ವಿಜಯಪುರ: ಮೈತ್ರಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದೀರಿ ಯಾಕೆ ಅನ್ನೋ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆಗ ಸರ್ಕಾರ ನಡೆಸುತ್ತಿದ್ದವನು ನಾನು ಅದಕ್ಕೆ ಮಾತನಾಡುತ್ತಿದೆ. ಈಗ ನಾನು ಕೇವಲ ಸಮನ್ವಯ ಸಮಿತಿ ಅಧ್ಯಕ್ಷ ಅಷ್ಟೇ. ಈಗ ಅಷ್ಟು ಮಾತನಾಡಲು ಸಾಧ್ಯವಿಲ್ಲ. ಎಲ್ಲವನ್ನು ಅಧಿಕೃತವಾಗಿ ಹೇಳೋದಕ್ಕೆ ಆಗುತ್ತಾ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದರು.
Advertisement
Advertisement
ಇದೇ ವೇಳೆ ಘೋಷಣೆಯಾದ ಹೊಸ ತಾಲೂಕುಗಳ ರಚನೆ ವಿಚಾರದ ಕುರಿತು ಪ್ರತಿಕ್ರಿಯಸಿ ಘೋಷಣೆಯಾದ ಹೊಸ ತಾಲೂಕುಗಳಿಗೆ ತಾಲೂಕು ಪಂಚಾಯ್ತಿ ರಚನೆ, ಅಧಿಕಾರಿ, ಸಿಬ್ಬಂದಿ ನೇಮಕ ವಿಚಾರವಾಗಿಯೂ ತಮ್ಮ ಅಸಮಾಧಾನ ಹೊರ ಹಾಕಿದರು.
Advertisement
ನನ್ನ ಕ್ಷೇತ್ರದಲ್ಲಿ ಗುಳೇದಗುಡ್ಡ ತಾಲೂಕು ಘೋಷಣೆ ಆಗಿದೆ. ಆದರೆ ಬರೀ ಒಬ್ಬ ತಹಶೀಲ್ದಾರ್ ನೇಮಕ ಮಾಡಿದ್ದಾರಷ್ಟೇ. ಅವನು ಕೂಡ ಬರೀ ಇನ್ ಚಾರ್ಜ್. ಇತರೆ ಸಿಬ್ಬಂದಿ, ಕಚೇರಿ, ಕಟ್ಟಡಗಳನ್ನು ಮಾಡಿಲ್ಲ ಎನ್ನುವ ಮೂಲಕ ಮೈತ್ರಿ ಸರ್ಕಾರದ ಕಾರ್ಯವೈಖರಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
Advertisement
ಇತ್ತೀಚೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಅವರು, ಕೆಲಸ ಮಾಡೋರಿಗೆ ಮತ ಹಾಕಿ, ಕೆಲಸ ಮಾಡದವರಿಗೆ ಏಕೆ ಮತ ಹಾಕುತ್ತೀರಿ ಎಂದು ಹೇಳಿದ್ದೆ ಇದರಲ್ಲಿ ತಪ್ಪೇನಿದೆ? ಇದನ್ನೇ ಸಿಎಂ ಅವರ ಹೇಳಿಕೆಗೆ ಲಿಂಕ್ ಮಾಡಿದ್ದೀರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ವಿರುದ್ಧವೇ ಕಿಡಿಕಾರಿದ್ದರು. ಈ ಮೂಲಕ ಸಮ್ಮಿಶ್ರ ಸರ್ಕಾರದ ವಿರುದ್ಧ ತಮ್ಮಲ್ಲಿರುವ ಅಸಮಾಧಾನವನ್ನು ಬಿಚ್ಚಿಟ್ಟಿದ್ದರು.