ಜೈಪುರ್: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯ ನಂತರ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗವನ್ನು ನವೀಕರಿಸಲು ದೈಹಿಕ ಶಿಕ್ಷಣದ ಶಿಕ್ಷಕನಿಗೆ (Physical Training Instructor) ರಾಜಸ್ಥಾನ ಹೈಕೋರ್ಟ್ (Rajasthan High Court) ಅನುಮತಿ ನೀಡಿದೆ. ಅಲ್ಲದೆ ಅರ್ಜಿದಾರರು ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಒಬ್ಬ ವ್ಯಕ್ತಿಯ ಲಿಂಗದ ಗುರುತನ್ನು (Gender Identity) ಆಯ್ಕೆ ಮಾಡುವ ಹಕ್ಕು ಅವರ ವ್ಯಕ್ತಿತ್ವದ ಅತ್ಯಗತ್ಯ ಭಾಗವಾಗಿದೆ. ಅಲ್ಲದೆ ಅವರ ಸ್ವ ನಿರ್ಣಯ, ಘನತೆ ಮತ್ತು ಮೂಲಭೂತ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. ಅಲ್ಲದೆ ವ್ಯಕ್ತಿಯ ಲೈಂಗಿಕ ದೃಷ್ಟಿಕೋನ ಅಥವಾ ಲಿಂಗದ ಗುರುತಿನ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಮಾಡುವಂತಿಲ್ಲ. ಎಲ್ಲರಿಗೂ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಆನಂದಿಸಲು ಹಕ್ಕಿದೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಧಂಡ್ ತೀರ್ಪಿನ ವೇಳೆ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ಗಾಂಧಿ 3 ವರ್ಷ ಸಾಮಾನ್ಯ ಪಾಸ್‌ಪೋರ್ಟ್ ಬಳಸಲು ದೆಹಲಿ ಕೋರ್ಟ್ ಅನುಮತಿ
Advertisement
Advertisement
ಏನಿದು ಪ್ರಕರಣ?: ಹುಟ್ಟಿನಿಂದ ಹೆಣ್ಣು ಎಂದು ಗುರುತಿಸಲಾಗಿದ್ದ ವ್ಯಕ್ತಿಯೊಬ್ಬರು ಮಹಿಳಾ ವರ್ಗದಲ್ಲಿ ದೈಹಿಕ ತರಬೇತಿ ಬೋಧಕರಾಗಿ ನೇಮಕಗೊಂಡಿದ್ದರು. 32 ನೇ ವಯಸ್ಸಿನಲ್ಲಿ ಲಿಂಗದ ಗುರುತಿನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು. ನಂತರ ಲಿಂಗ ಮರುವಿನ್ಯಾಸ ಶಸ್ತ್ರಚಿಕಿತ್ಸೆಗೆ ಒಳಗಾಗಿ ಪುರುಷರಾಗಿ ಬದಲಾದರು. ಈ ಬಗ್ಗೆ ಅವರು ವೈದ್ಯರ ದೃಢೀಕರಣವನ್ನು ಪಡೆದಿದ್ದಾರೆ. ಬಳಿಕ ಅವರು ಆಧಾರ್ ಕಾರ್ಡ್‍ನಲ್ಲಿ (Aadhar Card) ತಮ್ಮ ಹೆಸರನ್ನು ಹಾಗೂ ಲಿಂಗವನ್ನು ಕಾನೂನುಬದ್ಧವಾಗಿ ಬದಲಾಯಿಸಿದ್ದಾರೆ. ಅಲ್ಲದೆ ಅರ್ಜಿದಾರರು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಆದರೆ ಮೂರು ವರ್ಷಗಳಿಂದ ಸೇವಾ ದಾಖಲೆಯಲ್ಲಿ ಹೆಸರು ಮತ್ತು ಲಿಂಗ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ