ಹುಬ್ಬಳ್ಳಿ: ರಾಜ್ಯದಲ್ಲಿ ಹಿಜಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಆಜಾನ್ ಧ್ವನಿವರ್ಧಕಗಳ ಮೇಲೆ ಶಬ್ಧಮಿತಿ ಏರಿಕೆಯ ಬೆನ್ನಲ್ಲೇ ಇದೀಗ ಬಿಜೆಪಿ ನಾಕರೊಬ್ಬರ ಪತ್ರ ಹೊಸದೊಂದು ವಿವಾದಕ್ಕೆ ನಾಂದಿ ಹಾಡುತ್ತಿದೆ. ಮುಸ್ಲಿಂ ಸಮಾಜದ ಯುವಕ-ಯುವತಿಯರೊಂದಿಗೆ ವಿವಾಹ ಆಗಿರುವ ಎಸ್‌ಎಸ್‌ಕೆ ಸಮಾಜ (ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ) ಕುಟುಂಬಗಳನ್ನು ಬಹಿಷ್ಕರಿಸಿ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಹೌದು… ಮುಸ್ಲಿಂ ಯುವಕನೊಂದಿಗೆ ಮದುವೆ ಆಗಿರುವ ತಮ್ಮ ಸಮಾಜದ ಕುಟುಂಬವನ್ನು ಬಹಿಷ್ಕರಿಸಿ ಎಂದು ಹುಡಾ ಅಧ್ಯಕ್ಷ ನಾಗೇಶ್ ಕಲಬುರಗಿ, ಎಸ್ಎಸ್‌ಕೆ ಸಮಾಜದ ಧರ್ಮದರ್ಶಿಗಳಿಗೆ ಸರ್ಕಾರಿ ನಾಮಾಂಕಿತದಲ್ಲೇ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ: 5 ಅಂಗಡಿಗಳು ಭಸ್ಮ
ಕಳೆದ ಮೂರು ದಿನಗಳ ಹಿಂದೆಯಷ್ಟೇ ಎಸ್‌ಎಸ್‌ಕೆ ಸಮಾಜದ ಯುವತಿಯೊಬ್ಬರು ಮುಸ್ಲಿಂ ಯುವಕನೊಂದಿಗೆ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಇದಕ್ಕಾಗಿ ಲವ್ ಜಿಹಾದ್ ಎಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಯುವತಿ ತಾನೇ ಇಷ್ಟಪಟ್ಟು ಮದುವೆಯಾಗಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಅವರನ್ನು ಬಹಿಷ್ಕರಿಸಿ ಎಂದು ಪತ್ರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಅಪಹರಿಸಿ, ಸಾರ್ವಜನಿಕವಾಗಿ ಅತ್ಯಾಚಾರ ಮಾಡ್ತೀನಿ: ಮುಸ್ಲಿಂ ಮಹಿಳೆಯರಿಗೆ ಸ್ವಾಮೀಜಿ ಬೆದರಿಕೆ
ಅಲ್ಲದೇ, ತಮ್ಮ ಸಮಾಜದ ಯಾರೊಬ್ಬರೂ ಮುಸ್ಲಿಂ ಯುವಕ-ಯುವತಿಯರೊಂದಿಗೆ ಮದುವೆಯಾಗಿದರೂ ಅಂತಹ ಕುಟುಂಬಗಳನ್ನು ಸಮಾಜದಿಂದ ಹೊರಗಿಡೋದು, ದೇವಸ್ಥಾನ ಪ್ರವೇಶಕ್ಕೆ ನಿಷೇಧ ಹೇರುವುದು, ಅಂತಹ ಕುಟುಂಬಗಳಿಗೆ ಯಾರೂ ವಧು ಕೊಡುವಂತಿಲ್ಲ, ಸಮಾಜದ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸದಂತೆ ನಿಷೇಧ ಹೇರಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.