ಬೆಂಗಳೂರು: ಸಿಎಂ ಹುದ್ದೆಗೆ ರಾಜೀನಾಮೆ ನೀಡಿರುವ ಯಡಿಯೂರಪ್ಪ ಈಗ ರಾಜ್ಯ ಪ್ರವಾಸ ಹೋಗುವುದರ ಹಿಂದಿನ ರಹಸ್ಯ ಬಯಲಾಗಿದೆ.
ರಾಜೀನಾಮೆ ಕೊಟ್ಟ ಬಳಿಕ ಬಿಎಸ್‍ವೈ ರಾಜ್ಯ ಪ್ರವಾಸ ಮಾಡಿಯೇ ಮಾಡುತ್ತೇನೆ ಎಂದು ಹೇಳುತ್ತಿದ್ದರೆ ಏಕಾಂಗಿ ರಾಜ್ಯ ಪ್ರವಾಸ ಬೇಡ, ಪಕ್ಷದ ವೇದಿಕೆಯಲ್ಲೇ ಪ್ರವಾಸ ಫಿಕ್ಸ್ ಮಾಡಿ ಅಂತಾ ಆಪ್ತರು ಬಿಎಸ್‍ವೈಗೆ ಒತ್ತಾಯ ಮಾಡುತ್ತಿದ್ದಾರೆ.
ಅಕ್ಟೋಬರ್ ನಿಂದ ಪ್ರವಾಸಕ್ಕೆ ಹೋಗಲೇಬೇಕು ಎಂದು ಬಿಎಸ್‍ವೈ ನಿರ್ಧರಿಸಿದ್ದು, ಅಧಿವೇಶನ ಮುಗಿಯುವವರೆಗೆ ಸೈಲೈಂಟ್ ಆಗಿರಲು ಪ್ಲ್ಯಾನ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ : ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ – ಅಲಹಾಬಾದ್ ಹೈಕೋರ್ಟ್
ಪ್ರವಾಸ ಯಾಕೆ?
ಅಕ್ಟೋಬರ್ ತಿಂಗಳಿನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಈ ವೇಳೆ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನಮಾನ ಸಿಗಬೇಕು. ಪುತ್ರನಿಗೆ ಸಚಿವ ಸ್ಥಾನ ಸಿಕ್ಕಿದರೆ ಹೈಕಮಾಂಡ್ ಹೇಳಿದಂತೆ ಕೇಳುವುದು. ಕೆಲಕಾಲ ರಾಜ್ಯಪಾಲರಾಗಿ ರಾಜಕೀಯದಿಂದ ದೂರ ಉಳಿಯುವುದು. ಒಂದು ವೇಳೆ ಅಂದುಕೊಂಡಂತೆ ಆಗದಿದ್ದರೆ ಕೊನೆಯದಾಗಿ ರಾಜ್ಯಪ್ರವಾಸ ಹೊರಡುವುದು. ಇದನ್ನೂ ಓದಿ : ಜಿ.ಟಿ.ದೇವೇಗೌಡ ಪಕ್ಷ ತೊರೆದರೆ ಜೆಡಿಎಸ್‍ಗೆ ನಷ್ಟ : ವೈ.ಎಸ್.ವಿ.ದತ್ತ
ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಸಮಯದಲ್ಲೇ ಪುತ್ರನಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಎಸ್‍ವೈ ಹೈಕಮಾಂಡ್‍ಗೆ ತಿಳಿಸಿದ್ದರು. ಆದರೆ ಸದ್ಯ ಈಗ ಬೇಡ. ಈಗ ನೀಡಿದರೆ ಹಳಬರಿಗೆ ಬೇಸರವಾಗಬಹುದು. ಮುಂದೆ ನೋಡೋಣ ಎಂದು ಹೈಕಮಾಂಡ್ ನಾಯಕರು ಯಡಿಯೂರಪ್ಪನವರನ್ನು ಮನ ಒಲಿಸಿದ್ದರು ಎಂಬ ಮಾತು ಬಿಜೆಪಿ ರಾಜಕೀಯ ವಲಯದಿಂದ ಕೇಳಿ ಬಂದಿತ್ತು.