ಹಾಸನ: ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ (JDS) ಟಿಕೆಟ್ ಕೇಳುವ ಹಕ್ಕು ಭವಾನಿ (Bhvavani Revanna), ಸ್ವರೂಪ್ ಸೇರಿದಂತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.
Advertisement
ಹಾಸನ (Hassan) ಜಿಲ್ಲೆ ಬೇಲೂರು ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತೆ ಎಂದಿದ್ದಾರೆ. ಜೊತೆಗೆ ಕಳೆದ ಭಾನುವಾರ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD KumaraSwamy) ಸಭೆ ಕರೆದೇ ಇಲ್ಲ ಎಂದು ಇಬ್ರಾಹಿಂ ಉಲ್ಟಾ ಹೊಡೆದಿದ್ದಾರೆ. ಇದನ್ನೂ ಓದಿ: ಪಾನ್ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!
Advertisement
Advertisement
ಹೆಚ್.ಡಿ ರೇವಣ್ಣ (HD Revanna), ಹೆಚ್.ಡಿ ಕುಮಾರಸ್ವಾಮಿ, ಬಾಲಕೃಷ್ಣ, ರಮೇಶ್ ಈ ನಾಲ್ಕು ಜನ ಸಹೋದರರ ನಡುವೆ ಭಿನ್ನಾಭಿಪ್ರಾಯ ಬರುತ್ತೆ ಅಂತಾ ಯಾರಾದ್ರೂ ತಿಳಿದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಆ ನಾಲ್ಕು ಮಂದಿ ಯಾವತ್ತಿದ್ದರೂ ಒಂದೇ. ಅವರು ಹೇಗಿದ್ದಾರೆ ಅನ್ನೋದನ್ನ ಕಳೆದ 50 ವರ್ಷಗಳಿಂದಲೂ ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್, ಖಡಕ್ ಉತ್ತರ ಕೊಟ್ಟ ನಟಿ