ಚಿಕ್ಕಬಳ್ಳಾಪುರ: ಮಾಜಿ ಪ್ರಿಯಕರನೊರ್ವ (ExLover) ಮಹಿಳೆಯ (Woman) ಬಾಯಿಗೆ ಆಕೆಯ ಸೀರೆಯನ್ನೇ ತುರುಕಿ ಕತ್ತು ಹಿಸುಕಿ ಆಕೆಯ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚೇಳೂರು ತಾಲೂಕಿನ ಗೊಳ್ಳಪಲ್ಲಿಯಲ್ಲಿ ನಡೆದಿದೆ.
ಗ್ರಾಮದ ನರಸಮ್ಮ (40) ಕೊಲೆಯಾದ ಮಹಿಳೆ. ಇದೇ ಗ್ರಾಮದ ವೆಂಕಟೇಶ್ ಎಂಬಾತ ಕೊಲೆ ಮಾಡಿದ ವ್ಯಕ್ತಿ. ನರಸಮ್ಮ ಕೊಲೆಗಾರ ವೆಂಕಟೇಶ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆದರೆ ಇತ್ತೀಚೆಗೆ ವೆಂಕಟೇಶ್‍ನನ್ನು ಬಿಟ್ಟು ಬೇರೊಬ್ಬನ ಜೊತೆ ಸಂಬಂಧ ಬೆಳೆಸಿದ್ದಳು. ಇದೇ ವಿಚಾರವಾಗಿ ಕುರಿ ಮೇಯಿಸಲು ಹೋಗಿದ್ದ ನರಸಮ್ಮಳ ಜೊತೆ ಜಗಳಕ್ಕಿಳಿದಿದ್ದ ವೆಂಕಟೇಶ್, ಆಕೆಯ ಜೊತೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ- ರಾಮ್‍ದಾಸ್ ಪರೋಕ್ಷ ಆರೋಪ
ಬೆಟ್ಟದ ಬಳಿಯ ಪೊದೆಯೊಂದರಲ್ಗಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇನ್ನೂ ಕುರಿ ಕಾಯಲು ಹೋಗಿದ್ದ ಮಹಿಳೆ ಮನೆಗೆ ಬರದಿದ್ದಾಗ ಹುಡಕಾಟ ನಡೆಸಿದಾಗ ನರಸಮ್ಮ ಕೊಲೆಯಾಗಿರೋದು ಬಯಲಿಗೆ ಬಂದಿದೆ. ಸದ್ಯ ಆರೋಪಿ ವೆಂಕಟೇಶ್ ನನ್ನ ಚೇಳೂರು ಪೊಲೀಸರು (Police) ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಯಜಮಾನನ ಜೀವ ಉಳಿಸಲು ಹಾವಿನ ಜೊತೆ ಸೆಣಸಾಟ – ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿ