ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಮ್ಮ ಶಾಸಕರನ್ನು ಸೆಳೆಯುತ್ತಿದ್ದಾರೆ ಎನ್ನುವ ದೋಸ್ತಿ ಸರ್ಕಾರದ ಆರೋಪಗಳಿಗೆ ಪೂರಕ ಎಂಬಂತೆ ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರಿಗೆ ಬಿಎಸ್‍ವೈ 50 ಕೋಟಿ ಆಫರ್ ನೀಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ.
Advertisement
Advertisement
ಈ ಹಿಂದೆ ಆಪರೇಷನ್ ಕಮಲ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿಯವರು ಈಗ ನೇರವಾಗಿ ಶಾಸಕರ ಜೊತೆ ಮಾತನಾಡುವುದಿಲ್ಲ. ಬದಲಾಗಿ ಅವರ ಆಪ್ತರ ಜೊತೆ ಮಾತನಾಡುತ್ತಾರೆ. ಹೀಗಾಗಿ ಶಾಸಕರನ್ನು ಸೆಳೆಯಲು ಅವರ ಪುತ್ರ ಶರಣಗೌಡ ಪಾಟೀಲ್ ಅವರ ಜೊತೆ ಡೀಲಿಂಗ್ ಮಾಡಿದ್ದಾರೆ ಎಂದ ಸಿಎಂ ಆರೋಪಿಸಿದರು.
Advertisement
ಶರಣಗೌಡ ಪಾಟೀಲ್ ಹೇಳಿದ್ದೇನು?
ಮೊನ್ನೆ ರಾತ್ರಿ ಕಾಲ್ ಬಂದಿತ್ತು. ಯಡಿಯೂರಪ್ಪನವರೇ ಕಾಲ್ ಮಾಡಿ ಆಫರ್ ನೀಡಿದರು. ಇದಾದ ಬಳಿಕ ರಾತ್ರಿ 12 ಗಂಟೆಗೆ ದೇವದುರ್ಗ ಐಬಿಗೆ ಬರಲು ಹೇಳಿದರು. ಐಬಿಗೆ ಹೋದಾಗ ಅಲ್ಲಿ ಶಾಸಕರಾದ ಶಿವನಗೌಡ ನಾಯಕ್ ಮತ್ತು ಹಾಸನ ಶಾಸಕ ಪ್ರೀತಂ ಗೌಡ ಇದ್ದರು. ಮಾತುಕತೆಯಲ್ಲಿ 50 ಕೋಟಿ ಆಫರ್ ನೀಡಿದರು. ಚುನಾವಣೆ ನಡೆದರೆ ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದರು. ಈ ವೇಳೆ ತಂದೆಯವರು ಅನರ್ಹರಾದರೆ ಏನು ಎಂದು ಕೇಳಿದ್ದಕ್ಕೆ ಅದಕ್ಕೆ ಏನು ತಲೆ ಕೆಡಿಸಿಕೊಳ್ಳಬೇಡ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ. ನೀಡಿ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಕೋರ್ಟ್ ನಲ್ಲಿ ಏನಾದರೆ ಆದರೆ ಎಂದು ಕೇಳಿದ್ದಕ್ಕೆ ಅದಕ್ಕೆಲ್ಲ ಹೆದರುವ ಅಗತ್ಯವಿಲ್ಲ. ಅಮಿತ್ ಶಾ, ಮೋದಿ ಇದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ಗಳನ್ನು ಬುಕ್ ಮಾಡಿದ್ದಾರೆ ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv