ಮುರುಘಾ ಮಠದ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಕೊಡಿ: ನಗರಸಭೆ ಮಾಜಿ ಅಧ್ಯಕ್ಷ

Public TV
2 Min Read
chitradurga b kantaraj

ಚಿತ್ರದುರ್ಗ: ಪೋಕ್ಸೋ ಕೇಸ್‍ನಿಂದಾಗಿ (POCSO case) ಜೈಲು ಸೇರಿರುವ ಮುರುಘಾ ಶ್ರೀ ಸ್ಥಾನಕ್ಕೆ ನೂತನ ಪೀಠಾಧಿಪತಿ ನೇಮಿಸುವಂತೆ ಮಠದ ವಿರೋಧಿ ಬಣ ಸಭೆ ನಡೆಸಿದೆ. ಇದರ ಬೆನ್ನಲ್ಲೇ ಶೂನ್ಯ ಪೀಠ ಪರಂಪರೆಯ ಮುರುಘಾ ಮಠಕ್ಕೆ (Murugha Mutt) ಶೂದ್ರರನ್ನು ಪೀಠಾಧಿಪತಿಯಾಗಿ ನೇಮಿಸುವಂತೆ ಚಿತ್ರದುರ್ಗ ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಹೊಸ ಬಾಂಬ್ ಸಿಡಿಸಿದರು.

ಮುರುಘಾ ಶ್ರೀ  (Shivamurthy Murugha Sharanaru) ಬದಲಾವಣೆಗೆ ಸಭೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಶೂನ್ಯಪೀಠದ ಪರಂಪರೆಯ ಮಠದಲ್ಲಿ ಸರ್ವಧರ್ಮ, ಜಾತಿಗಳಿಗೂ ಸಮಾನ ಹಕ್ಕು ನೀಡಿರುವ ಪೀಠ ಇದಾಗಿದೆ. ಕೇವಲ ಒಂದು ಸಮುದಾಯಕ್ಕೆ ಮಠ ಸೀಮಿತವಾಗಿಲ್ಲ. ಮುರುಘಾಶ್ರೀ ಬದಲಾವಣೆಗೆ ಕೇವಲ ಒಂದು ಕೋಮಿನವರಿಗೆ ಅಧಿಕಾರ ಕೊಟ್ಟವರ್ಯಾರು? ಇದು ಬಸವತತ್ವದಡಿ ಬೆಳೆದು ನಿಂತಿರುವ ಪೀಠವಾಗಿದೆ ಎಂದರು.

muruga shree4444

ಶೂದ್ರರಾದ ಅಲ್ಲಮಪ್ರಭು ಈ ಪೀಠದ ಮೂಲ ಪೀಠಾಧ್ಯಕ್ಷರಾಗಿದ್ದರು. ಆದರೆ ಮುರುಘಾ ಶ್ರೀ ವಿರುದ್ಧ ಕೇಳಿಬಂದಿರುವ ಪೋಕ್ಸೋ ಆರೋಪದ ಬೆನ್ನಲ್ಲೇ ಶೂನ್ಯಪೀಠವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿ ಸಭೆ ನಡೆಸಿದ್ದು ಸರಿಯಲ್ಲ. ಈ ಮುರುಘಾ ಮಠ ವೀರಶೈವ ಲಿಂಗಾಯತರ ಆಸ್ತಿಯಲ್ಲ. ಶೂದ್ರರನ್ನು ಮಠದಲ್ಲಿ ಕಡೆಗಣಿಸಲಾಗ್ತಿದೆ ಎಂದು ಕಿಡಿಕಾರಿದರು.

ಮುರುಘಾ ಮಠದಲ್ಲಿ ಯಾವುದೇ ಸ್ಥಾನಮಾನ ಶೂದ್ರರಿಗೆ ನೀಡಿಲ್ಲ. ಇದೀಗ ಸಂದರ್ಭ ಒದಗಿ ಬಂದಿದೆ. ಹೀಗಾಗಿ ಯಾವುದೇ ಒಂದು ವರ್ಗದವರ ಒತ್ತಡಕ್ಕೆ ಸರ್ಕಾರ ಮಾನ್ಯತೆ ನೀಡಬಾರದು. ಶೂನ್ಯ ಪೀಠದ ಹೆಸರು ಬದಲಾವಣೆ ಮಾಡಿ ವೀರಶೈವ ಲಿಂಗಾಯತ ಮಠ ಎಂಬ ತೀರ್ಮಾನ ಸರಿಯಲ್ಲ. ಈ ಸಭೆಯಿಂದ ನಮಗೆ ಅವಮಾನ ಆಗಿದೆ. ನಮ್ಮ ಪೂರ್ವಜರು ಕಟ್ಟಿಸಿಕೊಟ್ಟಿರುವ ಮಠದ ವಿಚಾರದ ಬಗ್ಗೆ ಒಂದು ವರ್ಗದ ಸಭೆ ಸರಿಯಲ್ಲ. ಮಠದಲ್ಲಿ ಒಂದು ಸಮುದಾಯ ಕಬ್ಜ ಮಾಡಿಕೊಂದು ಹೋಗಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ತಿಳಿಸಿದರು.

Muruga Shree

ಈ ಪೀಠದ ಭವಿಷ್ಯಕ್ಕಾಗಿ ಎಲ್ಲಾ ಸಮುದಾಯ ಒಟ್ಟಾಗಿ ಹೋರಾಟ ಮಾಡುತ್ತೇವೆ. ಪೀಠಾಧಿಪತಿ ಬದಲಾವಣೆ ಮಾಡುವುದಾದರೆ ಶೂದ್ರರಿಗೆ ಪೀಠಾಧಿಪತಿ ಸ್ಥಾನ ಕೊಡಬೇಕು. ಹೀಗಾಗಿ ಸಭೆ ನಡೆಸಿದವರು ಹೊಸ ಸಂಘರ್ಷಕ್ಕೆ ದಾರಿ ಮಾಡದೇ ಸಭೆಯ ವಿಚಾರವನ್ನು ಅಲ್ಲಿಗೆ ಕೈಬಿಡಬೇಕು. ಒಂದು ವೇಳೆ ನೂತನ ಪೀಠಾಧಿಪತಿ ಆಯ್ಕೆ ಮಾಡುವುದಾದರೆ ಎಲ್ಲಾ ಸಮಾಜದ ಮುಖಂಡರು ಸೇರಿ ಆಯ್ಕೆ ಮಾಡಲಿ ಎಂದು ಹೇಳಿದರು. ಇಂದು ಮಧ್ಯಾಹ್ನ ಸಿಇಟಿ ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿ ಪ್ರಕಟ

ಅದರ ಬದಲಾಗಿ ಮುರುಘಾ ಮಠಕ್ಕೆ ದಕ್ಕೆಯಾಗಲು ಚಿತ್ರದುರ್ಗದ ಜನತೆ ಬಿಡಲ್ಲ. ಮುರುಘಾಶ್ರೀ ಕಲ್ಯಾಣ ಸಮಿತಿ ಕಟ್ಟಿಕೊಂಡು ಮುರುಘಾ ಪರಂಪರೆ ಉಳಿಸಲು ಮುಂದಾಗುತ್ತೇವೆಂದು ಸಭೆ ನಡೆಸಿದ ವೀರಶೈವ ಲಿಂಗಾಯತ ಮುಖಂಡರಿಗೆ ಟಾಂಗ್ ನೀಡಿದರು. ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *