ಲಂಡನ್: ಲಂಡನ್‌ನಲ್ಲಿ (London) ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ನೀತಿ ಆಯೋಗದ (NITI Ayog) ಮಾಜಿ ಉದ್ಯೋಗಿ ಅಪಘಾತದಲ್ಲಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.
ಭಾರತೀಯ ವಿದ್ಯಾರ್ಥಿನಿ ಚೀಸ್ತಾ ಕೊಚ್ಚರ್ (33) ಕಳೆದ ವಾರ ಲಂಡನ್‌ನ ತನ್ನ ಮನೆ ಕಡೆಗೆ ಸೈಕ್ಲಿಂಗ್ ಮಾಡುತ್ತಿದ್ದಾಗ ಟ್ರಕ್‌ಗೆ ಸಿಲುಕಿ ಮೃತಪಟ್ಟಿದ್ದಾಳೆ. NITI ಆಯೋಗದೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಚೀಸ್ತಾ ಕೊಚ್ಚರ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಿದ್ದರು. ಇದನ್ನೂ ಓದಿ: ಅನಾಗರಿಕ ಭಯೋತ್ಪಾದಕ ಕೃತ್ಯ: ಉಗ್ರರ ದಾಳಿಗೆ ಪುಟಿನ್ ಆಕ್ರೋಶ
Advertisement
Advertisement
NITI ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್, ಚೀಸ್ತಾ ಅವರ ಸಾವಿನ ಸುದ್ದಿಯನ್ನು ಆನ್‌ಲೈನ್ ಪೋಸ್ಟ್‌ನಲ್ಲಿ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.
Advertisement
ಚೀಸ್ತಾ ಕೊಚಾರ್ ನನ್ನೊಂದಿಗೆ NITI ಆಯೋಗದಲ್ಲಿ ಲೈಫ್ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ Ph.D ವ್ಯಾಸಾಂಗಕ್ಕೆ ಹೋಗಿದ್ದರು. ಲಂಡನ್‌ನಲ್ಲಿ ಸೈಕ್ಲಿಂಗ್ ಮಾಡುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧೈರ್ಯಶಾಲಿ ಹೆಣ್ಣು, ಸದಾ ಜೀವನೋತ್ಸಾಹದಿಂದ ಇರುತ್ತಿದ್ದರು. ತುಂಬ ಬೇಗ ಇಹಲೋಕ ತ್ಯಜಿಸಿಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಮಿತಾಭ್ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಭೀಕರ ಭಯೋತ್ಪಾದಕ ದಾಳಿ ಪ್ರಕರಣ – 11 ಮಂದಿ ಬಂಧನ
Advertisement
ಮಾರ್ಚ್ 19 ರಂದು ಚೀಸ್ತಾ ಕೊಚ್ಚರ್ ಅವರಿಗೆ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತ ಸಂಭವಿಸಿದಾಗ ಆಕೆಯ ಪತಿ ಪ್ರಶಾಂತ್ ಕೂಡ ಮುಂದೆ ಸಾಗುತ್ತಿದ್ದರು. ಅವರು ರಕ್ಷಣೆಗೆ ಧಾವಿಸುಷ್ಟರಲ್ಲೇ ಚೀಸ್ತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.