ರಾಯಚೂರು: ಅಕ್ರಮ ಸೇಂದಿ ತಯಾರಿಕಾ ದಂಧೆ ನಡೆಸುತ್ತಿದ್ದ ಮನೆ ಮೇಲೆ ಅಬಕಾರಿ ಪೊಲೀಸರು (Excise police) ದಾಳಿ ನಡೆಸಿ ಮಹಿಳೆಯನ್ನು ವಶಕ್ಕೆ ಪಡೆದ ಘಟನೆ ತಿಮ್ಮಾಪೂರಪೇಟೆಯಲ್ಲಿ (Timmapurpet)ನಡೆದಿದೆ.
ಆಂಜನೇಯ ಎಂಬಾತನಿಗೆ ಸೇರಿದ ಮನೆಯಲ್ಲಿ ಅಕ್ರಮ ಸೇಂದಿ ತಯಾರಿಕಾ ದಂಧೆ ನಡೆಯುತ್ತಿತ್ತು. ಸೇಂದಿ ತಯಾರಿಕೆಯಲ್ಲಿ ತೊಡಗಿದ್ದ ಆರೋಪಿ ಮಹಿಳೆ ಪಾರ್ವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ದೆಹಲಿಯ ಬ್ರಿಟಿಷ್ ಹೈಕಮೀಷನ್‌ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ
Advertisement
Advertisement
ದಾಳಿ ವೇಳೆ 12 ಕೆ.ಜಿ ಸಿಎಚ್ ಪೌಡರ್, 2 ಲೀಟರ್ ಕಲಬೆರಕೆ ಸೇಂದಿ, 2 ಮೊಬೈಲ್ ಸೇರಿದಂತೆ ಕಲಬೆರಕೆ ಸೇಂದಿ ತಯಾರಿಕೆಗೆ ಬಳಸುತ್ತಿದ್ದ 86,100 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Advertisement
Advertisement
ಈ ಸಂಬಂಧ ರಾಯಚೂರು (Raichur) ವಲಯ ಅಬಕಾರಿ ಉಪ ನಿರೀಕ್ಷಕರು ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಖರ್ಗೆ ತವರು ಜಿಲ್ಲೆಯಲ್ಲಿ ಆಪರೇಷನ್ ಹಸ್ತ- ಹಾಲಿ ಬಿಜೆಪಿ ಶಾಸಕರಿಗೆ ಗಾಳ