ಸ್ವಂತ ಮಗಳನ್ನೇ ಗುರು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ರು- ಮಾಜಿ ಪತ್ನಿ ಆರತಿ

Public TV
3 Min Read
GURU

ಬೆಂಗಳೂರು: ಮೀಟೂ ಆರೋಪ ಮಾಡಿದ್ದ ನಟಿಯರ ವಿರುದ್ಧ ರೇಗಾಡಿದ ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರು ತನ್ನ 14 ವರ್ಷದ ಸ್ವಂತ ಮಗಳು ಹಾಗೂ ಪತ್ನಿಯನ್ನೇ ಮಧ್ಯರಾತ್ರಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಸ್ಫೋಟಕ ವಿಚಾರವೊಂದು ಬಯಲಾಗಿದೆ.

ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ತಮ್ಮ ಆಕ್ರೋಶವನ್ನು ಗುರುಪ್ರಸಾದ್ ಮಂಗಳವಾರ ಹೊರಹಾಕಿದ್ದರು. ಈ ವಿಚಾರವಾಗಿ ಇಂದು ಗುರು ಮೊದಲ ಪತ್ನಿ ಆರತಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಚ್ಚರಿಯ ಸಂಗತಿಯೊಂದನ್ನು ಹೊರಹಾಕಿದ್ದಾರೆ.

ಯಾವುದೇ ವ್ಯಕ್ತಿ ಯಾರ ಬಗ್ಗೆಯೂ ಮಾತನಾಡಿದರೂ ಅದು ಒಪ್ಪುವಂತಹ ವಿಷಯವಲ್ಲ ಅನ್ನೋದು ನನ್ನ ಅಭಿಪ್ರಾಯವಾಗಿದೆ. ನಾನು ಟಿವಿ, ನ್ಯೂಸ್ ಪೇಪರ್ ಓದದೇ ಇರುವುದರಿಂದ ಯಾರಾದ್ರೂ ಹೇಳಿದ್ರೆ ಅಷ್ಟು ಮಾತ್ರ ನನಗೆ ಗೊತ್ತಿರುತ್ತದೆ. ಆದ್ರೆ ನನ್ನ ಮಗಳು ಯೂಟ್ಯೂಬ್ ನಲ್ಲಿ ಬಂದಂತಹ ಲಿಂಕ್ ತೋರಿಸಿದಳು. ಅದನ್ನು ನೋಡಿದಾಗ ಯಾವುದೇ ಒಬ್ಬ ವ್ಯಕ್ತಿಗೆ ಇನ್ನೊಬ್ಬ ಹೆಣ್ಣು ಅಥವಾ ಮಹಿಳೆ ಹಾಗೂ ಟ್ರಾನ್ಸ್ ಜೆಂಟರ್ ಬಗ್ಗೆಯೂ ಈ ತರ ಮಾತನಾಡುವ ಹಕ್ಕು ಇರಲ್ಲ ಅಂತ ಹೇಳಿದ್ರು.

ಗುರುಗೆ ಸ್ವಂತ ಮಗಳಿದ್ದಾಳೆ. ಹೀಗಾಗಿ ಎಲ್ಲರೂ ಹೆಣ್ಣು ಮಕ್ಕಳು ಸರಿಯಿಲ್ಲ ಅಂತ ಒಬ್ಬ ಅಪ್ಪನಾಗಿ ಹೇಳೋದಕ್ಕೂ ಮುಂಚೆ ಯೋಚನೆ ಮಾಡಬೇಕು. ಆತ ಯೋಚನೆ ಮಾಡುತ್ತಿಲ್ಲ ಅಂದ್ರೆ ಆತ ಅಪ್ಪನಾಗಿ ಬಿಹೇವ್ ಮಾಡ್ತಿಲ್ಲ ಅಂತ ಅರ್ಥ ಎಂದು ಪತಿ ಹೇಳಿಕೆಯ ವಿರುದ್ಧ ಗರಂ ಆದ್ರು.

guruprasad 2

ಯಾರ ಬಾಯಿಂದ ಹೆಣ್ಣು ಮಗು ಅಂತ ಪದ ಬರುತ್ತಾ ಇದೆ ಅಲ್ವಾ, ಆತ ತನ್ನ ಸ್ವಂತ 14 ವರ್ಷದ ಮಗಳನ್ನು ಹೆಂಡ್ತಿ ಸಮೇತ ಮಧ್ಯರಾತ್ರಿ ಆಚೆ ಹಾಕಿದ್ದರು. ಇದು ನಡೆದಿರುವ ಘಟನೆಯಾಗಿದೆ. ಆದ್ರೆ ನಾನು ಯಾವುದೇ ರಗಳೆ ರಂಪ ಮಾಡದೇ ಹೊರ ಬಂದಿದ್ದೇನೆ. ಒಬ್ಬ ವ್ಯಕ್ತಿಗೆ ನಾವು ಬೇಡ ಅಂತ ಹೇಳಿದ ಬಳಿಕ ಯಾವುದೇ ಗಲಾಟೆ ಮಾಡುವುದು ಬೇಕಿರಲಿಲ್ಲ. ಯಾಕಂದ್ರೆ ಆ ವ್ಯಕ್ತಿ ಬೇಡ ಅಂದ ಬಳಿಕ ರಗಳೆ ಮಾಡಿ ಪ್ರಯೋಜನವೇನು ಅಂತ ಎಲ್ಲೂ ಬರಲಿಲ್ಲ ಅಂತ ಹೇಳಿದ ಅವರು ಇದಾಗಿ 3 ವರ್ಷ ಆಯ್ತು ಅಂದ್ರು.

ಒಬ್ಬ ಅಪ್ಪನಾಗಿಯೂ ಗುರು ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ. ಅವರ ಮಗಳನ್ನು ಬಂದು ನೋಡುವುದಿಲ್ಲ. ನಮಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವೇ ಇಲ್ಲ. ಇಬ್ಬರೂ ಒಪ್ಪಿಕೊಂಡು ವಿಚ್ಛೇದನಕ್ಕೆ ಅಂತ ಹೋಗಿದ್ದೆವು. ಆಗ ಅವರು 2 ಸಲ ಬಂದ್ರು ಆ ನಂತರ ಕೋರ್ಟ್ ಗೂ ಬರುತ್ತಿಲ್ಲ. ಹೀಗಾಗಿ ಅವರ ಯಾವುದೇ ರೀತಿಯ ಸಂಪರ್ಕಕ್ಕೂ ನಾನು ಸಿಗುತ್ತಿಲ್ಲ. ಅವರ ಮನೆ ಹತ್ರ ಹೋದರೂ ಸಿಗುತ್ತಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿ ಕೊಡಿ ಅಂದ್ರೂ ಅವರು ಸಿಗ್ತಿಲ್ಲ ಅಂತ ಹೇಳಿದ್ರು.

31 guruprasad

ಎರಡನೇ ಸಲ ಚಿತ್ರದ ಶೂಟಿಂಗ್ ನಡೆದಿದ್ದು 3 ವರ್ಷಗಳ ಹಿಂದೆ. ಆವಾಗ ಎಲ್ಲಾ ಶೂಟಿಂಗ್ ಸಂದರ್ಭದಲ್ಲಿ ನಾನು ಅವರ ಜೊತೆ ಹೋಗುತ್ತಿದ್ದೆ. ಚಿತ್ರದ ಶೂಟಿಂಗ್ ವೇಳೆ ಮಾತ್ರ ನಾನು ನನ್ನ ಮಗಳು ಇದ್ವಿ ಅಂತ ಅಲ್ಲ. ನಿನ್ನೆ ಬೆನ್ನು ತೋರಿಸಿದ ಸೀನ್ ಬಗ್ಗೆ ಮಾತನಾಡಿದ್ರಲ್ಲ ಅಂದು ಕೂಡ ನಾನಿದ್ದೆ. ಹೀಗಾಗಿ ಅವರು ಅದನ್ನು ಸ್ಪೆಷಲ್ ಆಗಿ ಹೇಳುವುದು ಬೇಕಾಗಿಲ್ಲ ಅಂತ ಆರತಿ ಹೇಳಿದ್ರು.

ಪತ್ನಿ ಜೊತೆ ನನ್ನ ಜೊತೆ ಇದ್ದರು ಅಂತ ಗುರು ಹೇಳಿದ್ದರು. ಮಗಳಿಗೆ ರಜಾ ಇದ್ದಾಗಲೆಲ್ಲ ನಾನು ಹಾಗೂ ನನ್ನ ಮಗಳು ಅವರ ಜೊತೆ ಹೋಗುತ್ತಿದ್ದೆವು. ಹೀಗಾಗಿ ಈ ಸೀನ್ ಶೂಟಿಂಗ್ ವೇಳೆಯೂ ನಾವಿದ್ವಿ. ಇಡೀ ಸೀನ್ ಗೆ ನಾನು ನನ್ನ ಮಗಳು ಹಾಗೂ ಸಂಗೀತ್ ಭಟ್ ಕಾಸ್ಟ್ಯುಮ್ ಡಿಸೈನ್ ಮಾಡಿದ್ವಿ, ಕಥೆಗೆ ಬೇಕಾದಂತೆ ನಾವು ಮಾಡಿದ್ವಿ ಅಂತ ಅವರು ಅಂದು ಏನಾಯ್ತು ಎಂಬುದರ ಬಗ್ಗೆ ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=u4enQ9slDcc

Share This Article
Leave a Comment

Leave a Reply

Your email address will not be published. Required fields are marked *