DistrictsKarnatakaLatestLeading NewsMain PostMysuru

ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ- ರಾಮ್‍ದಾಸ್ ಪರೋಕ್ಷ ಆರೋಪ

ಮೈಸೂರು: ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡುತ್ತಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್ (S A Ramdas) ಪರೋಕ್ಷ ಅರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಬಸ್ ಶೆಲ್ಟರ್ (Bus Sheltar) ವಿವಾದ ವಿಚಾರ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ದಯಮಾಡಿ ಬಿಟ್ಟು ಬಿಡಿ ಕೈ ಮುಗಿದು ಕೇಳಿದರು. ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ವಿವಾದಿತ ಗುಂಬಜ್ ತೆರವಿಗೆ ಪ್ರತಾಪ್ ಸಿಂಹ ಕೊಟ್ಟಿದ್ದ ಡೆಡ್‍ಲೈನ್ ಅಂತ್ಯ- ಇಂದು ತೆರವಿಗೆ ಮುಂದಾಗ್ತರಾ ಸಂಸದರು?

ಬಿಜೆಪಿಯ 11 ಜನ ಶಾಸಕರು ಇದ್ದರು. ಕಿರುಕುಳ ನೀಡಿ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಏನೂ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮ ಮಿತ್ರರ ಮುಂದೆ ಶಾಸಕರು ಕೈ ಮುಗಿದು ಬೇಡಿಕೊಂಡರು.  ಇದನ್ನೂ ಓದಿ: ಗುಂಬಜ್ ಗುದ್ದಾಟಕ್ಕೆ ಟ್ವಿಸ್ಟ್ – ಬಸ್‌ನಿಲ್ದಾಣದ ಜಾಗ ನಮ್ಮದು, ತೆರವು ಮಾಡಿ ಎಂದ NHAI

ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್, ಸ್ಮಶಾನ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಸಾಧನೆ ಮಾಡಬೇಕು ಅನ್ನೋದೇ ನನ್ನ ಗುರಿ. ಈ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರೂ ಅದಕ್ಕೆ ನಾನು ಬದ್ಧ ಎಂದು ಗದ್ಗದಿತರಾದರು.

Live Tv

Leave a Reply

Your email address will not be published. Required fields are marked *

Back to top button