ಬೆಂಗಳೂರು: ರೇಣುಕಾಚಾರ್ಯರ (Renukacharya) ಅಣ್ಣನ ಮಗನ ಕಾರು (Car) ಕಾಲುವೆಯಲ್ಲಿ ಸಿಕ್ಕಿದೆ. ಕಾರಿನಲ್ಲಿ ಶವ ಸಿಕ್ಕಿದೆ, ಉಳಿದದ್ದು ತನಿಖೆಯಿಂದ ಹೊರಬರಬೇಕಿದೆ. ಈ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯರ ಅಣ್ಣನ ಮಗನ ಕಾರು ಕಾಲುವೆಯಲ್ಲಿ ಸಿಕ್ಕಿದೆ. ಕಾರಿನಲ್ಲಿ ಶವ ಸಿಕ್ಕಿದೆ, ಉಳಿದದ್ದು ತನಿಖೆಯಿಂದ ಹೊರಬರಬೇಕಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತೇವೆ. ನಮ್ಮ ಮಾಜಿ ಸಚಿವರ ಕುಟುಂಬದವರು. ಹಾಲಿ ಶಾಸಕರ ಕುಟುಂಬ ಎಲ್ಲಾ ರೀತಿಯ ಆಯಾಮಗಳಿಂದಲು ತನಿಖೆ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: 5 ದಿನಗಳ ಬಳಿಕ ರೇಣುಕಾಚಾರ್ಯ ಸಹೋದರನ ಪುತ್ರನ ಶವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆ
Advertisement
Advertisement
ರೇಣುಕಾಚಾರ್ಯ ನನಗೂ ದಿನದಲ್ಲಿ 2-3 ಬಾರಿ ಕರೆ ಮಾಡುತ್ತಿದ್ದರು. ನಾನು ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದೆ. ಯಾವ್ಯಾವ ವಿಚಾರದಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಎಲ್ಲಾ ಆಯಾಮದಲ್ಲೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ
Advertisement
ಮಂಡ್ಯದಲ್ಲಿ ನಡೆದ ಘಟನೆ ಕುರಿತು ಮಾತನಾಡಿ, ಮಂಡ್ಯದಲ್ಲಿ ಆಸ್ಪತ್ರೆಗೆ ಹೊರಟವರನ್ನು ಅಡ್ಡ ಹಾಕಿ ಹೆಲ್ಮೆಟ್ ಹಾಕದಕ್ಕೆ ಪೇದೆ ದಂಡ ಹಾಕಿದ ಬಗ್ಗೆ ತನಿಖೆ ನಡೆಸುತ್ತೇವೆ. ಇದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.