾಗ ಕೊಡ್ತಾರೆ.?
ರಾಮುಲು ಆಪ್ತ : ಯಾವಾಗ ಮಾಡುತ್ತಾರೆ ಗೊತ್ತಿಲ್ಲ. ಯಾರು ಡೈರೆಕ್ಟ್ ಆಗಿ ಫೋನ್‍ನಲ್ಲಿ ಮಾತನಾಡುತ್ತಿಲ್ಲ. ಯಡಿಯೂರಪ್ಪ, ಶ್ರೀರಾಮುಲು ಅವರೇ ಖುದ್ದಾಗಿ ಮಾತನಾಡುತ್ತಿದ್ದಾರೆ.
ದುಬೈ ಮೂಲದ ಉದ್ಯಮಿ: ಶ್ರೀರಾಮುಲು ಎಲ್ಲಿದ್ದಾರೆ?
ರಾಮುಲು ಆಪ್ತ : ಶ್ರೀರಾಮುಲು ಬೆಂಗಳೂರಿಗೆ ಬರ್ತಾರೆ. 27ಕ್ಕೆ ಕೋರ್ಟ್ ಇದೆ. 28 ರಂದು ಬಿಜೆಪಿ ಕಾರ್ಯಕರ್ತರೊಬ್ಬರ ಮದುವೆ ಅಟೆಂಡ್ ಮಾಡಿ, ರಾತ್ರಿ ರೆಡ್ಡಿ ಮತ್ತು ಶ್ರೀರಾಮುಲು ಭೇಟಿಯಾಗಿ ಮಾತನಾಡುತ್ತಾರೆ.
ದುಬೈ ಮೂಲದ ಉದ್ಯಮಿ: ರಾತ್ರಿ ರಮೇಶ್ ಜಾರಕಿಹೊಳಿ ಅವರೂ ಸಿಗ್ತಾರಾ? ರೆಡ್ಡಿ-ಶ್ರೀರಾಮುಲು ಅವರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗುತ್ತಾರಾ?
ರಾಮುಲು ಆಪ್ತ : ಗ್ಯಾರಂಟಿ ಇಲ್ಲ, ಭೇಟಿಯಾಗಬಹುದು.
ದುಬೈ ಮೂಲದ ಉದ್ಯಮಿ : ಎಲ್ಲಿ ಭೇಟಿಯಾಗ್ತಾರೆ.? ಮನೆಯಲ್ಲೇ ಭೇಟಿಯಾಗ್ತಾರಾ.? ಇಲ್ಲಾ ಬೇರೆ ಯಾವುದಾದರೂ ಜಾಗದಲ್ಲಿ ಭೇಟಿಯಾಗುತ್ತಾರಾ.?
ರಾಮುಲು ಆಪ್ತ: ವಸಂತನಗರದಲ್ಲಿ ಮನೆ ಇದೆಯಲ್ಲಾ. ನಿಮಗೆ ಗೊತ್ತಲ್ಲ, ಅಲ್ಲಿ ಭೇಟಿಯಾಗುತ್ತಾರೆ.
ದುಬೈ ಮೂಲದ ಉದ್ಯಮಿ : ಹಂಗಾದರೆ ಅವರ ಪ್ರೊಗ್ರಾಂ ಲಿಸ್ಟ್ ನನಗೆ ಕಳಿಸು. ಇದರ ಬಗ್ಗೆ ಅಪ್‍ಡೇಟ್ ಮಾಡುತ್ತಾ ಇರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv