-ಬಸ್ ಪರಿಶೀಲನೆ ನಡೆಸಿದ್ರು ಪೊಲೀಸರಿಗೆ ಸಿಕ್ಕಿರಲಿಲ್ಲ ಮದ್ಯ! ಎಲ್ಲಿ ಬಚ್ಚಿಟ್ಟಿದ್ರು ಗೊತ್ತಾ?
ಕಾರವಾರ: ಪ್ರವಾಸಿಗರ ಬಸ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಹಾಗೂ ಇಬ್ಬರನ್ನು ಉತ್ತರ ಕನ್ನಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಕಾರವಾರದ ಮಾಜಾಳಿ ಚೆಕ್ಪೋಸ್ಟ್ ನಲ್ಲಿ ವಾಹನ ಪರಿಶೀಲನೆ ಮಾಡುವಾಗ ಪ್ರವಾಸಿಗರ ಬಸ್ನಲ್ಲಿ ಮದ್ಯ ಸಿಕ್ಕಿದೆ. ಬಸ್ನಲ್ಲಿ ಮದ್ಯ ಸಾಗಿಸುತ್ತಿದ್ದ ತುರುವೆಕೆರೆ ಮೂಲದ ನವೀನ್ ಕುಮಾರ್ ಹಾಗೂ ದಯಾನಂದ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ: 250ಲೀ. ಮದ್ಯ ನೆಲಕ್ಕೆ ಚೆಲ್ಲಿ ಅಧಿಕಾರಿಗಳಿಂದ ಬೆಂಕಿ
ಬಸ್ನಲ್ಲಿ ಕಂಪಾರ್ಟ್ಮೆಂಟ್ ಮಾಡಿ ಅದರಲ್ಲಿ ಮದ್ಯದ ಬಾಟಲ್ ಇಟ್ಟು ಸಾಗಿಸಲಾಗುತ್ತಿತ್ತು. ಬಸ್ ಒಳಗೆ ಪರಿಶೀಲನೆ ಮಾಡಿದಾಗ ಮದ್ಯ ಪತ್ತೆಯಾಗಿರಲಿಲ್ಲ. ಚಾಲಕ ಹಾಗೂ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಿದಾಗ ಮದ್ಯ ಬಚ್ಚಿಟ್ಟಿದ್ದ ಜಾಗ ಪತ್ತೆಯಾಗಿದೆ. ಒಟ್ಟು 70 ಲೀಟರ್ ಗೋವಾ ಮದ್ಯ ಹಾಗೂ 24 ಲೀಟರ್ ಬಿಯರ್ ಗಳನ್ನು ಸೇರಿದಂತೆ ಸುಮಾರು 80 ಸಾವಿರ ಮೌಲ್ಯದ ಮದ್ಯ ಹಾಗೂ 25 ಲಕ್ಷ ರೂ. ಮೌಲ್ಯದ ಬಸ್ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಕಾರವಾರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಕ್ಕೆ ಪಡೆದವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv