ನವದೆಹಲಿ: ಇಡೀ ದೇಶವೇ ದಸರಾ ಹಬ್ಬದ ಮೂಡ್‍ನಲ್ಲಿದೆ. ಆದರೆ ಪ್ರತಿ ವರ್ಷ ಸಡಗರದಿಂದ ಹಬ್ಬ ಮಾಡುತ್ತಿದ್ದ ಡಿಕೆ ಮಾತ್ರ ಜೈಲು ಹಕ್ಕಿಯಾಗಿದ್ದಾರೆ. ಗೌರಿ ಗಣೇಶ ಹಬ್ಬದ ಬಳಿಕ ಈಗ ದಸರಾನೂ ಜೈಲಿನಲ್ಲೇ ಆಚರಿಸುತ್ತಿದ್ದಾರೆ.
ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ನ್ಯಾಯಾಂಗ ಬಂಧನದಡಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ಗೆ ಹಬ್ಬದ ಸಂಭ್ರಮ ಇಲ್ಲ. ಗೌರಿ ಗಣೇಶ ಹಬ್ಬದಂದು ತನಗೆ ರಿಲೀಫ್ ಸಿಗುತ್ತದೆ. ತಾನು ಇಡಿ ಇಕ್ಕಳದಿಂದ ಪಾರಾಗಬಹುದು ಅಂದುಕೊಂಡಿದ್ದ ಕನಕಪುರ ಬಂಡೆಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ರು. ಗೌರಿ ಹಬ್ಬದಂದು ಕೂಡ ರಿಲೀಫ್ ಕೊಡದೇ ಡ್ರಿಲ್ ಮಾಡಿದ್ದರು. ಆ ದಿನ ಡಿಕೆ ಕಣ್ಣೀರಾಕಿದ್ದರು.
ಈಗ ಅದೆಲ್ಲಾ ಕಳೆದು ಡಿಕೆ ಜೈಲುಹಕ್ಕಿಯಾಗಿದ್ದಾರೆ. ದಸರಾ ಕೂಡ ಜೈಲಲ್ಲೇ ಆಚರಿಸುವಂತಾಗಿದೆ. ಆದರೆ ಇತ್ತ ದಸರಾ ಹಬ್ಬವನ್ನ ಸಂಭ್ರಮದಿಂದ ಆಚರಿಸುತ್ತಿದ್ದ ಡಿಕೆ ಫ್ಯಾಮಿಲಿಗೆ ಈ ಬಾರಿಯ ಹಬ್ಬ ಕಳಾಹೀನವಾಗಿದೆ. ಡಿ.ಕೆ ಶಿವಕುಮಾರ್‍ಗೆ ಈ ಬಾರಿ ಹಬ್ಬದ ಸಂಭ್ರಮ ಇಲ್ಲ. ಸಡಗರದಿ ಹಬ್ಬ ಆಚರಿಸಲು ಜೊತೆಗಾರರಿಲ್ಲ. ಇಂದು ಆಯುಧ ಪೂಜೆ ಮತ್ತು ನಾಳೆಯ ವಿಜಯದಶಮಿ ಹಬ್ಬವನ್ನು ಡಿಕೆ ಜೈಲಿನಲ್ಲೆ ಮಾಡಲಿದ್ದಾರೆ.
ಉತ್ತರ ಭಾರತದಲ್ಲೂ ಸಂಭ್ರಮದಿಂದ ದಸರಾ ಆಚರಣೆ ಮಾಡಲಿದ್ದು ತಿಹಾರ್ ಜೈಲಿನಲ್ಲೂ ಹಬ್ಬ ಆಚರಿಸಲಾಗುತ್ತಿದೆ. ಜಾಮೀನು ಪಡೆದು ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟರು ಡಿ.ಕೆ ಶಿವಕುಮಾರ್ ಗೆ ಸಾಧ್ಯವಾಗಿಲ್ಲ. ಹಾಗಾಗೀ ಜೈಲಿನಲ್ಲಿ ಸಾಮಾನ್ಯ ಕೈದಿಗಳ ಜೊತೆ ಸಾಮೂಹಿಕ ಹಬ್ಬ ಆಚರಿಸಲಿದ್ದಾರೆ.
ಇತ್ತ ಬೆಂಗಳೂರಿನ ಡಿ.ಕೆ ಶಿವಕುಮಾರ್ ನಿವಾಸದಲ್ಲೂ ಹಬ್ಬದ ಸಂಭ್ರಮ ಇಲ್ಲ. ಮನೆ ಯಜಮಾನ ಜೈಲು ಸೇರಿದ ಹಿನ್ನೆಲೆಯಲ್ಲಿ ಹಬ್ಬದ ಮಾಡುವ ಮನಸ್ಸು ಮನೆಯವರು ಕಳೆದುಕೊಂಡಿದ್ದು ಡಿ.ಕೆ ಮನೆ ಮನೆಗಳಲ್ಲಿ ಬೇಸರದ ಛಾಯೇ ಆವರಿಸಿದೆ. ಅಕ್ಟೋಬರ್ 14ಕ್ಕೆ ದೆಹಲಿ ಹೈಕೋರ್ಟಿನಲ್ಲಿ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಬರಲಿದ್ದು ಬೇಲ್ ಸಿಕ್ಕರೆ ಕನಿಷ್ಠ ದೀಪಾವಳಿಯನ್ನಾದ್ರೂ ಮನೆಯಲ್ಲಿ ಆಚರಿಸುವ ಅವಕಾಶ ಸಿಗಲಿದೆ.