ರಾಯ್‌ಪುರ: ಭಾರತದಲ್ಲಿ(India) ವಾಸ ಮಾಡುವ ಪ್ರತಿಯೊಬ್ಬರು ಕೂಡ ಹಿಂದೂಗಳೇ(Hindu) ಎಂದು ಆರ್‌ಎಸ್‍ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್(Mohan Bhagwat) ಹೇಳಿದ್ದಾರೆ.
ಛತ್ತೀಸ್‍ಘಡದ ಅಂಬಿಕಾಪುರದಲ್ಲಿ ಮಾತನಾಡಿದ ಅವರು, ಭಾರತವನ್ನು ಮಾತೃಭೂಮಿ ಎಂದು ಭಾವಿಸಿ ಇಲ್ಲಿನ ಅನೇಕತೆಯಲ್ಲಿ ಏಕತೆ ಎಂಬ ಸಂಸ್ಕೃತಿಯೊಂದಿಗೆ ಜೊತೆ ಜೊತೆಯಲ್ಲಿ ಜೀವಿಸಬೇಕು ಎಂದು ಭಾವಿಸುವವರ ಜಾತಿ ಯಾವುದೇ ಆದರೂ, ಧರ್ಮ ಯಾವುದೇ ಆದರೂ, ಭಾಷೆ ಬೇರೆಯಾದರೂ, ಆಹಾರ ಪದ್ದತಿ, ಸಿದ್ದಾಂತಗಳು ವ್ಯತ್ಯಾಸ ಇದ್ದರೂ ಅವರೆಲ್ಲಾ ಹಿಂದೂಗಳೇ ಎಂದಿದ್ದಾರೆ. ಇದನ್ನೂ ಓದಿ: ಎಷ್ಟು ದುಡಿದ್ರೂ ದುಡ್ಡು, ದುಡ್ಡು ಅಂತಾಳೆ – ಹೆಂಡತಿ ಟಾರ್ಚರ್‌ಗೆ ಮಂಡ್ಯದ ಪತಿ ಆತ್ಮಹತ್ಯೆ
Advertisement
Advertisement
ಆರ್‌ಎಸ್‌ಎಸ್ ಈ ವಿಚಾರವನ್ನು 1925ರಿಂದಲೂ ಪ್ರತಿಪಾದಿಸುತ್ತಿದೆ. ಪ್ರಜೆಗಳ ನಡುವೆ ಐಕ್ಯಮತವನ್ನು ಹೆಚ್ಚಿಸುವುದೇ ಆರ್‌ಎಸ್‌ಎಸ್ ಸಿದ್ದಾಂತ ಎಂದು ಹೇಳಿದರು.
Advertisement
40 ಸಾವಿರ ವರ್ಷಗಳ ಹಿಂದೆ ಅಖಂಡ ಭಾರತದ ಭಾಗವಾಗಿದ್ದ ಎಲ್ಲರ ಡಿಎನ್‍ಎ ಒಂದೇ. ಪ್ರತಿಯೊಬ್ಬರು ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ತಪ್ಪದೇ ಪಾಲಿಸಬೇಕು. ಇತರರ ನಂಬಿಕೆ, ಸಂಪ್ರದಾಯಗಳನ್ನು ಗೌರವಿಸಬೇಕು ಎಂದು ಮೋಹನ್ ಭಾಗವತ್ ಕರೆ ನೀಡಿದ್ದಾರೆ.