ಬೆಂಗಳೂರು: ಜೆಡಿಎಸ್ ನಾಯಕರಿಗೆ ಹಣ ಬಲವೇ ಮುಖ್ಯ ಎಂಬ ಹೆಚ್ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಚಲುವರಾಯಸ್ವಾಮಿ ಅವರು, ವಿಶ್ವನಾಥ್ ಒಮ್ಮೆ ಸಿದ್ದರಾಮಯ್ಯ ಬಗ್ಗೆ ಮಾತನಾಡುತ್ತಾರೆ. ಮತ್ತೊಮ್ಮೆ ಅವರ ಪಕ್ಷದ ಬಗ್ಗೆಯೇ ಮಾತನಾಡುತ್ತಾರೆ. ಅವರ ಹೇಳಿಕೆ ಹಿಂದೆ ಯಾರಿದ್ದಾರೆ? ಎಂದು ಸ್ಪಷ್ಟಡಿಸಬೇಕು ಎಂದು ಹೇಳಿದರು.
Advertisement
ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ ಮಾಜಿ ಸಚಿವ ಚಲುವರಾಯಸ್ವಾಮಿ ಅವರು, ಮೈತ್ರಿ ಸರ್ಕಾರದಿಂದಲೇ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಸದ್ಯ ಇರುವ ವಾಸ್ತವತೆಯನ್ನು ಈಗ ನಮ್ಮ ನಾಯಕರು ಒಪ್ಪಿಕೊಂಡಿದ್ದಾರೆ. ಜನರ ಅಭಿಪ್ರಾಯ ಇದನ್ನು ಸ್ಪಷ್ಟಪಡಿಸಿದೆ. ಸರ್ಕಾರದ ನಡವಳಿಕೆಗಳು ಬದಲಾವಣೆ ಆಗದೆ ಇದ್ದರೆ ಸಮಿಶ್ರ ಸರ್ಕಾರ ನಡೆಸುವುದು ಕಷ್ಟಸಾಧ್ಯವಾಗಲಿದೆ. ನಮ್ಮ ನಾಯಕರು ಆತ್ಮಾವಲೋಕನ ಮಾಡಿಕೊಂಡು ಪಕ್ಷವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.
Advertisement
ಇದೇ ವೇಳೆ ಪಕ್ಷದ ಅಧ್ಯಕ್ಷರಾಗಿ ವಿಶ್ವನಾಥ್ ಅವರ ಹೇಳಿಕೆ ನಡೆಯಲಿಲ್ಲ ಅಂದರೆ ಅಧ್ಯಕ್ಷರಾಗಿ ಯಾಕಿದ್ದಾರೆ? ಬೇಡ ಎಂದು ಹೇಳಿದರೆ ತಮ್ಮ ಸ್ಥಾನವನ್ನು ವಾಪಸ್ ತೆಗೆದುಕೊಳ್ಳಬೇಕು. ಅದು ಬಿಟ್ಟು ಒಮ್ಮೆ ಸಿದ್ದರಾಮಯ್ಯ, ಮತ್ತೊಮ್ಮೆ ಪಕ್ಷದ ಬಗ್ಗೆಯೇ ಮಾತನಾಡುವುದರ ಹಿಂದೇ ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದರು.
Advertisement
Advertisement
ಇಂದು ಮೈಸೂರಿನಲ್ಲಿ ಮಾತನಾಡಿದ್ದ ಎಚ್.ವಿಶ್ವನಾಥ್ ಅವರು, ಕೆ.ಆರ್.ನಗರ ಪುರಸಭೆ ಚುನಾವಣೆಯ ಸೋಲಿಗೆ ಸಚಿವ ಸಾ.ರಾ.ಮಹೇಶ್ ಅವರ ನಡೆಯೇ ಕಾರಣ. ಕುರುಬ ಸಮುದಾಯದವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸೋಲಾಯ್ತು. ರಾಜ್ಯಧ್ಯಕ್ಷನಾಗಿದ್ದರೂ ಪಕ್ಷದ ನಾಯಕರು, ಸಚಿವರು ನಾನು ಹೇಳಿದವರಿಗೆ ಟಿಕೆಟ್ ನೀಡಲಿಲ್ಲ. ಕೆ.ಆರ್. ನಗರದಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೂ ನಾಲ್ಕು ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಆ ಗೆಲುವಿನ ರೂವಾರಿಯಲ್ಲಿ ನನ್ನ ಜೊತೆ ಜೆಡಿಎಸ್ ಗೆ ಬಂದ ಕಾರ್ಯಕರ್ತರ ಪರಿಶ್ರಮವಿದೆ. ಜನರನ್ನು ದುಡ್ಡಿನಿಂದ ಅಳೆಯಬಾರದು. ದುಡ್ಡಿನಿಂದ ಕೇವಲ ತಾತ್ಕಾಲಿಗೆ ಗೆಲುವು ನಮ್ಮದಾಗಿರುತ್ತದೆ ಎಂಬುದನ್ನು ಅರಿತು ಕೆಲಸ ಮಾಡಬೇಕಿದೆ. ದುಡ್ಡಿನಿಂದ ಎಲ್ಲವನ್ನು ಅಳೆದು, ಗೆಲ್ಲುತ್ತೇವೆ ಎಂಬ ದುರಂಹಕಾರ ಒಳ್ಳೆಯದಲ್ಲ ಎಂಬುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪಕ್ಷದ ಸಚಿವ ಸಾರಾ ಮಹೇಶ್ ಅವರ ಮೇಲೆ ಪರೋಕ್ಷವಾಗಿ ಗುಡುಗಿದ್ದರು.