ಬೆಂಗಳೂರು: ವರ್ಷ ವರ್ಷ ಹಬ್ಬ ಬರುತ್ತದೆ. ಆದರೆ ನಾಳೆಯ ಹಬ್ಬ ಮತ್ತೆ ಬರಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಎತ್ತಿನ ಹೊಳೆ ಯೋಜನೆಗೆ (Yettinahole Project) ಚಾಲನೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂತರ್ಜಲ ಹೆಚ್ಚಿಸುವ ಪ್ರಯತ್ನ ಮಾಡಿದ್ದೇವೆ. ಕೆಲವರು ನೀರು ತರಲು ಆಗುವುದಿಲ್ಲ ನಾವು ಮೀಸೆ ಬೋಳಿಸಿಕೊಳ್ಳುತ್ತೇವೆ ಎಂದಿದ್ದರು. ಈಗ ವಾಣಿ ವಿಲಾಸದವರೆಗೆ ನೀರು ಹೋಗುತ್ತಿದೆ. ಮುಂದೆ ಎಲ್ಲಾ ಕಡೆಯೂ ನೀರು ಹರಿಯಲಿದೆ ಎಂದರು.
ಪಕ್ಷದ ನಾಯಕರಿಗೆ ಮನವಿ ಮಾಡಿದ್ದೇನೆ. ಹಬ್ಬ ವರ್ಷ ವರ್ಷ ಬರುತ್ತದೆ. ಆದರೆ ನಾಳೆಯ ಹಬ್ಬ ಮತ್ತೆ ಬರುವುದಿಲ್ಲ. ಅದಕ್ಕೆ ಎಲ್ಲರೂ ಬರಬೇಕೆಂದು ಕೇಳಿಕೊಂಡಿದ್ದೇನೆ. ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾನು ಸಂಪುಟ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Punjab Economic Crisis | ವಿದ್ಯುತ್ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್, ಡೀಸೆಲ್ ಜೊತೆ ಬಸ್ ಟಿಕೆಟ್ ದರ ಏರಿಸಿದ ಪಂಜಾಬ್
ಬೆಂಗಳೂರು ಗಾರ್ಬೇಜ್ ಸಿಟಿ (Garbage City) ಎಂದು ಬಿಜೆಪಿಯವರು (BJP) ಆರೋಪ ಮಾಡುತ್ತಾರೆ. ಬಿಜೆಪಿಯವರು ಇರುವುದೇ ಆರೋಪ ಮಾಡಲು. ನಾನು ಶುದ್ಧ ಮಾಡಬೇಕು ಅಂತ ಹೊರಟಿದ್ದೇನೆ. ಇದಕ್ಕಾಗಿಯೇ ಹೈದರಾಬಾದ್, ಚೆನ್ನೈಗೆ ಹೋಗಿದ್ದೆ. ಅಲ್ಲಿನ ವ್ಯವಸ್ಥೆಯ ಬಗ್ಗೆ ನೋಡಿ ಬಂದಿದ್ದೇನೆ. ನಾನು ಆರೋಪಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮಕೆಲಸವೇ ಅವರಿಗೆ ಉತ್ತರ ಕೊಡುತ್ತದೆ ಎಂದು ಹೇಳಿದರು.
ಕನ್ನಡ ಚಿತ್ರರಂಗದಲ್ಲಿನ ಮೀಟೂ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಮೀಟೂ ಅಂದ್ರೆ ಏನು ಎಂದು ಮಾಧ್ಯಮಗಳಿಗೆ ಮರುಪ್ರಶ್ನೇ ಮಾಡಿದ ಡಿಕೆಶಿ, ಈ ಬಗ್ಗೆ ನನಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದು ಉತ್ತರಿಸಿದರು.