ಚಿತ್ರದುರ್ಗ: ಬಾರ್ ಮಾಲೀಕನಿಂದ ತಿಂಗಳ ಮಾಮೂಲಿ ಪಡೆಯುತ್ತಿದ್ದ ಅಬಕಾರಿ ಡಿವೈಎಸ್‍ಪಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.
Advertisement
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ನುಲೇನೂರು ಗ್ರಾಮದ ಎಸ್.ಎಲ್.ಎಂ ಬಾರ್ ಮಾಲೀಕ ರಾಜು ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಇಂದು ಅಬಕಾರಿ ಇಲಾಖೆ ಡಿವೈಎಸ್‍ಪಿ ಹರಳಯ್ಯ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ನಗರದ ಕೃಷ್ಣ ಭವನ ಹೋಟೆಲ್‍ನಲ್ಲಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕರ್ತವ್ಯಲೋಪ – ಮೂವರು ಕಾನ್ಸ್ ಟೇಬಲ್‌ಗಳು ಅಮಾನತು
Advertisement
Advertisement
ಪ್ರತಿದಿನ ಬಾರ್‌ಗೆ ಬರುತ್ತಿದ್ದ ಹರಳಯ್ಯ ಬಾರ್‌ನ ಅಕೌಂಟ್ ಬುಕ್ ಪರಿಶೀಲನೆ ಮಾಡುತ್ತಾ, ಕಿರುಕುಳ ನೀಡುತ್ತಿದ್ದರಂತೆ. ಸರಿಯಾಗಿ ಲೆಕ್ಕ ಪಾಲನೆ ಮಾಡಿಲ್ಲ ಅಂತ ದೌರ್ಜನ್ಯ ಮಾಡುತ್ತಾ ಅವಹೇಳನ ಮಾಡುತ್ತಿದ್ದರು. ಅಲ್ಲದೆ ಹಿಂದೆ ಬಾರ್‌ನಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಮ್ಯಾನೇಜರ್ ಬಳಿ ಸಹ ಮಾಮೂಲಿ ವಸೂಲಿ ರುಚಿ ಕಂಡುಕೊಂಡಿದ್ದ ಅಬಕಾರಿ ಅಧಿಕಾರಿಗಳಿಗೆ ಮಾಲೀಕರು ಮಾಮೂಲಿ ಕೊಡುವುದನ್ನು ತಡೆದ ಪರಿಣಾಮ ನಿತ್ಯ ಕಿರುಕುಳ ಹೆಚ್ಚಾಗಿತ್ತು. ಹೀಗಾಗಿ ಮನನೊಂದ ಬಾರ್ ಮಾಲೀಕ ರಾಜು ಎಸಿಬಿ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಗೋ ಕಳ್ಳರಿಗೆ ಸಹಾಯ ಮಾಡಿದ್ದ ಪೊಲೀಸರ ಬಗ್ಗೆಯಷ್ಟೇ ಮಾತನಾಡಿದ್ದೇನೆ: ಆರಗ ಜ್ಞಾನೇಂದ್ರ
Advertisement
ಆರೋಪ ಕೇಳಿಬಂದೊಡನೆ ಕಾರ್ಯ ಪ್ರವೃತ್ತರಾದ ಚಿತ್ರದುರ್ಗ ಎಸಿಬಿ ಎಸ್‍ಪಿ ಜಯಪ್ರಕಾಶ್, ಎಸ್‍ಐ ಪ್ರವೀಣ್ ನೇತೃತ್ವದಲ್ಲಿ ರಾಜು ಅವರಿಂದ ಹರಳಯ್ಯ ಹಣ ಪಡೆಯುವ ವೇಳೆ ದಾಳಿ ನಡೆಸಿದ್ದಾರೆ. ಬಳಿಕ ಹರಳಯ್ಯನನ್ನು ವಶಕ್ಕೆ ಪಡೆದು ನಿಯಮಾವಳಿಗ ಪ್ರಕಾರ ತನಿಖೆ ಮುಂದುವರೆಸಿದ್ದಾರೆ.