ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ದೋಸ್ತಿ ಚರ್ಚೆ ಜೋರಾಗಿ ನಡೆಯುತ್ತಿದೆ. ಮಂಗಳವಾರ ನಡೆಯಲಿರುವ NDA ಮೈತ್ರಿ ಕೂಟಗಳ ಸಭೆಗೆ ಕುಮಾರಸ್ವಾಮಿ (HD Kumaraswamy) ಭಾಗವಹಿಸ್ತಾರೆ ಎನ್ನಲಾಗ್ತಿದ್ದು, ದೋಸ್ತಿ ರಾಜಕೀಯ ಗರಿಗೆದರಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ (BJP-JDS) ದೋಸ್ತಿ ಆಗಬಹುದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಮೊನ್ನೆಯಷ್ಟೆ ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸಭೆ ಸದನದಲ್ಲಿ ಪ್ರಧಾನಿ ಮೋದಿಯವರ ಜೊತೆ 4 ವರ್ಷಗಳ ಹಿಂದಿನ ಮಾತುಕತೆ ರಹಸ್ಯ ಬಯಲು ಮಾಡಿದ್ರು. ಕುಮಾರಸ್ವಾಮಿ ಅವರ ಈ ನಡೆ ಈಗ ದೋಸ್ತಿಯ ಬಗ್ಗೆಗಿನ ಚರ್ಚೆ ಗರಿಗೆದರುವಂತೆ ಮಾಡಿದೆ. ಕುಮಾರಸ್ವಾಮಿ ಅವರ ಈ ನಡೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಬಹುದು ಎಂಬ ಚರ್ಚೆಯನ್ನೂ ಹುಟ್ಟು ಹಾಕಿದೆ.
Advertisement
Advertisement
ಬಿಜೆಪಿ ಜೊತೆ ದೋಸ್ತಿ ಎಂಬ ಚರ್ಚೆಗಳು ನಡೆಯುತ್ತಿರೋ ಬೆನ್ನಲ್ಲೆ NDA ಸಭೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೋಗ್ತಾರಾ ಎಂಬ ಪ್ರಶ್ನೆಗಳು ಶುರುವಾಗಿದೆ. ಜುಲೈ 18ರಂದು ದೆಹಲಿಯಲ್ಲಿ NDA ಮೈತ್ರಿ ಕೂಟಗಳ ಸಭೆ ಇದೆ. ಈ ಸಭೆಗೆ ಭಾಗವಹಿಸುವ ಹಿನ್ನೆಲೆಯಲ್ಲಿ ಸೋಮವಾರ ದೆಹಲಿಗೆ ಹೆಚ್‌ಡಿಕೆ ಹೋಗ್ತಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೂ ಸೋಮಣ್ಣ ಟವೆಲ್? – ಕಾರ್ಯಕರ್ತರ ಸಭೆಯಲ್ಲಿ ಇಂಗಿತ
Advertisement
Advertisement
ದೆಹಲಿಯಲ್ಲಿ ಸೋಮವಾರ ಕೇಂದ್ರದ ನಾಯಕರ ಜೊತೆ ಚರ್ಚೆ ಆಗಬಹುದು ಅಂತ ಜೆಡಿಎಸ್ ಮೂಲಗಳು ಹೇಳ್ತೀವಿ. ಎಲ್ಲವೂ ಅಂದುಕೊಂಡಂತೆ ಆದರೆ ಮಂಗಳವಾರದ ಸಭೆಗೆ ಕುಮಾರಸ್ವಾಮಿ ಹಾಜರಾಗಿ, NDA ಮೈತ್ರಿ ಕೂಟ ಸೇರಬಹುದು ಎನ್ನಲಾಗ್ತಿದೆ. ಇದನ್ನೂ ಓದಿ: ಜು.19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ – ಲಕ್ಷ್ಮಿ ಹೆಬ್ಬಾಳ್ಕರ್
Web Stories