Latest

ಕೆ.ಎನ್.ರಾಜಣ್ಣ ಹೀಗೆ ಮಾತಾಡಿದ್ರೆ ಹುಚ್ಚು ನಾಯಿಗೆ ಹೊಡೆದಂಗೆ ಹೊಡಿತಾರೆ – ಪ್ರಜ್ವಲ್ ರೇವಣ್ಣ ಕಿಡಿ

Advertisements

ಹಾಸನ: ಮಾಜಿ ಶಾಸಕ ಕೆ.ಎನ್.ರಾಜಣ್ಣ ಒಬ್ಬ ದಂಧೆಕೋರ, ದೇವೇಗೌಡ್ರ ಕಾಲಿನ ಧೂಳಿಗೂ ಸಮಾನ ಅಲ್ಲ. ಅವನು ಹೀಗೆ ಮಾತನಾಡಿದ್ರೆ ಹುಚ್ಚು ಸಂತೆಯಲ್ಲಿ ನಾಯಿಗೆ ಹೊಡೆದಂಗೆ ಹೊಡಿಯುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.

ಇಂದು ಬೆಳಿಗ್ಗೆ ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆ.ಎನ್.ರಾಜಣ್ಣ, `ದೇವೇಗೌಡರು ಇಬ್ಬರ ಮೇಲೆ ಕೈ ಹಾಕ್ಕೊಂಡು ಹೋಗ್ತಾವ್ರೇ.. ನಾಲ್ವರ ಮೇಲೆ ಹೋಗೋದು ಹತ್ತಿರದಲ್ಲೇ ಇದೇ’ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ತುಂಬಾ ಒಳ್ಳೇ ಕೆಲಸ ಮಾಡಿದ್ದೀಯಾ ಸಹೋದರ – ಕನ್ಹಯ್ಯ ಹತ್ಯೆ ಬೆಂಬಲಿಸಿದ ಮುಸ್ಲಿಂ ವ್ಯಕ್ತಿ ಅರೆಸ್ಟ್

ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರಜ್ವಲ್ ರೇವಣ್ಣ, ಮೊದಲನೇಯದಾಗಿ ರಾಜಣ್ಣ ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ ಅಂತಾ ಮಧುಗಿರಿ ಜನ ಮನೆಗೆ ಕಳುಹಿಸಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನೂತನ ಸರ್ಕಾರಕ್ಕೆ ನಾವು ತೊಂದರೆ ಕೊಡುವುದಿಲ್ಲ: ಸಂಜಯ್‌ ರಾವತ್‌

ರಾಜಣ್ಣ ದೊಡ್ಡ ದಂಧೆಕೋರ ಅವನು ದೇವೇಗೌಡ್ರ ಕಾಲಿನ ಧೂಳಿಗೂ ಸಮಾನ ಅಲ್ಲ. ನೀಚಬಾಯಲ್ಲಿ ನೀಚಪದ ಬಂದಿದೆ ದೇವರು ಉತ್ತರ ಕೊಡ್ತಾರೆ. ಅವನು ಜನಪ್ರತಿನಿಧಿಯಲ್ಲ ಸೋತು ಮನೆಯಲ್ಲಿ ಕೂತುಕೊಂಡಿದ್ದಾರೆ. ಹೀಗೆ ಮಾತನಾಡಿದ್ರೆ ಹುಚ್ಚು ಸಂತೆಯಲ್ಲಿ ನಾಯಿಗೆ ಹೊಡೆದಂಗೆ ಹೊಡಿಯುತ್ತಾರೆ ಎಂದು ವಾಗ್ದಾಳಿ ನಡೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Live Tv

Leave a Reply

Your email address will not be published.

Back to top button