ಕೋಲಾರ: ಒಕ್ಕಲಿಗ ಸಮುದಾಯಕ್ಕೆ ಶೇ.4 ಮೀಸಲಾತಿ (Reservation) ಸಾಕಾಗುವುದಿಲ್ಲ, ಶೇ.8 ಮೀಸಲಾತಿ ಹೆಚ್ಚಳ ಮಾಡಬೇಕು. ಇದಕ್ಕಾಗಿ ಹೋರಾಟ ರೂಪಿಸಲಾಗುತ್ತಿದೆ. ಎಲ್ಲರೂ ಸಿದ್ಧರಾಗಿ ಎಂದು ಹೇಳುವ ಮೂಲಕ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರು ಮೀಸಲಾತಿ ಹೋರಾಟದ ಕಿಡಿ ಹೊತ್ತಿಸಿದ್ದಾರೆ.
Advertisement
ಕೋಲಾರದಲ್ಲಿಂದು ಒಕ್ಕಲಿಗರ ಸಮುದಾಯದ (Vokkaliga Community) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಕ್ಕಲಿಗರ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: PSI ಕೇಸ್‍ನಲ್ಲಿ ನಾವು ಯಾರನ್ನು ಬಿಟ್ಟಿಲ್ಲ, ಡಿಐಜಿ ಮುಟ್ಟೋಕೆ ಸಿದ್ದರಾಮಯ್ಯಗೆ ಧಮ್ ಇದ್ಯಾ? : ಬೊಮ್ಮಾಯಿ
Advertisement
Advertisement
ಒಕ್ಕಲಿಗ ಸಮುದಾಯಕ್ಕೆ ಶೇ.12 ಮೀಸಲಾತಿ ನೀಡಬೇಕು. ನಮ್ಮ ಸಮುದಾಯಕ್ಕೆ ಶೇ.4 ಮೀಸಲಾತಿ ಸಾಲೋದಿಲ್ಲ ಎಂಬ ಕೂಗು ಹಿಂದಿನಿಂದಲೂ ಇದೆ. ಆದರೆ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮಾತನಾಡುವುದು ಬೇಡ ಎಂದು ಸುಮ್ಮನಿದ್ದೆವು. ಈಗ ಸಂವಿಧಾನದ (Constitution) ಚೌಕಟ್ಟಿನಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸುವುದಾದರೇ ನಮಗೂ ಶೇ.8 ಮೀಸಲಾತಿ ಹೆಚ್ಚಿಸಬೇಕು. ಕಾನೂನು ಸಮ್ಮತವಾಗಿ ನಮ್ಮ ಬೇಡಿಕೆ ಈಡೇರದಿದ್ದರೇ, ಹಂತ-ಹಂತವಾಗಿ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಒಂದೇ ಜಡೆ ಹಾಕಿದ್ದಕ್ಕೆ ವಿದ್ಯಾರ್ಥಿನಿಯನ್ನು ಕ್ಲಾಸ್‍ನಲ್ಲಿ ಕೂಡಿ ಹಾಕಿ ಕೂದಲು ಕತ್ತರಿಸಿದ್ರು!
Advertisement
ಅಲ್ಲದೇ ಒಕ್ಕಲಿಗರು ರಾಜಕೀಯವಾಗಿ ಮಾತ್ರ ಬೆಳೆದರೆ ಸಾಲದು ಆ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಮುಂದೆ ಹೋರಾಟದ ಸನ್ನಿವೇಶ ಒದಗಿಬಂದ್ರೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಕರೆ ನೀಡಿದ್ದಾರೆ.