ಹಾಸನ: ಬಿಜೆಪಿ ಆಡಳಿತ ಸರ್ಕಾರದ ವಿರುದ್ಧ ಇಂದು ಆಕ್ರೋಶ ಹೊರಹಾಕಿರುವ ಮಾಜಿಸಚಿವ ಹಾಗೂ ಹಾಲಿ ಶಾಸಕ ಹೆಚ್.ಡಿ.ರೇವಣ್ಣ ಬಿಜೆಪಿ ಸರ್ಕಾರದ ಆಡಳಿತವನ್ನು ಬ್ರಿಟಿಷರ ಆಳ್ವಿಕೆಗೆ ಹೋಲಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದರು. ಈಗ ಕೆಲವೇ ಕೆಲವು ವರ್ಗದವರು ಆಡಳಿತ ಮಾಡ್ತಿದ್ದಾರೆ. ಉಳ್ಳವರು ರಾಜ್ಯವನ್ನು ಆಳುತ್ತಿದ್ದಾರೆ. ಇದನ್ನು ನಾನು ನೊಂದು ಹೇಳುತ್ತಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ದೇವೇಗೌಡರು, ಅವರ ಕುಟುಂಬ ಬಿಟ್ಟು ರಾಜಕಾರಣ ಮಾಡಲು ಆಗಲ್ಲ: ಸೂರಜ್‍ರೇವಣ್ಣ
Advertisement
Advertisement
ರಾಜ್ಯದಲ್ಲಿ ಆಡಳಿತ ಇದೇ ರೀತಿ ಮುಂದುವರಿದರೆ ಯಡಿಯೂರಪ್ಪ ಮನೆ ಮನೆಗೆ ಹೋಗಿ ಗಂಟೆ ಹೊಡೆಯಬೇಕಾಗುತ್ತೆ, ಬಿಜೆಪಿ 40 ಸೀಟಿಗೆ ಬಂದು ನಿಲ್ಲುತ್ತೆ. ಜೆಡಿಎಸ್ ಮುಗಿಸುತ್ತೀನಿ ಅಂಥ ಎರಡೂ ರಾಷ್ಟ್ರೀಯ ಪಕ್ಷಗಳು ಅಂದುಕೊಂಡಿದ್ದರೆ, ಅದು ಭ್ರಮೆ. ರಾಜ್ಯದಲ್ಲಿ ಜೆಡಿಎಸ್ ಏನು ಅಂಥ ತೋರಿಸ್ತೀವಿ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎರಡು ಪಕ್ಷಗಳಿಗೆ ಪರ್ಯಾಯವಾಗಿ ನಿಲ್ಲಲಿದೆ ಎಂದು ಸವಾಲು ಹಾಕಿದ್ದಾರೆ.
Advertisement
Advertisement
75 ವರ್ಷವಾದರೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಸರ್ಕಾರಿ ಕಾಲೇಜುಗಳನ್ನು ಮುಚ್ಚಿಬಿಡಿ. ಮನೆಗೊಂದು ಬಾವುಟ ಕೊಟ್ಟಿದ್ದಾರೆ. ಹೋಗಾಬೇಕಾದರೆ, ಬರಬೇಕಾದರೆ ಬಾವುಟ ಬೀಸಿ ಅಂಥ, ಗಾಳಿ ಬೀಸಕೆ, ಸೊಳ್ಳೆ ಓಡ್ಸೋಕೆ ಬಾವುಟ ಕೊಟ್ಟವರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೊಡ್ಡಗೌಡರ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿದೆ – ಹೆಚ್‌ಡಿಕೆ, ರೇವಣ್ಣ ಕಣ್ಣೀರು
ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವರು ಕಾಣೆಯಾಗಿದ್ದಾರೆ. ಅವರನ್ನ ಹುಡುಕಿಕೊಟ್ಟವರಿಗೆ ಬಹುಮಾನವಾಗಿ ಸೌತೆಕಾಯಿ ಕೊಡುತ್ತೇನೆ ಎಂದು ರೇವಣ್ಣ ವ್ಯಂಗ್ಯವಾಡಿದ್ದಾರೆ.
ಸಚಿವ ಮಾಧುಸ್ವಾಮಿ ಒಬ್ಬರೇ ಎಷ್ಟು ಅಂತಾ ಬಡ್ಕೋತಾರೆ. ಅವರ ಬಗ್ಗೆ ಗೌರವವಿದೆ. ಪಾಪ ಆತ ಅಸೆಂಬ್ಲಿಯಲ್ಲೂ ಮಾತನಾಡುತ್ತಾರೆ. ಇದನ್ನು ಸಹಿಸದ ಕೆಲ ಗಿರಾಕಿಗಳು ಅವರ ಮೇಲೆಯೇ ಸವಾರಿ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಅದ್ಯಾರೋ ತೋಟಗಾರಿಕೆ ಮಂತ್ರಿ ಅಂಥ ಮಾಡಿದ್ದಾರೆ. ನಾನು ಮುಖ್ಯ ಕಾರ್ಯದರ್ಶಿ ಹಾಗೂ ಐಜಿ ಅವರಿಗೆ ಮನವಿ ಮಾಡುತ್ತೇನೆ. ಆ ತೋಟಗಾರಿಕೆ ಮಂತ್ರಿ ಎಲ್ಲಿ ಸಿಕ್ತಾರೆ ಅಂತ ಹೇಳಿ, ಇಲ್ಲ ತೋಟಗಾರಿಕೆ ಮಂತ್ರಿಗಳನ್ನು ಹುಡುಕಿಕೊಡಿ. ಅವರ ದರ್ಶನ ಪಡೆಯಲು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಡಿ.ರೇವಣ್ಣ ಕಾಯುತ್ತಿದ್ದಾರೆ. ಅವರ ದರ್ಶನ ಯಾವಾಗ ಸಿಗುತ್ತೆ? ಡಿಜಿ ಮತ್ತು ಐಜಿ ಅವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕೆ.ಎನ್.ರಾಜಣ್ಣ ಹೀಗೆ ಮಾತಾಡಿದ್ರೆ ಹುಚ್ಚು ನಾಯಿಗೆ ಹೊಡೆದಂಗೆ ಹೊಡಿತಾರೆ – ಪ್ರಜ್ವಲ್ ರೇವಣ್ಣ ಕಿಡಿ
ಮಂತ್ರಿಗಳು ಊರು ಬಿಟ್ಟು ಹೋಗಿ ಕಾಣಿಯಾಗಿದ್ದಾರೆ. ಅವರ ಜೊತೆ ಪ್ರವಾಸೋದ್ಯಮ ಮಂತ್ರಿಗಳು, ವಿಜಯನಗರ ಹೊಸ ಜಿಲ್ಲೆ ಮಾಡಿದಂತಹ ಮಂತ್ರಿಗಳು ಕಾಣೆಯಾಗಿದ್ದಾರೆ. ಕೂಡಲೇ ಮಂತ್ರಿಗಳನ್ನ ಹುಡುಕಿಕೊಟ್ಟರೆ ನಮ್ಮ ಹೊಳೆನರಸೀಪುರ ತಾಲ್ಲೂಕಿನ ಜನತೆ ಕಡೆಯಿಂದ ಅವರಿಗೆ ಬಹುಮಾನ ಕೊಡಲಾಗುವುದು. ನಮ್ಮಲ್ಲಿ ಒಳ್ಳೆಯ ಟೇಸ್ಟ್ ಆಗಿರುವ ಸೌತೆಕಾಯಿ ಸಿಗುತ್ತೆ. ಎಲ್ಲೂ ಆ ರೀತಿ ಟೇಸ್ಟ್ ಇರಲ್ಲ, ಆ ಸೌತೆಕಾಯಿಯನ್ನೇ ಬಹುಮಾನವಾಗಿ ಕೊಡಲಾಗುವುದು ಎಂದು ಲೇವಡಿ ಮಾಡಿದ್ದಾರೆ.