ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ

Public TV
2 Min Read
REDDY ARREST

ಬೆಂಗಳೂರು: ಅಂಬಿಡೆಂಟ್ ಕಂಪನಿ ಜೊತೆ 20 ಕೋಟಿ ರೂ. ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಯಲ್ಲಿದ್ದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯನ್ನು ಇದೀಗ ಬಂಧಿಸಲಾಗಿದೆ.

ಸಂಜೆ 4 ಗಂಟೆಗೆ ಸಿಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈ ವೇಳೆ 14 ದಿನಗಳ ಕಾಲ ಕಸ್ಟಡಿಗೆ ಕೋರಲಿದ್ದಾರೆ. ಅದಕ್ಕೂ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.

REDDY 2 2

ಡೀಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು, ಶನಿವಾರ ಮಧ್ಯಾಹ್ನ ತಮ್ಮ ವಕೀಲರ ಜೊತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಬಳಿಕ ತಡರಾತ್ರಿ 2 ಗಂಟೆಯವರೆಗೂ ವಿಚಾರಣೆ ನಡೆದಿತ್ತು.

ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಇದೀಗ ವಕೀಲ ಚಂದ್ರಶೇಖರ್ ಅವರು ರೆಡ್ಡಿ ಬಳಿ ಕ್ಷಮೆ ಕೇಳಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳ ಮಾತು ನಂಬಿ ರೆಡ್ಡಿ ಕೆಟ್ಟು ಹೋದ್ರಂತೆ. ಯಾಕಂದ್ರೆ ವಿಚಾರಣೆಗೆ ಹಾಜರಾಗಿ, ಬಂಧಿಸಲ್ಲ ಎಂಬ ಆಶ್ವಾಸನೆ ಮೇರೆಗೆ ರೆಡ್ಡಿ ಬಂದಿದ್ದಾರಂತೆ. ಆದರೆ ವಿಚಾರಣೆ ಸದರ್ಭದಲ್ಲಿ ಆಗಿದ್ದೇ ಬೇರೆ. ತಡರಾತ್ರಿವರೆಗೂ ಸುದೀರ್ಘ ವಿಚಾರಣೆ ನಡೆದಿದೆ. ಇದರಿಂದ ಬೇಸತ್ತ ರೆಡ್ಡಿ ಅವರಿಗೆ ಪಶ್ಚಾತಾಪವಾಗಿದೆಯಂತೆ. ಈ ರೀತಿ ಮಾಡ್ತಾರೆ ಅನ್ನೋದು ಗೊತ್ತಿದ್ರೆ ಬೇಲ್ ತೆಗೆದುಕೊಂಡೆ ವಿಚಾರಣೆಗೆ ಬರುತ್ತಿದ್ದೆ ಅಂತ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ರೆಡ್ಡಿಯ ಈ ಮಾತಿನಿಂದ ತಾನೂ ಬೇಸರಗೊಂಡ ವಕೀಲ ಚಂದ್ರಶೇಖರ್ ಕೂಡಲೇ ರೆಡ್ಡಿ ಬಳಿ ಕ್ಷಮೆ ಕೇಳಿದ್ದರು ಅಂತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿತ್ತು.

REDDY 5

ವಿಚಾರಣೆಗೆ ಕರೆತಂದು ತಪ್ಪು ಮಾಡಿದೆ ಎಂದು ವಕೀಲರು ರೆಡ್ಡಿ ಬಳಿ ತಮ್ಮ ಅಲವತ್ತುಕೊಂಡಿದ್ದಾರೆ. ವಿಚಾರಣೆ ನೆಪದಲ್ಲಿ ಹಿಂಸೆ ಕೊಡ್ತಿದ್ದಾರೆ. ಕೋರ್ಟ್ ನಲ್ಲೇ ಉತ್ತರ ಕೋಡೋಣಾ ಅಂತ ವಕೀಲರು ಹೇಳಿದ್ದಾರೆ. ಈ ವೇಳೆ ರೆಡ್ಡಿ, ಆಗಿದ್ದು ಆಗಿ ಹೋಯಿತು ಎಂದು ವಕೀಲರ ಮಾತಿಗೆ ತಲೆದೂಗಿದ್ದಾರೆ. ರೆಡ್ಡಿಯ ಜೊತೆಯಲ್ಲಿಯೇ ಐವರು ವಕೀಲರು ರಾತ್ರಿ ಕಳೆದಿದ್ದಾರೆ ಎಂಬುದಾಗಿ ತಿಳಿದುಬಂದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *