ಹಾಸನ: ತಮಿಳುನಾಡಿಗೆ ಸೋಮವಾರದೊಳಗೆ ಏಪ್ರಿಲ್ ಹಾಗೂ ಮೇ ತಿಂಗಳ 4 ಟಿಎಂಸಿ ನೀರು ಬಿಡಲೇಬೇಕು ಎಂಬ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ನೀಡಿದ ಖಡಕ್ ಸೂಚನೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹೆಬ್ಬಾಲೆ ಗ್ರಾಮದಲ್ಲಿ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಎ ಟಿ ರಾಮಸ್ವಾಮಿ ಪರ ಚುನಾವಣಾ ಪ್ರಚಾರದ ವೇಳೆ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಕುಡಿಯೋ ನೀರಿನ ಅಗತ್ಯಕ್ಕೆ ನೀರನ್ನ ಉಳಿಸಿಕೊಳ್ಳಬೇಕಿದೆ. ನಮಗೆ ಕುಡಿಯಲು ನೀರಿಲ್ಲದ ಮೇಲೆ ಏನು ಮಾಡಬೇಕು ಎನ್ನೋದನ್ನ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕಿದೆ. ಜಲಾಶಯಗಳ ನೀರು ಸಂಗ್ರಹದ ಪರಿಸ್ಥಿತಿ ಅರಿಯಬೇಕು. ಸೂಕ್ತ ಮಾಹಿತಿ ಪಡೆದು ಈ ಬಗ್ಗೆ ಮತ್ತೆ ಮಾತನಾಡುತ್ತೇನೆ ಅಂದ್ರು. ಇದನ್ನೂ ಓದಿ: 4 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಿ: ಕರ್ನಾಟಕಕ್ಕೆ ಸುಪ್ರೀಂ ಖಡಕ್ ಸೂಚನೆ
Advertisement
Advertisement
ಬಿಜೆಪಿ-ಜೆಡಿಎಸ್ ಸಂಬಂಧ ಕುರಿತು ಸ್ಪಷ್ಟನೆ ಕೇಳಿದ ರಾಹುಲ್ ಮಾತಿಗೆ ಪ್ರತಿಕ್ರಿಯಿಸಿದ ಎಚ್‍ಡಿಡಿ, ರಾಹುಲ್ ಮೊದಲು ತೀರ್ಮಾನ ಮಾಡಲಿ. ಮೊದಲು 120 ಬರುತ್ತೆ ಎಂದಿದ್ದರು ಅದು ಕನಸಿನ ಮಾತು. ರಾಹುಲ್ ಗೆ ನಾನ್ಯಾಕೆ ಸ್ಪಷ್ಟನೆ ನೀಡಬೇಕು ಅಂತ ಇದೇ ವೇಳೆ ತಿರುಗೇಟು ಕೊಟ್ಟರು.
Advertisement
ಸಿದ್ದರಾಮಯ್ಯ ನನ್ನ ಹಿಂದೆ ಬಂದವರು, ಮನುಷ್ಯ ಏಕವಚನದಲ್ಲಿ ಮಾತನಾಡುತ್ತಾರೆ. ಅವರಿಗೆ 115 ಬರೊದಾದ್ರೆ ನನ್ನನ್ನ ಯಾಕೆ ಕೇಳಬೇಕು. ಈ ಚುನಾವಣೆ ಅಷ್ಟು ಸುಲಭವಲ್ಲ. ದೇವೇಗೌಡರ ಶಕ್ತಿ 48 ಇರುತ್ತೊ 112 ಇರುತ್ತೊ ಕಾದು ನೋಡಿ. ನಾವೇ ಸರ್ಕಾರ ಮಾಡ್ತೇವೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ನಿಶ್ಚಿತ ಅಂತ ದೇವೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದ್ರು.