ಮೈಸೂರು: ಭಾರೀ ಕುತೂಹಲ ಕೆರಳಿಸಿದ್ದ ಮೈಸೂರು-ಕೊಡಗು (Mysuru-Kodagu) ಲೋಕಸಭಾ ಕ್ಷೇತ್ರಕ್ಕೆ ಎರಡು ಬಾರಿ ಸಂಸದರಾಗಿದ್ದ ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಈ ಬಾರಿ ಕಣಕ್ಕಿಳಿದಿದ್ದಾರೆ. ಗೆಲುವಿನ ವಿಶ್ವಾಸ ಹೊಂದಿರುವ ಯದುವೀರ್ ಅವರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
Advertisement
ಈ ನಡುವೆ ತಮ್ಮ ರಾಜಕೀಯ ಅನುಭವಗಳನ್ನ ʻಪಬ್ಲಿಕ್ ಟಿವಿʼ ನಡೆಸಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಜನರ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: General Elections 2024: ಮೈಸೂರಿನಲ್ಲಿ ಮತ್ತೆ `ಮಹಾರಾಜ’ಕೀಯ ದರ್ಬಾರ್ ಶುರು
Advertisement
Advertisement
ರಾಜಕೀಯ ಜೀವನದಿಂದ ಏನು ಬದಲಾವಣೆ ಕಂಡಿದ್ದೀರಿ?
ಯದುವೀರ್: ಮೊದಲೆಲ್ಲ ಎರಡು ಕಾರ್ಯಕ್ರಮಗಳು ಇರ್ತಿದ್ದವು, ಈಗ ದಿನದಲ್ಲಿ 10 ಕಾರ್ಯಕ್ರಮ ಆಗ್ತಿದೆ. ಸಾರ್ವಜನಿಕ ಜೀವನ ಬಂದಾಗ ಜನರಿಗೆ ಮತ್ತು ಜನ ಸೇವೆಗೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಅದರೊಂದಿಗೆ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ.
Advertisement
ಜೆಡಿಎಸ್ ಮುಖಂಡರನ್ನೂ ಹೇಗೆ ಸರಿದೂಗಿಸುತ್ತೀರಿ?
ಯದುವೀರ್: ಎರಡೂ ಪಕ್ಷಗಳ ಮುಖಂಡರ ನಡುವೆ ಹೊಂದಾಣಿಕೆ ಸ್ವಾಭಾವಿಕವಾಗಿದೆ. ಹೋದಲೆಲ್ಲ ಕಾರ್ಯಕರ್ತರಿಂದ ನಾಯಕರವರೆಗೂ ಒಳ್ಳೆಯ ಸಹಕಾರ ಸಿಗುತ್ತಿದೆ. ಇದು ಚುನಾವಣೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ಇದನ್ನೂ ಓದಿ: ಉತ್ತರ ಗೆದ್ದರೆ ಡೆಲ್ಲಿ ಗೆದ್ದಂತೆ! -ಯಾಕೆ ಉತ್ತರ ಪ್ರದೇಶಕ್ಕೆ ಇಷ್ಟೊಂದು ಮಹತ್ವ?
ರಾಜನಾದವರು ಸಾಮಾನ್ಯನಾಗಿ ಕೆಲಸ ಮಾಡ್ತಾರಾ?
ಯದುವೀರ್: ನಾನು ಮೊದಲಿನಿಂದಲೂ ಸ್ವಾಭಾವಿಕವಾಗಿದ್ದೇನೆ. ನೋಡುವ ದೃಷ್ಟಿಕೋನ ಬದಲಾಗಿರಬಹುದು ಅಷ್ಟೆ. ನಾನು ಮಾತ್ರ ಅಲ್ಲ ನಮ್ಮ ಪೂರ್ವಜರೂ ಜನರ ಜೊತೆಗೆ ಇದ್ದು, ಜನಸೇವೆ ಮಾಡಿದವರು. ನಮ್ಮ ತಾತನವರೂ ಸಾರ್ವಜನಿಕರ ಮಧ್ಯೆ ಇದ್ದು ಕೆಲಸ ಮಾಡಿದ್ದಾರೆ. ಭಾರತದಲ್ಲಿ ರಾಜಧರ್ಮ ಬಹಳ ಸ್ಪಷ್ಟವಾಗಿದೆ. ರಾಜ ಅಂದ್ರೆ ಒಡವೆ ಹಾಕಿಕೊಂಡು ಅರಮನೆಯಲ್ಲಿ ಕೂರುವುದಲ್ಲ. ಜನರ ಸೇವೆಗಾಗಿ ನಿಂತಿರುವ ವ್ಯಕ್ತಿ ನಿಜವಾದ ರಾಜ ಆಗ್ತಾನೆ.
ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದರಿಂದ ವಿರೋಧ ಕೇಳಿಬಂತಾ?
ಯದುವೀರ್: ವಿರೋಧ ಯಾರಿಂದಲೂ ಬಂದಿಲ್ಲ. ಪ್ರತಾಪ್ ಸಿಂಹ ಯಾವಾಗಲೂ ನಮ್ಮ ಸಂಪರ್ಕದಲ್ಲಿದ್ದರು, ಅವರು ಒಳ್ಳೆಯ ಮನುಷ್ಯ, ಭವಿಷ್ಯದಲ್ಲಿ ಅವರ ಹೆಸರು ಶಾಶ್ವತವಾಗಿರುತ್ತೆ. ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆ; ಹೆಚ್ಚು, ಕಡಿಮೆ ಮತಗಳ ಅಂತರದಿಂದ ಗೆದ್ದವರಿವರು
ಜನರಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ, ಹೇಗೆ ಪೂರೈಸುತ್ತೀರಾ?
ಯದುವೀರ್: ಜನರಿಗೆ ನಿರೀಕ್ಷೆಯಿದ್ದರೆ ಒಳ್ಳೆಯದು, ಜನಸೇವೆ ಮಾಡೋದಕ್ಕೆ ಸಿದ್ಧನಾಗಿದ್ದೀನಿ. ನಿರೀಕ್ಷೆ ದೊಡ್ಡದಾಗಿದ್ದರೆ, ಅದನ್ನೂ ಪೂರೈಸಲು ನಾನು ಕೈಲಾದ ಪ್ರಯತ್ನ ಮಾಡ್ತೀನಿ. ಪ್ರಧಾನಿ ಮೋದಿ ಅವರ ನಿರೀಕ್ಷೆಗೆ ಪೂರಕವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ.