ಮೈಸೂರು: ಎಲ್ಲ ಅನರ್ಹ ಅಭ್ಯರ್ಥಿಗಳಿಗೆ ಎಷ್ಟು ಹಣ ಬೇಕೋ ಕೇಳಿ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿಯೇ ಬನ್ನಿ. ಮಂತ್ರಿಗಳಿಗೂ ಹಣ ಬೇಕಿದ್ದರೆ ಅಲ್ಲಿಂದಲೇ ಫೋನ್ ಮಾಡಿ ನಾನು ಕಳುಹಿಸ್ತೀನಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಎಷ್ಟು ದುಡ್ಡು ಸಾಗಿಸಿದರೂ ಯಾರು ಕೇಳಲ್ಲ. ಅದಕ್ಕೆ 15ಕ್ಕೆ 15 ಗೆಲ್ಲುತ್ತೀನಿ ಅಂತಿದ್ದಾರೆ. ಬಿಎಸ್‍ವೈ ಬಳಿ ಸರ್ಕಾರ, ಗುಪ್ತವಾರ್ತೆ ಇದೆ. ಆರ್ಥಿಕವಾಗಿ ಶಕ್ತಿಯಿದೆ ಎಂದು ಕಿಡಿಕಾರಿದರು.
Advertisement
Advertisement
ಎಷ್ಟು ಬೇಕು ಹಣ ಹೇಳಿ ಎಂದು ಅನರ್ಹ ಅಭ್ಯರ್ಥಿಗಳಲ್ಲಿ ಬಿಎಸ್‍ವೈ ಹೇಳಿದ್ದಾರೆ. ಎಲ್ಲ ಕಡೆ ಮಂತ್ರಿಗಳನ್ನ ಬಿಟ್ಟು ನೀವು ಚುನಾವಣೆ ಮುಗಿಸಿ ಬನ್ನಿ. ಹಾಗೆಯೇ ಮಂತ್ರಿಗಳಿಗೂ ಹಣ ಬೇಕಿದ್ದರೆ ಫೋನ್ ಮಾಡಿ ನಾನು ಕಳುಹಿಸ್ತಿನಿ ಎಂದಿದ್ದಾರೆ. ಇಷ್ಟೆಲ್ಲ ಇರಬೇಕಾದ್ರೆ ನಾವೇನು ಮಾಡೋಕಾಗುತ್ತದೆ. ಬಿಎಸ್‍ವೈ ದುಡ್ಡಿನಿಂದ ಚುನಾವಣೆ ಮಾಡುತ್ತಿದ್ದಾರೆ ಅಂತ ಮಾಜಿ ಪ್ರಧಾನಿ ಆರೋಪಿಸಿದರು.
Advertisement
ವಿಶ್ವನಾಥ್ ಒಬ್ಬ ಸೀಸನ್ ಪಾಲಿಟಿಷಿಯನ್. ಹೃದಯದಲ್ಲಿ ಇರುವುದೇ ಬೇರೆ ಜನರ ಮುಂದೆ ಹೇಳೋದೇ ಬೇರೆ. ಇದೆಲ್ಲವೂ ಜನಕ್ಕೆ ಅರ್ಥವಾಗುತ್ತದೆ. ಜನ ಇದನ್ನ ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಅಂದುಕೊಳ್ಳುವುದು ತಪ್ಪು ಎಂದು ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್‍ಗೆ ಟಾಂಗ್ ನೀಡಿದರು.
Advertisement
ಅವರು ನನ್ನ ಬಗ್ಗೆಯೂ ಹೊಗಳಿದ್ದಾರೆ. ಸಿದ್ದರಾಮಯ್ಯ ಬಗ್ಗೆಯೂ ಹೊಗಳಿದ್ದಾರೆ. ಮತಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಈಗ ನಮ್ಮಂತ ನಾಯಕರನ್ನ ಟೀಕೆ ಮಾಡಿದ್ರೆ ಅದು ಚುನಾವಣೆ ಮೇಲೆ ಪರಿಣಾಮ ಬಿರುತ್ತದೆ ಅನ್ನೋದು ವಿಶ್ವನಾಥ್‍ಗೆ ಗೊತ್ತಿದೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ಹೆಚ್‍ಡಿಡಿ, ದೇಶದ ರಾಜಕೀಯದಲ್ಲಿ ಏನು ಬೇಕಾದ್ರು ಆಗಬಹುದು. ಕರ್ನಾಟಕದ ರಾಜಕಾರಣಕ್ಕೂ ಇದು ಅನ್ವಯವಾಗಲಿದೆ. ಉಪಚುನಾವಣೆ ಫಲಿತಾಂಶ ನಂತರ ಕರ್ನಾಟಕದಲ್ಲಿ ಏನೇನು ಬದಲಾವಣೆ ಆಗುತ್ತೆ ನೋಡೋಣ. ಫಲಿತಾಂಶ ಬಂದ ಮೇಲೆ ಸೋನಿಯಾಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ನೋಡೋಣ ಎಂದರು.