ಬೆಂಗಳೂರು: ಆಪರೇಷನ್ ಹಸ್ತದ ನಾಗಾಲೋಟ ಮುಂದುವರಿಕೆಯಾಗಿದೆ. ಒಂದೇ ತಿಂಗಳಲ್ಲಿ ಎರಡು ಆಪರೇಷನ್ ಹಸ್ತದ ಕಾರ್ಯಾಚರಣೆಯಾಗಿದ್ದು, ಇಂದು ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ (Poornima) ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಪತಿ ಶ್ರೀನಿವಾಸ್ ಹಾಗೂ ಹಲವು ಬೆಂಬಲಿಗರ ಜೊತೆ ಕಾಂಗ್ರೆಸ್ (Congress) ಬಾವುಟ ಹಿಡಿಯಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಕೆಆರ್ ಪುರ ಕ್ಷೇತ್ರದ ಟಿಕೆಟ್ ನೀಡೋದಾಗಿ ಪೂರ್ಣಿಮಾ ಶ್ರೀನಿವಾಸ್‍ಗೆ ಭರವಸೆ ನೀಡಲಾಗಿದೆ. ಪತಿ ಶ್ರೀನಿವಾಸ್‍ಗೆ ಪರಿಷತ್ ಸದಸ್ಯರಾಗಿ ಮಾಡುವುದಾಗಿ ಡಿಕೆಶಿ ಆಫರ್ ಕೊಟ್ಟಿದ್ದಾರಂತೆ.
ಒಂದು ಕಾಲದಲ್ಲಿ ಕಾಂಗ್ರೆಸ್‍ನ ಭದ್ರಕೋಟೆ ಕೆಆರ್ ಪುರ ಮರು ವಶಕ್ಕೆ ಡಿಕೆಶಿ ದಾಳ ಉರುಳಿಸಿದ್ದು, ಹಾಲಿ ಶಾಸಕ ಬೈರತಿ ಬಸವರಾಜು ಸೋಲಿಸಲು ಪೂರ್ಣಿಮಾಗೆ ಟಿಕೆಟ್ ಕೊಡಿಸುವ ತಂತ್ರ ರೂಪಿಸಲಾಗಿದೆ. ಕೆಆರ್ ಪುರ ಕ್ಷೇತ್ರದಲ್ಲಿ ಈಗಲೂ ಪೂರ್ಣಿಮಾ ಶ್ರೀನಿವಾಸ್ ಪ್ರಭಾವ ಇದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಕೆಆರ್ ಪುರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಡಿಕೆಶಿ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ತಿಹಾರ್ ಜೈಲ್ ವಾರ್- ಡಿಕೆ ಬ್ರದರ್ಸ್‍ನಿಂದ ತಿರುಗುಬಾಣ ಅಸ್ತ್ರ ಪ್ರಯೋಗ
ಕಳೆದ ಚುನಾವಣೆಯಲ್ಲೇ ಡಿಕೆಶಿ (DK Shivakumar) ಪೂರ್ಣಿಮಾಗೆ ಕೆಆರ್ ಪುರದ ಆಫರ್ ಕೊಟ್ಟಿದ್ರು. ಆದರೆ ಆಗ ಬರಲಾಗದೇ ಬಿಜೆಪಿಯಿಂದ (BJP) ಹಿರಿಯೂರು ಕ್ಷೇತ್ರದಲ್ಲೇ ಸ್ಪರ್ಧಿಸಿ ಪೂರ್ಣಿಮಾ ಪರಾಜಿತರಾಗಿದ್ರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]